Sahana Kantabaylu
Publisher - ಅಹರ್ನಿಶಿ ಪ್ರಕಾಶನ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಸೂಕ್ಷ್ಮಮತಿಯಾದ ಗೃಹಿಣಿಯೊಬ್ಬಳು, ಸುತ್ತಲಿನ ನಿಸರ್ಗದ ಮತ್ತು ಮಾನವ ಬದುಕಿನ ದೈನಿಕ ಆಗುಹೋಗುಗಳನ್ನು ಸೂಕ್ಷ್ಮವಾಗಿಯೂ, ವಿಸ್ಮಯದಿಂದಲೂ ಅವಲೋಕಿಸುತ್ತ, ತನ್ನ ಸ್ಪಂದನೆಯನ್ನು ಸರಳವಾಗಿ ಮುಗ್ಧವಾಗಿ ದಾಖಲಿಸುವ ಬರಹಗಳಿವು. ಇಲ್ಲಿರುವ ನಿಸರ್ಗದ ಜತೆಗಿನ ಒಡನಾಟವು ಚೇತೋಹಾರಿಯಾಗಿದ್ದರೆ, ಸಮಾಜದ ಮುಖಾಮುಖಿಯು ಇಕ್ಕಟ್ಟು, ವೇದನೆ, ಸಂಘರ್ಷ, ವೈರುಧ್ಯಗಳಿಂದ ಕೂಡಿದೆ. ಇಲ್ಲಿ ಬೆಕ್ಕು-ಹಸು ಸಾಕುವ, ಹಾಲು ಕರೆವ, ಉಪ್ಪಿನಕಾಯಿ ಹಾಕುವ, ಮೊಸರು ಕಡೆವ, ಅಡುಗೆ ಮಾಡುವ ಮನೆಯೊಳಗಿನ ವರ್ತುಲವೂ ಇದೆ; ದನ ಮಾರುವ, ದೇಹದಾನ-ಪರುದಾನ ಮಾಡುವ, ಅರಣ್ಯನಾಶ ತಡೆವ ಮನೆಯಾಚೆಗಿನ ವರ್ತುಲವೂ ಇದೆ. ಇವೆರಡೂ ಪರಸ್ಪರ ಬೆರೆಯುತ್ತ ಹೆಣ್ಣೂಬ್ಬಳ ಬಾಳ ಮೀಮಾಂಸೆಯನ್ನು ಕಟ್ಟುತ್ತವೆ. ಅನುಭವವನ್ನು ಭಾರವಿಲ್ಲದೆ ಸಹಜವಾಗಿ ನಿರಾಯಾಸವಾಗಿ ಮಂಡಿಸುವ ಕ್ರಮದಲ್ಲೇ ಚಿಂತನೆಯನ್ನು ಹೊಳೆಯಿಸುವ ಬರಹಗಳಿವು. 'ದೇವರಿಗೆ ಹೂವು ಕೊಯ್ಯುತ್ತ, ಮೊಸರು ಕಡೆಯುತ್ತ ಬೆಣ್ಣೆ ತೆಗೆಯುತ್ತ ವರ್ಷಗಳು ಉರುಳಿದ್ದು ಗೊತ್ತೇ ಆಗಲಿಲ್ಲ' ಎಂಬ ಸಹಜ ಸರಳ ವಾಕ್ಯವು ಹೆಣ್ಣಿನ ದಿನಚರಿಯನ್ನು ಮಾತ್ರವಲ್ಲ, ಸಮಾಜದ ಮನೋಭಾವದ ಬಗ್ಗೆಯೂ ಹೇಳುತ್ತದೆ. ಬದುಕಿನಲ್ಲಿ ಸಂಭವಿಸುತ್ತಿರುವ ಪಲ್ಲಟಗಳನ್ನು ಹಳಹಳಿಕೆ ಮತ್ತು ವಿಷಾದವಿಲ್ಲದೆ ಇಲ್ಲಿ ಹಿಡಿದುಕೊಡಲಾಗಿದೆ; ಆತ್ಮ ವಿಮರ್ಶೆಯಿಂದಲೂ ವಿನೋದ ಪ್ರಜ್ಞೆಯಿಂದಲೂ ಕೂಡಿರುವ ಇಲ್ಲಿನ ನಿರೂಪಣೆ ಹೃದ್ಯವಾಗಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಯು ಗೃಹಿಣಿಯರ ಒಳಜಗತ್ತಿನ ತಳಮಳ ಮತ್ತು ಸಂಭ್ರಮಗಳನ್ನು ಸರಿಯಾಗಿ ಆಲಿಸಬೇಕಿದೆ.
