Dr. Mahabaleshwar Rao
Publisher -
Regular price
Rs. 190.00
Regular price
Rs. 190.00
Sale price
Rs. 190.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಉತ್ತಮ ತಂದೆ ತಾಯಿಗಳಾಗುವುದು ಹೇಗೆ? ಎಂದು ತಿಳಿಸುವ ಪುಸ್ತಕ ಇದಲ್ಲ. ಮಗುವನ್ನು ಯಾವ ಮಾಧ್ಯಮದ ಶಾಲೆಗೆ ಸೇರಿಸಬೇಕು ಎಂಬ ಬಗ್ಗೆ ಸಲಹೆ ನೀಡುವ ಕೃತಿಯೂ ಇದಲ್ಲ. ವಿವಿಧ ಬಗೆಯ ಪಠ್ಯಕ್ರಮಗಳ ಬಗ್ಗೆ ವಿವೇಚಿಸುವುದೂ ಇದರ ಉದ್ದೇಶವಲ್ಲ. ಸರಕಾರಿ ಅಥವಾ ಖಾಸಗಿ ಶಾಲೆಯ ಆಯ್ಕೆಯ ಚರ್ಚೆ ಈ ಪುಸ್ತಕದ ಗುರಿಯಲ್ಲ. ಮಕ್ಕಳು ವಿದ್ಯಾವಂತರಾಗುವಲ್ಲಿ ಪಾಲಕರ ಪಾತ್ರ ಹಾಗೂ ಜವಾಬ್ದಾರಿಗಳನ್ನು ಚರ್ಚಿಸುವುದು ಈ ಕೃತಿಯ ಮುಖ್ಯ ಕೇಂದ್ರ. ಹಾಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳನ್ನು ಕೈ ಹಿಡಿದು ನಡೆಸಬೇಕೇ? ಕೈ ಬಿಟ್ಟು ನಡೆಸಬಹುದೇ? ಎಂಬುದನ್ನು ಅಧ್ಯಯನ ಹಾಗೂ ಅನುಭವದ ಆಧಾರದಲ್ಲಿ ಪರಾಮರ್ಶಿಸುವುದು ಈ ಕೃತಿಯ ಪ್ರಧಾನ ಉದ್ದೇಶ. ಸದ್ಯದ ಸಾಮಾಜಿಕ ಸಂದರ್ಭದಲ್ಲಿ ಆಧುನಿಕ ಶಿಕ್ಷಣದ ಮಹತ್ವ, ಶಾಲೆಗಳು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಎದುರಿಸುತ್ತಿರುವ ವೈಫಲ್ಯ ಹಾಗೂ ಹೊಣೆಯರಿತ ಪಾಲಕರು ಮಕ್ಕಳ ಗುಣಾತ್ಮಕ ಶಿಕ್ಷಣದ ದೃಷ್ಟಿಯಿಂದ ಶಾಲಾ ಶಿಕ್ಷಣದಲ್ಲಿ ಮಾಡಬೇಕಾದ ಮಧ್ಯಪ್ರವೇಶವನ್ನು ನುರಿತ ಶಿಕ್ಷಣ ಚಿಂತಕ ಡಾ. ಮಹಾಬಲೇಶ್ವರ ರಾವ್ ಈ ಕೃತಿಯಲ್ಲಿ ಸ್ವಾರಸ್ಯಕರವಾಗಿ ಮತ್ತು ಅಷ್ಟೇ ಗಂಭೀರವಾಗಿ ಪರಾಮರ್ಶಿಸಿದ್ದಾರೆ. ಮಕ್ಕಳ ಶಿಕ್ಷಣದಲ್ಲಿ ಆಸಕ್ತರಾದವರೆಲ್ಲರೂ ಚಿಂತನ ಮಂಥನ ಮಾಡಲು ಈ ಕೃತಿ ಆಹ್ವಾನಿಸುತ್ತದೆ.
