Praveena Kumara Basrur
ಕಾಡು ಕಾಯೋ ಕೆಲಸ
ಕಾಡು ಕಾಯೋ ಕೆಲಸ
Publisher - ರವೀಂದ್ರ ಪುಸ್ತಕಾಲಯ
- Free Shipping Above ₹250
- Cash on Delivery (COD) Available
Pages - 144
Type - Hardcover
ತಮ್ಮ ವೃತ್ತಿ ಜೀವನದ ಅನುಭವಗಳಿಂದ ಪ್ರೇರಿತರಾಗಿ ನನ್ನ ಪುತ್ರಸಮಾನರಾದ ಪ್ರವೀಣ ಕುಮಾರ್ ಬನ್ಸೂರ್ ಇವರು 'ಕಾಡು ಕಾಯುವ ಕೆಲಸ'ದಲ್ಲಿ ಒದಗಬಹುದಾದ ನೋವು-ನಲಿವುಗಳನ್ನು ಈ ಪುಸ್ತಕದಲ್ಲಿ ಅತ್ಯಂತ ಸೂಕ್ಷ್ಮವಾಗಿ ಮತ್ತು ರೋಚಕವಾಗಿ ಕಥಾ ರೂಪದಲ್ಲಿ ದಾಖಲಿಸಿದ್ದಾರೆ. ನಾನು ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಕುಮಟಾದಲ್ಲಿ ಹಲವಾರು ತಿಂಗಳು ವಾಸಮಾಡಬೇಕಾಗಿ ಬಂದಾಗ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರ ನಿಕಟ ಸಂಪರ್ಕದಲ್ಲಿದ್ದುದರಿಂದ ಇವರ ಚಟುವಟಿಕೆಗಳನ್ನೆಲ್ಲಾ ಗಮನಿಸಿದ್ದೇನೆ. ಹಳೆಯ ದಿನಗಳನ್ನು ಮತ್ತೆ ನೆನಪಿಸಿಕೊಳ್ಳುವಂತೆ, ಪಕ್ಕಾ ವೃತ್ತಿಪರ ಬರಹಗಾರರಂತೆ ಕಥೆಯನ್ನು ಮನೋಜ್ಞವಾಗಿ ನಿರೂಪಿಸಿದ್ದಾರೆ. ಇವರ ಈ ಮೊದಲ ಪುಸ್ತಕದಲ್ಲಿನ ಬರವಣಿಗೆಯ ಶೈಲಿಯನ್ನು ಗಮನಿಸಿದರೆ, ಸಾಹಿತ್ಯಕ್ಷೇತ್ರದಲ್ಲಿ ಇವರಿಗೆ ಮುಂದೆ ಉಜ್ವಲ ಭವಿಷ್ಯವಿದೆಯೆಂದು ನನ್ನ ನಂಬಿಕೆ.
ತಮ್ಮ ಕಾರ್ಯದೊತ್ತಡದ ನಡುವೆಯೂ ಬಹುಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಇವರ ಕೈಯಿಂದ ಇನ್ನಷ್ಟು ಒಳ್ಳೆಯ ಕೆಲಸಗಳು ಆಗಲಿ; ಆ ಅನುಭವಗಳು ಬರಹದ ರೂಪದಲ್ಲಿ ನಮಗೆ ಓದಲು ಸಿಗಲಿ; ವನಸಂಪತ್ತನ್ನು ರಕ್ಷಿಸುತ್ತಿರುವ ಎಲ್ಲರಿಗೂ ಇವರ ಬರಹಗಳಿಂದ ಪ್ರೇರಣೆ ಸಿಗಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ.
-ದುರ್ಗೇಶ್ ಚಂದಾವರ್ಕರ್
ಚೇರ್ಮನ್, ದಿ ಶ್ಯಾಮರಾವ್ ವಿಠಲ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಮುಂಬೈ.
Share
Subscribe to our emails
Subscribe to our mailing list for insider news, product launches, and more.