Skip to product information
1 of 2

Yandamori Veerndranath, To Kannada : Yatiraj Veerambudhi

ಜ್ಞಾನವು ಕಡೆದ ಶಿಲ್ಪ

ಜ್ಞಾನವು ಕಡೆದ ಶಿಲ್ಪ

Publisher - ವಸಂತ ಪ್ರಕಾಶನ

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 126

Type - Paperback

8ನೆಯ ತರಗತಿಗೆ ಸೇರಲು ಅಗತ್ಯವಾಗಿದ್ದ ಫೀಜನ್ನೂ ಕಟ್ಟಲು ಸಾಧ್ಯವಾಗದ ಬಡತನದಲ್ಲಿ ಬೆಂದವರು ಡಾ. ತಿರುಪತಿ ಪಾಣಿಗ್ರಾಹಿ, ತಮ್ಮ ಅಪಾರವಾದ ಕಷ್ಟಕಾರ್ಪಣ್ಯದ ಬಾಲ್ಯದ ಬದುಕಿನಲ್ಲಿ ಹೊಟೇಲುಗಳಲ್ಲಿ ಟೇಬಲ್ಲು ಲೋಟಗಳನ್ನು ತೊಳೆದು ಹಿಟ್ಟನ್ನೂ ರುಬ್ಬಿದವರು ಅವರು; ಸರಿ ರಾತ್ರಿ 12 ಗಂಟೆಯವರೆಗೆ ಪಾನ್ ಬೀಡಾ ಅಂಗಡಿಯನ್ನೂ ನಡೆಸಿದವರು ಅವರು; ಸಾರಾಯಿ ಭಟ್ಟಿ ಇಳಿಸುವ ಕೆಲಸವನ್ನು ಸಹ ಮಾಡಿದವರು ಅವರು. ಸಿಗರೇಟು, ಮದ್ಯ, ಇಸ್ಪೀಟಿನಂತಹ ದೌರ್ಬಲ್ಯಗಳಿಂದ ಬಹು ದೂರವಿದ್ದ ಅವರು, ನಂತರದ ದಿನಗಳಲ್ಲಿ, ಗುತ್ತಿಗೆ ಕೆಲಸದ ಕಾಂಟ್ರಾಕ್ಟ್ ವ್ಯವಹಾರ ನಡೆಸುತ್ತ ಬಹು ಅಪರೂಪದ ಯಶಸ್ಸನ್ನು ತಮ್ಮದಾಗಿಸಿಕೊಂಡರು. ಇಂದು ಅವರ ಹೆಸರಿನಲ್ಲಿ ಮೂರು ಮೆಡಿಕಲ್ ಕಾಲೇಜುಗಳು, ಆಸ್ಪತ್ರೆಗಳು, ಇಂಜಿನಿಯರಿಂಗ್‌ ಕಾಲೇಜುಗಳು ರಾರಾಜಿಸುತ್ತ ಜನಸಮುದಾಯಕ್ಕೆ ಅಪೂರ್ವ ಸೇವೆಯನ್ನು ಸಲ್ಲಿಸುತ್ತಿವೆ.

ಇದು ಹೆಸರಾಂತ ಕಾದಂಬರಿಕಾರ ಡಾ. ಯಂಡಮೂರಿ ವೀರೇಂದ್ರನಾಥ್ ಅವರು ಪ್ರಖ್ಯಾತ ಶಿಕ್ಷಣ ಕ್ಷೇತ್ರದ ಧುರೀಣ ಡಾ. ತಿರುಪತಿ ಪಾಣಿಗ್ರಾಹಿ ಅವರ ಅಪಾರ ಕುತೂಹಲ ಉಕ್ಕಿಸುವ ಬದುಕನ್ನು ಸ್ವತಃ ತಿರುಪತಿಯವರೇ ಬರೆದಂತೆ ಒಂದು ಅನನ್ಯ ಕಾದಂಬರಿಯಂತೆಯೇ ಚಿತ್ರಿಸಿರುವ ಕೃತಿಯಾಗಿದೆ. ಕಡು ಕಷ್ಟಗಳನ್ನು ವಿವೇಚನೆಯಿಂದ ಪ್ರಾಮಾಣಿಕ ಪರಿಶ್ರಮಗಳಿಂದ ದಾಟಿ ಅದ್ಭುತ ಯಶಸ್ಸನ್ನು ಸಾಧಿಸಿದ ಸಾಧಕನ ಕತೆಯಿದು.

ಎಂದಿನಂತೆ ಯಂಡಮೂರಿಯವರ ವಿಶಿಷ್ಟ ಚಿಂತನೆಗಳು ಕೃತಿಯ ಉದ್ದಕ್ಕೂ ಹರಿದಿದ್ದು ಓದುಗರಲ್ಲಿ ವಿಶೇಷವಾದ ಒಳನೋಟಗಳನ್ನು ಮಿಂಚಿಸುತ್ತವೆ. ನಿಜಕ್ಕೂ ಇದು ಯುವಜನತೆಯು ತನ್ನ ಬದುಕನ್ನು ಭವ್ಯವಾಗಿ ಕಟ್ಟಿಕೊಳ್ಳಲು ಪ್ರಖರವಾದ ಪ್ರೇರೇಪಣೆ ನೀಡುವ ಕೃತಿಯಾಗಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)