K. P. Poornachandra Tejaswi
Publisher - ಪುಸ್ತಕ ಪ್ರಕಾಶನ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಹುಲಿ ಹೊರಹೊರಟ ತಕ್ಷಣವೇ ಕಾವಲುಗಾರ ಮುಸಿಯಕ್ಕೆ ಇದು ಕಂಡಿದ!, ಅದು ಎಚ್ಚರಿಕೆ ಕೂಗು ಹಾಕಿದ ಕೂಡಲೇ ನನಗೆ ಸ್ಪಷ್ಟವಾಯ್ತು! ಅನಂತರ ಅದು ಹಳ್ಳ ದಾಟುತ್ತಾ ಅಲ್ಲಿ ಕೂಗಿಕೊಂಡು ಹಾರಿದ ಕಾಡುಕೋಳಿಯನ್ನು ಹೆದರಿಸಿದ! ಆದ್ದರಿಂದ ಹುಲಿ ನೆಟ್ಟಗೆ ನಾನು ಕುಳಿತಿರುವ ಕೆರೆಯ ಹತ್ತಿರಕ್ಕೇ ಬರುತ್ತಿದೆ! ಅಷ್ಟರಲ್ಲಿ ಇದ್ದಕ್ಕಿದ್ದಂತೆ ನನ್ನ ನರಮಂಡಲವೆಲ್ಲಾ ಕದಡಿಹೋಗುವಂತೆ ಕೆರೆಯ ಆಚೆ ದಂಡೆಯ ಸಮೀಪದಲ್ಲಿ 'ಆಂಕ್ ಆಂಕ್' ಎಂದು ಕಡವೆಯೊಂದು ಗಟ್ಟಿಯಾಗಿ ಕಿರುಚಿತು. ಗಿಡಮರಗಳನ್ನು ಚಟಪಟ ಮುರಿಯುತ್ತಾ ಮೃತ್ಯುವೇಗದಲ್ಲಿ ಅದು ಓಡಿದ್ದು ಕೇಳಿಸಿತು. ಈ ಕಾಡಿನ ಮಿತ್ರರಿಗೆಲ್ಲಾ ನಾನೆಷ್ಟು ಕೃತಜ್ಞನಾಗಿರಬೇಕು! ನರಭಕ್ಷಕನ ಚಲನವಲನಗಳನ್ನು ನಾನು ಕಣ್ಣಾರೆ ನೋಡಿದಷ್ಟು ಸ್ಪಷ್ಟವಾಗಿ ನನಗೆ ಎಚ್ಚರಿಕೆ ಕೊಡುತ್ತಿದ್ದುವು, ಈಗಿರುವ ಪ್ರಶ್ನೆ ಇಷ್ಟೆ, ಹುಲಿಯೂ ನನ್ನ ಇರವನ್ನು ತಿಳಿದಿದೆಯ?
-ಮಂಚಿಹಳ್ಳಿಯ ಮುಗ್ಧರು
