Skip to product information
1 of 2

Dr. M. Venkataswamy

ಜಗತ್ತಿನ ಭೀಕರ ಯುದ್ಧಗಳು

ಜಗತ್ತಿನ ಭೀಕರ ಯುದ್ಧಗಳು

Publisher - ವೀರಲೋಕ ಬುಕ್ಸ್

Regular price Rs. 495.00
Regular price Rs. 495.00 Sale price Rs. 495.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 408

Type - Paperback

ಇತಿಹಾಸದ ಉದ್ದಕ್ಕೂ ಯುದ್ಧ ನಿರ್ವಾಕರು (ವಾರ್ ಮಾಂಗರ್ಸ್), ಅಂದರೆ ರಾಜರು, ರಾಜಕೀಯ ನಾಯಕರು, ಸೈನ್ಯ ಪಡೆಗಳ ಅಧಿಕಾರಿಗಳು ಎಲ್ಲರೂ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಾರೆ. ಆದರೆ, ಕುದರೆಗಳು, ಆನೆಗಳು ಮತ್ತು ಕಾಲಾಳುಗಳು ಅಂಕಿಸಂಖ್ಯೆಗಳಲ್ಲಿ ಮಾತ್ರ ದಾಖಲಾಗುತ್ತಾರೆ. ಭೂ- ಇತಿಹಾಸದಲ್ಲಿ ಜಗತ್ತಿನಾದ್ಯಂತ ಭೂಮಿಯನ್ನು ವಶಪಡಿಸಿಕೊಳ್ಳುವುದಕ್ಕಾಗಿ, ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವುದಕ್ಕಾಗಿ ಯುದ್ಧಗಳು ನಡೆದವು, ಈಗಲೂ ನಡೆಯುತ್ತಿವೆ. ಮುಂದೆಯೂ ನಡೆಯುತ್ತವೆ. ಕೃತಿಯಲ್ಲಿನ ಕೆಲವು ಯುದ್ಧಗಳು ರಾಜರು/ಸಾಮ್ರಾಜ್ಯಶಾಹಿಗಳು ಮತ್ತು ಸರ್ಕಾರಗಳು ಜನರ ಮೇಲೆ ಹೆಚ್ಚೆಚ್ಚು ತೆರಿಗೆಗಳನ್ನು ಏರಿದ ಕಾರಣಕ್ಕೆ (ಫ್ರಾನ್ಸ್‌ನಲ್ಲಿ) ಆಂತರ್ಯುದ್ಧಗಳು ನಡೆದವು; ಸಾವಿರಾರು, ಲಕ್ಷಾಂತರ ಜನರು ಸತ್ತರು. ಜನರು ರಾಜರನ್ನು ಹಿಡಿದು ಕೊಂದರು. ಮುಂದೆ ಇದೇ ಕಾರಣಗಳಿಗೆ ಯುದ್ಧಗಳು ನಡೆಯಲಿವೆ. ಎಲ್ಲಾ ಕಾಲದಲ್ಲೂ ಜಗತ್ತಿನ ಯಾವುದೇ ಪ್ರದೇಶದ ರಾಜರು, ಧರ್ಮ ಸಂಸ್ಥಾಪಕರು, ವ್ಯಾಪಾರಿಗಳು, ಹಣವಂತರು; ಇತ್ತೀಚೆಗೆ ರಾಜಕಾರಣಿಗಳು, ಸಿನಿಮಾ ನಟರು, ಕ್ರಿಕೆಟಿಗರು, ಭ್ರಷ್ಟ ಅಧಿಕಾರಿಗಳು ಆರಾಮಾಗಿ ಕುಳಿತು ಐಷಾರಾಮಿ ಬದುಕನ್ನು ಅನುಭವಿಸುತ್ತಿದ್ದಾರೆ.

ವಿಪರ್ಯಾಸವೆಂದರೆ ಇವರ್ಯಾರು ಮಣ್ಣು-ಕೆಸರಿನ ಜೊತೆಗೆ, ಕಾರ್ಖಾನೆಗಳ ಜೊತೆಗೆ ಬಿಸಿಲು ಮಳೆ ಗಾಳಿಯಲ್ಲಿ ದುಡಿದವರಲ್ಲ. ಜಗತ್ತನ್ನು ಕಟ್ಟಿದವರು ಮತ್ತು ಕಟ್ಟುತ್ತಿರುವವರೆಂದರೆ ಹೊಟ್ಟೆಗೆ ಅನ್ನ, ಉಡಲು ಬಟ್ಟೆ, ಮಲಗಲು ವಸತಿ ಇಲ್ಲದೆ ದುಡಿದು ಜಗತ್ತನ್ನು ಕಟ್ಟಿದವರು ಬಡವರು ಮತ್ತು ಕಾರ್ಮಿಕರು. ಪಿರಮಿಡ್‌ ಗಳಿಂದ ಹಿಡಿದು ಯಾವುದೇ ನಾಗರಿಕ ತೊಟ್ಟಿಲುಗಳನ್ನು ಕಟ್ಟಿ ಬೆಳೆಸಿದವರು ಬಡವರು, ಕಾರ್ಮಿಕರು, ರೈತರು ಮತ್ತು ಮಹಿಳೆಯರು. ಜೊತೆಗೆ ಕಾಡಿನಿಂದ ಹಿಡಿದು ತಂದು ಪಳಗಿಸಿದ ಮೂಕಪ್ರಾಣಿಗಳು. ಜಗತ್ತಿನಲ್ಲಿ ಮುಂದೆಯೂ ಈ ತಾರತಮ್ಯ ಹೀಗೆ ಮುಂದುವರಿಯುತ್ತದೆ. ಅಲ್ಲೊಬ್ಬರು ಇಲ್ಲೊಬ್ಬರು ಮಹನಿಯರು ಹುಟ್ಟಿ ಬಂದು ಈ ಅಸಮಾನತೆಯ ಸಮಾಜದ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡರೆ ವಿನಹಃ ಈ ಜಗತ್ತು ಮಾತ್ರ ಬದಲಾಗಲೇ ಇಲ್ಲ.
- ಎಂ. ವೆಂಕಟಸ್ವಾಮಿ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)