Tirupati Bhangi
Publisher -
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಸಹಜವಾದ ಮುಗ್ಧತೆ' ಮತ್ತು ಪ್ರೀತಿಯಿಂದ ಈ ಕತೆಗಳನ್ನು ಬರೆದಿದ್ದೀರ. ಇದು ಎಲ್ಲ ಒಳ್ಳೆಯ ಕತೆಗಳಲ್ಲಿರುವ ಮೂಲಭೂತವಾದ ಅಂಶ, ಆದರೆ ಇದು ಕತೆಯ ನ್ಯೂನತೆಯಾಗದಂತೆ ಕಾಯ್ದುಕೊಳ್ಳುವ ಎಚ್ಚರವೂ ಕತೆಗಾರನಿಗೆ ಮುಖ್ಯ. ಇಲ್ಲಿನ ಕತೆಗಳು ನಮ್ಮೊಳಗಿನ ಬಡತನದ ಸುಖವನ್ನೂ, ಕೃಷ್ಣೆಯ ಹರಿವನ್ನೂ ಕೈರೊಟ್ಟಿಯ ಹಂಬಲವನ್ನೂ ಮೂಡಿಸುವಲ್ಲಿ ಸಾರ್ಥಕವಾಗಿದೆ. ನಿಮ್ಮಿಂದ ಹೆಚ್ಚಿನ ಕಥನಗಾರಿಕೆಯ ನಿರೀಕ್ಷೆಯನ್ನು ಹುಟ್ಟಿಸಿದೆ.
- ವಿಕ್ರಮ್ ಹತ್ವಾರ್
ಈ ಉತ್ಸಾಹಿ ದಣಿವರಿಯದ ಕಥೆಗಾರನ ಕಥಾ ಸಂಕಲನ 'ಕೈರೊಟ್ಟಿ' ಶೀರ್ಷಿಕೆಯಲ್ಲಿಯೇ ದುಡಿಯುವ ಕೈ ಇರುವಂತೆಯೇ ದುಡಿಮೆಯ ಪ್ರತಿಫಲ ರೊಟ್ಟಿಯೂ ಇದೆ. ಬಾಗಲಕೋಟೆ ನೆಲದ ಭಾಷೆಯಲ್ಲಿ ಅರಳಿರುವ ಇಲ್ಲಿನ ಎಲ್ಲ ಕಥೆಗಳು ಧ್ವನಿಸುವುದು ಜಾತಿ ವ್ಯವಸ್ಥೆಯ ಹಾಗೂ ಸಾಮಾಜಿಕ ಅಸಮಾನತೆಯ ಕರಾಳ ಮುಖಗಳತ್ತ, ಕಥೆಯನ್ನು ಓದಿದೊಡನೆ ತಿರುಪತಿ ಭಂಗಿ ಸಮಾಜಮುಖಿ ಹಾಗೂ ಭರವಸೆಯ ಕಥೆಗಾರ ಅನಿಸಿತು.
-ಕುಂವೀ
ತಿರುಪತಿ ಭಂಗಿ ಉತ್ಸಾಹಿ ಬರಹಗಾರ, ಬರಹಗಾರನಾದವನಿಗೆ ಬದುಕನ್ನು ಬಿಟ್ಟಕಣ್ಣಿಂದ ನೋಡುವ ಉಮೇದು, ನೋಡಿದ್ದನ್ನು ಒಳಮನಸ್ಸಿಗಿಳಿಸಿಕೊಂಡು ಪರಿಭಾವಿಸುವ ಪರಿ ಇರಬೇಕಾಗುತ್ತದೆ. ಕಂಡದ್ದನ್ನು ಕಂಡ ಹಾಗೆಯೇ ಹೇಳುವುದಲ್ಲ. ಅದನ್ನು ಸೋಸಿ ಸಾರಗೊಳಿಸಿ, ಅದನ್ನೊಂದು ಕವಿತೆ, ಕತೆ, ಕಾದಂಬರಿ ಎಂಬ ಕಸುಬುದಾರಿಕೆಯಲ್ಲಿ ಕನ್ನಡಿಯೊಳಗೆ ಪ್ರತಿಫಲಿಸುವಂತೆ ಲೇಖಕನ ಮಾಡುವ ಸಾಮರ್ಥ್ಯ ವ್ಯಕ್ತವಾಗುತ್ತದೆ. ಅದನ್ನು ಕಟ್ಟಿಕೊಳ್ಳುವ ಉಮೇದು ತಿರುಪತಿ ಭಂಗಿಯಲ್ಲಿ ಧಾರಾಳವಾಗಿ ಕಂಡುಬರುತ್ತಿದೆ.
ಡಾ. ಬಂಜಗೆರೆ ಜಯಪ್ರಕಾಶ