Skip to product information
1 of 1

Prof. L. S. Sheshagiri Rao

ಕಲಾಮ್ ಅವರಿಗೆ ಮಕ್ಕಳ ಪ್ರಶ್ನೆಗಳು

ಕಲಾಮ್ ಅವರಿಗೆ ಮಕ್ಕಳ ಪ್ರಶ್ನೆಗಳು

Publisher - ಸಪ್ನ ಬುಕ್ ಹೌಸ್

Regular price Rs. 95.00
Regular price Rs. 95.00 Sale price Rs. 95.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 112

Type - Paperback

ಮಕ್ಕಳು 'ಚಾಚಾ ನೆಹರು' ಎಂದು ಕರೆಯುವ ಜವಹರಲಾಲ್ ನೆಹರು ಅವರಾದ ನಂತರ ಎಳೆಯರಿಗೆ ಇಷ್ಟು ಸಮೀಪರಾದ ಬೇರೊಬ್ಬ ನಾಯಕರನ್ನು ಭಾರತವು ಕಂಡಿಲ್ಲ, ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್ ಅವರು ರಾಷ್ಟ್ರದೆಲ್ಲೆಡೆ ಇರುವ ಮಕ್ಕಳ ಸಂಪರ್ಕ ಬೆಳಸುವುದರಲ್ಲಿ, ಅವರ ಭವಿಷ್ಯವನ್ನು ಕುರಿತು ಚಿಂತಿಸುವುದರಲ್ಲಿ, ಮತ್ತು ಅವರ ಪ್ರಶ್ನೆಗಳನ್ನು ಪರಿಶೀಲಿಸುವುದರಲ್ಲಿ ಪ್ರತಿ ವಾರ ಹಲವು ಗಂಟೆಗಳನ್ನು ವಿನಿಯೋಗಿಸುತ್ತಾರೆ. ಅವರ ಭಾಷಣಗಳಲ್ಲಿ ಭವಿಷ್ಯದ ಪೀಳಿಗೆಗಳಿಗೆ ನೆರವಾಗುವ ಒಳನೋಟಗಳು ಮತ್ತು ಮಾರ್ಗದರ್ಶನ ಸಮೃದ್ಧಿಯಾಗಿರುತ್ತವೆ. ಅವರ ಕಚೇರಿಗೆ ಭೇಟಿ ಕೊಡಬೇಕೆಂದು ಅಥವಾ ತಮ್ಮ ಕಾಲೇಜಿನ ವಾರ್ಷಿಕೋತ್ಸವವನ್ನು ಬೆಳಗಲು ಒಂದು ಸಂದೇಶವನ್ನು ಕೊಡಬೇಕೆಂದು ವಿನಂತಿಸುವ ಯಾವುದೇ ಶಾಲೆಯ ತಂಡಕ್ಕೆ 'ಇಲ್ಲ' ಎಂದು ಅವರು ಹೇಳುವುದೇ ಬಹು ವಿರಳ. ಅವರು ಭಾರತದ ರಾಷ್ಟ್ರಪತಿಯಾಗುವ ಮುನ್ನ, ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೂ ಸಾಮಾನ್ಯ ಉಪಾಧ್ಯಾಯರಾಗಬೇಕೆಂಬುದೇ ಅವರ ಆಕಾಂಕ್ಷೆಯಾಗಿತ್ತು ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಕ್ಷಿಪಣಿ ವಿಜ್ಞಾನ ತಜ್ಞರಿಗೆ ಈ ಅಪೇಕ್ಷೆ ಎನ್ನುವುದು ಇನ್ನೂ ಅಚ್ಚರಿಗೊಳಿಸುವ ಸಂಗತಿ.

