Vikrama Hatvara
ಕಾಗೆ ಮೇಷ್ಟ್ರು
ಕಾಗೆ ಮೇಷ್ಟ್ರು
Publisher - ವೀರಲೋಕ ಬುಕ್ಸ್
- Free Shipping Above ₹300
- Cash on Delivery (COD) Available
Pages - 108
Type - Paperback
Couldn't load pickup availability
ಈ ಕ್ಷಣದ ವಾಸ್ತವದಲ್ಲಿ ಅಸ್ತಿತ್ವದಲ್ಲಿರದ ನಕ್ಷತ್ರದ ಬೆಳಕಿನಲ್ಲಿ ಸಾವಿನ ನಿಗೂಢತೆಯನ್ನು ಅರಿಯಲು ಹೊರಟಿರುವ ಕಾಗೆ ಮೇಷ್ಟ್ರು, ಬೆಳದಿಂಗಳ ಮಳೆಯಲ್ಲಿ ಬೆತ್ತಲಾಗಿ ದಾಟದಿದ್ದರೆ ಸುಟ್ಟುಹೋಗುವ ಎಚ್ಚರಿಕೆ ನೀಡುತ್ತ ಕಾಮದ ಹೊಳೆಯೇ ಆಗಿಬಿಡುವ ಕತ್ತಲ ಕೆರೆಯ ಚೆಲುವೆ, ಅಪರಿಚಿತರ ಮೇಲೆ ಜನ್ಮಾಂತರ ದ್ವೇಷ ಕಾರುತ್ತಿರುವವರ ನಡುವೆ ವಿಧಿಯ ಆಜ್ಞೆಯಂತೆ ನರಳುತ್ತಿರುವ ವಾಚ್ ಮನ್ ಮುನಿರಾಜು, ಮಗು ಹೆರುವ ನೋವು ಮತ್ತು ಹೊರುವ ತಾಯ್ತನದ ಸಂತೋಷವನ್ನು ಆಸೆ ಪಡುವ ಸರಿತಾ, ಸಿನೆಮಾ ಶೂಟಿಂಗಿನಲ್ಲಿ ತನಗಿಟ್ಟ ಬಣ್ಣದ ಹೆಸರಿನಲ್ಲಿ ತನ್ನ identity ಕಳೆದುಕೊಂಡ ಮಂದಾರ, ಎಲ್ಲರೂ ಬದುಕನ್ನು ಕಟ್ಟಿಕೊಳ್ಳುತ್ತಿರುವುದು ಅಸಂಗತ ಸಮುದಾಯದಲ್ಲಿ. ದೈನಿಕ ಜಗತ್ತಿನ ವಿಸ್ಮಯಗಳಿಗೆ ಸ್ಪಂದಿಸುವುದನ್ನೇ ಕಳೆದುಕೊಂಡ, ಅನುಕಂಪವನ್ನು ನಟಿಸುವ ವರಸೆಯನ್ನು ರೂಢಿಸಿಕೊಳ್ಳುತ್ತ ಕಾಲಯಾಪನೆ ಮಾಡುತ್ತಿರುವ ಟೊಳ್ಳು ಮನುಷ್ಯ ಸಮುದಾಯದ ನಡುವೆ - ಒಂಟಿಯಾಗಿರುವ ಜೀವಪ್ರೇಮಿಗಳು ಸಂಸಾರದ ಸುಖ, ದುಃಖದಲ್ಲಿ ತೊಡಗಿಕೊಂಡು ಮಾನವೀಯ ಸಾಧ್ಯತೆಗೆ ತೆರೆದುಕೊಳ್ಳುವಂತೆ ಒತ್ತಾಯಿಸುವುದೇ ಇಲ್ಲಿನ ಕಥೆಗಳ ಮುಖ್ಯ ತಾತ್ವಿಕ ಕಾಳಜಿಯಾಗಿದೆ. ಇಂಥ ಅಪೂರ್ವ ಸಂಭಾವ್ಯತೆಯನ್ನು ಕಥೆಗಾರನೊಬ್ಬನ ಕಾವ್ಯಾತ್ಮಕತೆ ಸಾಧಿಸಿದ್ದು ವಿಶೇಷವಾಗಿದೆ.
- ಶ್ರೀಧರ ಬಳಗಾರ
Share


Subscribe to our emails
Subscribe to our mailing list for insider news, product launches, and more.