Anupama Prasad
Publisher - ಅಹರ್ನಿಶಿ ಪ್ರಕಾಶನ
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಜೋಗತಿ ಜೋಳಿಗೆ ಅನುಪಮಾ ಪ್ರಸಾದ್ ಅವರ ನಾಲ್ಕನೆಯ ಕಥಾಸಂಕಲನ. ಇದರಲ್ಲಿ ಒಟ್ಟು ಎಂಟು ಕತೆಗಳಿದ್ದು ಸಬಿತಾ ಬನ್ನಾಡಿಯವರ ಒಂದು ಮೌಲಿಕ ಮುನ್ನುಡಿ ಕೂಡ ಇದರಲ್ಲಿದೆ. ಜೋಗತಿ ಜೋಳಿಗೆ ಮತ್ತು ಇಸುಮುಳ್ಳು ಕತೆಗಳು ಪ್ರಧಾನವಾಗಿ ಸ್ತ್ರೀಯರ ಬದುಕಿನ ಕತ್ತು ಹಿಚುಕುವುದಕ್ಕೇ ಇರುವ ಲೈಂಗಿಕತೆ ಮತ್ತು ಪ್ಯೂರಿಟನ್ ಕಾನ್ಸೆಪ್ಟ್ (ಪಾವಿತ್ರ್ಯದ ಪರಿಕಲ್ಪನೆ)ಯನ್ನು ಪರಸ್ಪರ ಒಂದರಿಂದ ಇನ್ನೊಂದನ್ನು ಮುಕ್ತಗೊಳಿಸುವ ಜೀವನದೃಷ್ಟಿಯನ್ನೇ ಕೇಂದ್ರವಾಗಿರಿಸಿಕೊಂಡ ಕತೆಗಳಾದರೆ ಡೇಗೆ ಬಾಡಿಗೆ ತಾಯ್ತನವನ್ನು, ದಾರಿ, ಆನೆ ಬಂತೊಂದಾನೆ ಮತ್ತು ಸೂರು ಕತೆಗಳು ಪರಿಸರದ ಮೇಲೆ ಮನುಷ್ಯನ ಆಕ್ರಮಣವನ್ನು, ಆ ಜೀವದ ಅಪೂರ್ಣ ಸ್ವಗತಗಳು ಕತೆ ಮಂಗಳಮುಖಿಯರು ಎಂದು ನಾಮಕರಣಗೊಂಡ ಲೈಂಗಿಕ ಅಲ್ಪಸಂಖ್ಯಾತರನ್ನು ಕೇಂದ್ರವಾಗಿರಿಸಿಕೊಂಡ ಕತೆಗಳು. ಸೈತಾನನ ಬಲೆ ಕತೆ ಹಿಂದೂ-ಮುಸ್ಲಿಂ ಸಂಬಂಧದ ಮೇಲಿದೆ. ಕೇಂದ್ರ ಎಂದು ಸ್ಪಷ್ಟಪಡಿಸುವಷ್ಟು ನಿಚ್ಚಳವಾಗಿ ಇಲ್ಲಿನ ವಿವರಗಳು ಮತ್ತು ಕಥಾನಕದ ನಡೆ ಏಕಮುಖವಾಗಿ ಇಡಿಕ್ಕಿರಿದಿಲ್ಲ ಎಂಬುದು ಈ ಕತೆಗಳ ಹೆಚ್ಚುಗಾರಿಕೆಯಾದರೂ ನುರಿತ ಕತೆಗಾರ್ತಿಯಾಗಿರುವ ಅನುಪಮಾ ಅವರಿಗೆ ಈ ಬಗೆಯ ಶಿಲ್ಪ ಒದಗಿಸುವುದೇನೂ ವಿಶೇಷ ಶ್ರಮದ ಕೆಲಸವಲ್ಲ. ಎಲ್ಲ ವಿವರಗಳಾಚೆ, ಬದುಕಿನ ಸಂಕೀರ್ಣ ಚಿತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಹಜ ತುಡಿತದ ಚಾಚುವಿಕೆಗೂ ಹೊರತಾಗಿ (ವಿರುದ್ಧವಾಗಿ) ಇಲ್ಲಿನ ಇಸುಮುಳ್ಳು, ಸೈತಾನನ ಬಲೆ ಮತ್ತು ಜೋಗತಿ ಜೋಳಿಗೆ ಕತೆಗಳು ಪ್ರಧಾನ ಧಾರೆಯತ್ತಲೇ (ಕೇಂದ್ರದತ್ತಲೇ) ಮರಳುವುದು ಗಮನಾರ್ಹವಾಗಿದೆ.
