Meena Sadananda
ಇಂಪಾದ ರಾಗಮಾಲೆ
ಇಂಪಾದ ರಾಗಮಾಲೆ
Publisher - ಸ್ನೇಹ ಬುಕ್ ಹೌಸ್
Regular price
Rs. 200.00
Regular price
Rs. 200.00
Sale price
Rs. 200.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಕಥನ ಕಲೆ ಎಲ್ಲರಿಗೂ ಸುಲಭಕ್ಕೆ ಒಲಿಯುವುದಿಲ್ಲ. ತಾನು ಹುಟ್ಟಿ ಬೆಳೆದ ಪರಿಸರ, ಸುತ್ತಲ ವಿದ್ಯಮಾನಗಳಲ್ಲಿರುವ ವೈರುಧ್ಯ, ವಿಶೇಷವೆನಿಸುವ ವ್ಯಕ್ತಿಗಳ ಭೇಟಿ, ಅವರ ನಡವಳಿಕೆಗಳು, ಬದುಕಿನ ಸಂಘರ್ಷ, ಪ್ರಚಲಿತ ವಿದ್ಯಮಾನ ಇವೆಲ್ಲವನ್ನೂ ಚಿಕಿತ್ಸಕ ದೃಷ್ಟಿಕೋನದಿಂದ ಅವಲೋಕನ ಮಾಡುವ ಗುಣಧರ್ಮ ಒಬ್ಬ ಬರಹಗಾರನಲ್ಲಿದ್ದಾಗ ಮಾತ್ರ ಆತ ಅಥವಾ ಆಕೆ ಒಬ್ಬ ಉತ್ತಮ ಕಥೆಗಾರರಾಗಿ ಹೊರ ಹೊಮ್ಮುವುದು ಸಾಧ್ಯವಾಗುತ್ತದೆ. ಕಥೆ ಕಟ್ಟುವುದು, ಅದನ್ನು ಸಮರ್ಥವಾಗಿ ನಿರೂಪಿಸುವುದು, ಎಲ್ಲರೂ ಓದುವಂತೆ ಮಾಡುವುದು, ಓದಿಸಿಕೊಂಡು ಹೋಗುವ ಓಘವನ್ನು ಅದರೊಳಗೆ ತುಂಬುವುದು, ಇದೆಲ್ಲವೂ ಸುಲಭಕ್ಕೆ ದಕ್ಕುವ ಸಂಗತಿಗಳಲ್ಲ. ಕಥೆಯ ಓದಿಗೆ ತೊಡಗಿದಂತೆ ಅದರೊಳಗಿರುವ ಮಾಂತ್ರಿಕ ಶಕ್ತಿ ಓದುಗನನ್ನು ತನ್ನೆಡೆಗೆ ಆಹ್ವಾನಿಸಿ, ಕಥೆಯೊಳಗೆ ಆವಾಹಿಸಿ, ಮೈಮರೆಯುವಂತೆ ಮಾಡುವುದಿದೆಯಲ್ಲ, ಅದು ನಿಜವಾದ ಕಥೆಗಾರನ ಶಕ್ತಿ.
ಇದು ಈ ಕಥೆಗಾರ್ತಿಯ ಚೊಚ್ಚಲ ಕಥಾಸಂಕಲನವೆನ್ನಿಸುವುದಿಲ್ಲ. ಕಥಾ ನಿರೂಪಣೆಯಲ್ಲಿ ಅಷ್ಟು ವೈವಿಧ್ಯತೆಯಿದೆ, ಎಲ್ಲೂ ಏಕತಾನತೆ ಕಾಡುವುದಿಲ್ಲ. ಒಂದೊಂದು ಕಥೆಯೂ ನಮ್ಮ ಮುಂದೆ ನಡೆದ, ಆಗಿಹೋದ ಸನ್ನಿವೇಶವನ್ನು ಯಥಾವತ್ ನಿರೂಪಿಸುತ್ತಿದ್ದಾರೇನೋ ಎಂಬಂತಹ ಚಿತ್ರಕಶಕ್ತಿ ಅದರಲ್ಲಡಗಿದೆ. ಇವೆಲ್ಲಕ್ಕೂ ಮೂಲಕಾರಣವಾಗುವುದು ಅವರಲ್ಲಿರುವ ಅಧ್ಯಯನ ಶೀಲತೆ, ಒದುವ ಹವ್ಯಾಸ ಮತ್ತು ಹೊಸ ಹೊಸ ಸಂಗತಿಗಳತ್ತ ತುಡಿಯುವ ಮನೋಧರ್ಮ.
ಶ್ರೀಮತಿ ಮೀನಾ ಸದಾನಂದ್ ಅವರ 'ಇಂಪಾದ ರಾಗಮಾಲೆ' ಕಥಾಸಂಕಲನ ಇಪ್ಪತ್ತು ಕಥೆಗಳ ಒಂದು ಸುಂದರ ಹಾರ. ವೈವಿಧ್ಯತೆ ಈ ಕಥೆಗಳಲ್ಲಿರುವ ಮೂಲ ಲಕ್ಷಣ. ಚೊಚ್ಚಲಕೃತಿ ಎಂದು ಎಲ್ಲೂ ಅನಿಸುವುದೇ ಇಲ್ಲ. ಅಷ್ಟು ಉತ್ತಮವಾಗಿದೆ ಕಥಾಹಂದರ ಮತ್ತು ಕಥೆಯನ್ನು ಕಟ್ಟಿಕೊಡುವ ರೀತಿ, ಅವರಿಂದ ಇನ್ನಷ್ಟು ಕಥೆಗಳು ಹೊರಬರಲಿ, ಕನ್ನಡ ಕಥಾಲೋಕ ಸಮೃದ್ಧವಾಗಲಿ ಎಂಬುದೇ ನಮ್ಮ ಹಾರೈಕೆ.
ಕೆ.ಬಿ. ಪರಶಿವಪ್ಪ
ಸ್ನೇಹ ಬುಕ್ ಹೌಸ್

Share
Subscribe to our emails
Subscribe to our mailing list for insider news, product launches, and more.