ವಿವಿಧ ಪ್ರವೃತ್ತಿಗಳವರು ರಾಷ್ಟ್ರಪತಿ ಸ್ಥಾನವನ್ನು ನಿರ್ವಹಿಸಿದ್ದಾರೆ. ತತ್ವಶಾಸ್ತ್ರಜ್ಞ ಡಾ. ಎಸ್. ರಾಧಾಕೃಷ್ಣನ್, ಶಿಕ್ಷಣ ತಜ್ಞ ಡಾ. ಜಾಕೀರ್ ಹುಸೇನ್‌ರಂತಹ ಬೌದ್ಧಿಕ ದೈತ್ಯರಿದ್ದರು. ವಿ.ವಿ. ಗಿರಿಯವರಂತಹ ಕಾರ್ಮಿಕ ಸಂಘಟನೆಯ ನಾಯಕರಿದ್ದರು. ಜ್ಞಾನಿ ಜೇಲ್‌ಸಿಂಗ್‌ರಂತಹ ರಾಜಕಾರಣಿಗಳಿದ್ದರು. ಆದರೆ ಈ ವರೆಗೆ ಶಸ್ತ್ರಾಸ್ತ್ರ ತಜ್ಞರೊಬ್ಬರು ಈ ಸ್ಥಾನಕ್ಕೆ ಬಂದಿರಲಿಲ್ಲ; ಇವರನ್ನು ಮೊದಲನೆಯ 'ಮಕ್ಕಳ ರಾಷ್ಟ್ರಪತಿ' ಎಂದು ಕರೆಯಬಹುದು.

ಪ್ರಾಯಶಃ ಇದೊಂದು ಸುಯೋಗದ ಸಂಗಮ. ಅರ್ಥಶಾಸ್ತ್ರಜ್ಞರು, ತಾವು ಭಾರತದ ಭವಿಷ್ಯದ ಬಗೆಗೆ ಇಷ್ಟೊಂದು ಆಶಾಭಾವನೆಯಿಂದಿರಲು ಕಾರಣ ವೃದ್ಧಾಪ್ಯವನ್ನನುಭವಿಸುತ್ತಿರುವ ಇತರ ಸಮಾಜಗಳೊಂದಿಗೆ ಹೋಲಿಸಿದರೆ ಭಾರತದಲ್ಲಿ ಕಿರಿಯರ ಪ್ರಮಾಣ ಇಷ್ಟು ಹೆಚ್ಚಾಗಿರುವುದು ಎನ್ನುತ್ತಾರೆ.

ಭಾರತದ ಮಕ್ಕಳ ಭವಿಷ್ಯಕ್ಕಾಗಿ ಡಾ. ಕಲಾಮ್ ಅವರ ಚಿಂತನೆ ಇಲ್ಲಿ ಈ ಪುಸ್ತಕದಿಂದಾಗಿ ನಿಮ್ಮ ಕೈಯಲ್ಲಿದೆ. ಇದರಲ್ಲಿ ಆರು ವಿಭಾಗಗಳಿವೆ - ಶಿಕ್ಷಣ, ವಿಜ್ಞಾನ, ಮಕ್ಕಳಿಗೆ ಸಂಬಂಧಿಸಿದ ಪ್ರಶ್ನೆಗಳು, ರಾಷ್ಟ್ರ, ಆಧ್ಯಾತ್ಮಿಕತೆ ಮತ್ತು ಸಾಮಾನ್ಯ ವಿಷಯಗಳು, ಈ ಆರು ವಿಭಾಗಗಳಿವೆ. ಡಾ. ಕಲಾಮ್‌ ಶೈಲಿಗೆ ಸಹಜವಾಗಿ ಅತ್ಯಂತ ಜಟಿಲ ವಿಚಾರಗಳೂ ಸರಳ ಭಾಷೆಯಲ್ಲಿ ರೂಪತಾಳಿವೆ. ಇಂದಿನ ಕಿರಿಯರು ಹೇಳಬಹುದಾದ ರೀತಿಯಲ್ಲಿ ಭಾಷೆಯು ತಂದೆತಾಯಿಗಳಿಗೂ ಅರ್ಥವಾಗುವಷ್ಟು ಸರಳವಾಗಿದೆ!

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
R
Roopa Shree

ಕಲಾಮ್ ಅವರಿಗೆ ಮಕ್ಕಳ ಪ್ರಶ್ನೆಗಳು