Skip to product information
1 of 1

Basavaraja Kodagunti

ಹಯ್ದರಾಬಾದ ಕರ್ನಾಟಕ ಸಾಲು: ಸಂಪುಟ - 5

ಹಯ್ದರಾಬಾದ ಕರ್ನಾಟಕ ಸಾಲು: ಸಂಪುಟ - 5

Publisher -

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಹಬ್ಬರಾಬಾದ ಕರ್ನಾಟಕ ನಿರಂತರ ಪರ್ಯಾಯಗಳನ್ನು ಆಗೆದು ತೆಗೆವ ಕಾಯಕದಲ್ಲಿ ತನ್ಮಯವಾಗಿರುವ ನೆಲ, ಇತಿಹಾಸ ಕಾಲ ಮೊದಲಾಗುತ್ತಿದ್ದಂತೆ ಬಿತ್ತಿದ ಅಕ್ಕರದ ಬೀಜ ಮುಂದೆ ಹೆಮ್ಮರವಾಗಿ ನೂರು ಬಂಡಾಯಗಳ ಹೂಹಣ್ಣನ್ನು ಕೊಟ್ಟು ಬೆಳೆದಿದೆ. ಬರತದ ಬದುಕಿಗೆ ಬಾಶ್ಯ ಬರೆಯುವ ಹಟ ಹೊತ್ತು ಬಂದಎಲ್ಲ ಮತಪಂತಗಳೂ ಇಲ್ಲಿ ಜಗದೆತ್ತರಕ್ಕೆ ಹಂಬಲಿಸಿ: ಅಧ್ಯಯನ ಮಾಡಿವೆ. ಯುದ್ಧ ಮಾಡಿವೆ. ಎಲ್ಲ ದರ್ಮಗಳನ್ನು ಮುರಿದು ಬದುಕನ್ನು ಕಟ್ಟುವ ಈ ನೆಲದ ಹಟಕ್ಕೆ ಇಳಿದು ರಕ್ತ ಸಂಬಂದಿಗಳಾಗಿ ನೇಹ, ಪಿರೂತಿಯನ್ನು ಹಂಚಿಕೊಂಡವು. ಜಡಗಟ್ಟುತ್ತಿದ್ದಂತೆ ವ್ಯವಸ್ಥೆಯನ್ನು ಮುರಿಯುವ ಬಂಡಾಯಗಳನ್ನು ಉತ್ತಿ ಬಿತ್ತಿ ಬೆಳೆದು ಕೊಯ್ದು ಕಣ ಮಾಡುವ ನಿರಂತರ ಕಾಯಕದಲ್ಲಿತೊಡಗಿದೆ ಈ ನೆಲ. ಶಾಸ್ತ್ರವನ್ನು ಲಯದೊಳಿರಿಸಿ, ಲಯದೊಳಗೆ ಶಾಸ್ತ್ರ ಹೇಳಿ ಬಯಲಿನೊಳಗೆ ಎರಡನ್ನೂ ನಿಲಿಸಿ ಎರಡಲ್ಲವೆಂದು ತೋರಿದ ಬಯಲ ಬಾಳೇವನ್ನು ಈ ನೆಲ ಕಟ್ಟಿತು, ದೇಸಿಯನ್ನು ಮಾರ್ಗವಾಗಿಸಿ, ಮಾರ್ಗವನ್ನು ದೇಸಿಯಾಗಿಸಿ ಮದ್ಯಮ ಮಾರ್ಗವನ್ನೇ ಬಯಲಿನೊಳಗೆ ತುಂಬಿದರು. ಶಟ್ಟದಿಯನ್ನು ಜನಪದವಾಗಿಸಿ, ತ್ರಿಪದಿಯನ್ನು ಮಹಾ ಕಾವ್ಯವಾಗಿಸಿ, ಶ್ರೀಕ್ರಿಶ್ಣಪಾರಿಜಾತವನ್ನು  ಅಟ್ಟದ ಮೇಲೆ ಮೊಳಗಿಸಿದರು. ರಾಜಕೀಯಕ್ಕೆ ಸಾಹಿತ್ಯದ ಮೂಗುದಾರ ಹಾಕಿ ಹೊರಗಿಟ್ಟು ಬದುಕನ್ನು ಹಾಡಿದತಾನ ಈ ನೆಲದ ದೂಳಿನಲ್ಲಿ ತುಂಬಿಕೊಂಡಿದೆ. ಬಿಸಿಲನ್ನು ಹೂವಾಗಿಸಿ, ಕಲ್ಲನ್ನು ಕಲೆಯಾಗಿಸಿ, ನೆಲವನ್ನು ಬಂಗಾರವಾಗಿಸಿ ದ್ವೇಶದ ನೂರು ಯುದ್ಧಗಳನ್ನು ಮಣ್ಣೊಳಗೆ ಮುಚ್ಚಿ ಕರುಳಬಳ್ಳಿಯನ್ನು ಹಬ್ಬಿಸಿದೆ ಈ ನೆಲ.

ಹಬ್ಬರಾಬಾದ ಕರ್ನಾಟಕದಂತಾ ಬದುಕಿನ, ಸಮಾಜದ ಸಂಕೀರ್ಣ ರಚನೆ ಇರುವ ಪ್ರದೇಶಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪರ್ಯಾಯ ಸಿದ್ಧಾಂತಗಳು, ವಿದಾನಗಳು ಅವಶ್ಯ. ಇವುಗಳನ್ನು ಕಟ್ಟಿಕೊಳ್ಳುವುದಕ್ಕೆ ಪೂರಕ ವಿದಾನಗಳನ್ನು ಬೆಳೆಸಿಕೊಳ್ಳುವುದಕ್ಕೆ ಸರಕನ್ನು ಕೊಡುವ ಕೆಲಸ ಈ ಸರಣಿ. 

-ಬಸವರಾಜ ಕೋಡಗುಂಟಿ

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)