Krishnamurthy Hanuru
ಕಾಲಯಾತ್ರೆ
ಕಾಲಯಾತ್ರೆ
Publisher - ಅಂಕಿತ ಪುಸ್ತಕ
- Free Shipping Above ₹400
- Cash on Delivery (COD) Available*
Pages - 120
Type - Paperback
Couldn't load pickup availability
ಹನೂರರ ಹೊಸ ಕಾದಂಬರಿ ಎಲ್ಲ ರೀತಿಯಲ್ಲೂ ಹೊಸತು. ಯಾಕೆಂದರೆ ಅವರು
ತಮ್ಮ ಹಳೆಯ ಯಶಸ್ವೀ ಪ್ರಯೋಗಗಳನ್ನು ಪುನರಾವರ್ತಿಸದೆ ಹೊಸ ದಾರಿಯನ್ನು
ಹಿಡಿದು ಹೊಸ ರೀತಿಯ ಅನುಭವಗಳನ್ನು ತಮ್ಮ ಅಪರೂಪದ ಕಥನಕಲೆಯ
ಮೂಲಕ ನಿರೂಪಿಸಿದ್ದಾರೆ. ಅವರ ಹಿಂದಿನ ಕಾದಂಬರಿಗಳು ಪ್ರಧಾನವಾಗಿ ಗ್ರಾಮೀಣ
ಬದುಕನ್ನು ಅನ್ವೇಷಿಸುತ್ತಿದ್ದವು. ಈ ಸಲ ಅವರ ಕಥನಕಲೆ ಮಹಾನ್ ನಗರದ ಚಕ್ರವ್ಯೂಹದ ಅನುಭವವನ್ನು ಗ್ರಾಮಗಳ ಹಿನ್ನೆಲೆಯಿಂದ ಬಂದ ಅಮಾಯಕ ಪಾತ್ರಗಳ ಬೆರಗುಗಣ್ಣುಗಳಿಂದ ಚಿತ್ರಿಸುತ್ತದೆ. ಈ ಬಗೆಯ ನಿರೂಪಣೆಗೆ ಕೆಲವು ಪೂರ್ವ ಮಾದರಿಗಳಿದ್ದರೂ ಹನೂರರು ಅದನ್ನು ನಿರೂಪಿಸಿರುವ ಬಗೆ ವಿನೂತನ. ಅವರು ಚಿತ್ರಿಸಿರುವ ನಗರ ಗ್ಲೋಬೀಕರಣದ ತೊತ್ತಳತುಳಿತದಡಿ ನುಚ್ಚುನೂರಾಗುತ್ತಿರುವ ಮಾನವರೂಪೀ ರೋಬೋಗಳ ನಗರ. ಮಾನವೀಯತೆಯ ಕೊನೆಯ ವಾರಸುದಾರರಾದ ವಿನಾಶಗೊಳ್ಳುತ್ತಿರುವ ಹಳ್ಳಿಯ ಅಮಾಯಕರು ಹೇಗೆ ಅದರೊಡನೆ ಮುಖಾಮುಖಿಯಾಗುತ್ತಾರೆ ಎಂಬುದನ್ನು ತಮ್ಮ ಸಮರ್ಥ ಭಾಷಿಕ ಸಂಪನ್ಮೂಲಗಳನ್ನು ಬಳಸಿ ಹನೂರರು ಅದರ ದುರಂತಮಯ ಮತ್ತು ಕರಾಳ ದರ್ಶನವನ್ನು ನಮಗೆ ನೀಡುತ್ತಾ ಹದಗೆಟ್ಟ ಸಮಕಾಲೀನ ಬದುಕಿಗೆ ಅದರ ಹದಗೆಟ್ಟ ಮೋರೆಯನ್ನು ಮುಲಾಜುಗಳಿಲ್ಲದೆ ಈ ಕೃತಿಯ ಕನ್ನಡಿಯಲ್ಲಿ ತೋರಿಸುತ್ತಾರೆ.
ಹೆಚ್. ಎಸ್. ಶಿವಪ್ರಕಾಶ್
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.