Ravi Belagere
Publisher - ಭಾವನಾ ಪ್ರಕಾಶನ
- Free Shipping
- Cash on Delivery (COD) Available
Pages -
Type -
Couldn't load pickup availability
ಇದು ನಿಜಕ್ಕೂ ನನ್ನಿಂದ ಸಾಧ್ಯವಾ?
ಸಾವಿರ ಸಲ ಯೋಚಿಸಿದ್ದೇನೆ. ಏಕೆಂದರೆ ನನ್ನ ಮಾಮ ಬೆಳಗೆರೆ ಕೃಷ್ಣಶಾಸ್ತ್ರಿಗಳು ಯೇಸುವಿನಂತೆ ಬದುಕಿದವರು. ನಾನು ಅದಕ್ಕೆ ತದ್ವಿರುದ್ಧವಾಗಿ ಬದುಕುತ್ತಿರುವ ಜುದಾಸನಂಥವನು. ಯೇಸುವಿನ ಜೀವನ ಕಥನವನ್ನು ಜುದಾಸ ಬರೆಯುವುದುಂಟೆ?
ಈತನಕ ಎಪ್ಪತ್ತು ಪುಸ್ತಕ ಅನಾಯಾಸವಾಗಿ ಬರೆದಿದ್ದೇನೆ. ಅಂದರೆ, ನನಗೆ ಬರೆಯಲು ಬರುತ್ತದೆ. ಬಾಲ್ಯದಲ್ಲಿ ತಾರುಣ್ಯದಲ್ಲಿ ಅಮ್ಮನೊಂದಿಗೆ ಬದುಕುತ್ತಾ, ಮಾಮನೊಂದಿಗೆ ಅಲೆಯುತ್ತಾ ಆತನ ಬಗ್ಗೆ ಅಷ್ಟಿಷ್ಟು ಅರಿತಿದ್ದೇನೆ. ಮತ್ತು ಬೆಳಗೆರೆಯವನಲ್ಲದಿದ್ದರೂ ಬೆಳಗೆರೆ ಕುಟುಂಬದೊಳಕ್ಕೆ ಹೊಕ್ಕು ದಾಖಲಾಗಿದ್ದೇನೆ.
ಈ ಕೆಲವು ಕಾರಣಗಳಿಗಾಗಿ ಶಾಸ್ತ್ರಿಗಳ ಜೀವನ ಕಥನ ಬರೆಯಲು ನಾನು ಅರ್ಹ. ಅಷ್ಟೆ. ಉಳಿದಂತೆ ಸರಿ ಸುಮಾರು ತೊಂಬತ್ತೇಳು ವರ್ಷಗಳ ಆ ಶ್ರೇಷ್ಠ ಜೀವಿಯ ಬದುಕನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಮನುಷ್ಯ ಮಾತ್ರರಿಗೆ ಕಷ್ಟ ಕಷ್ಟ ಕಷ್ಟ,
-ರವಿ ಬೆಳಗೆರೆ
ಭಾವನಾ ಪ್ರಕಾಶನ
