Palahalli Vishwanath
ಹೀಗೊಂದು ಕುಟುಂಬದ ಕಥೆ
ಹೀಗೊಂದು ಕುಟುಂಬದ ಕಥೆ
Publisher -
Regular price
Rs. 280.00
Regular price
Rs. 280.00
Sale price
Rs. 280.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಕಳೆದ ಶತಮಾನದ ಮೊದಲ ದಶಕಗಳಲ್ಲಿ ಮೈಸೂರಿನ ಒಬ್ಬ ಯುವಕ ಬೆನಾರೆಸಿಗೆ ಹೋಗಿ ಗಾಂಧೀಜಿಯವರಿಂದ ಪ್ರಭಾವಿತನಾಗಿ ಆದರ್ಶವಾದಿಯಾಗಿ ಪರಿವರ್ತನೆಗೊಂಡು ಕನ್ನಡ ಪತ್ರಿಕಾ ಕ್ಷೇತ್ರವನ್ನು ಪ್ರವೇಶಿಸಿ ಅಲ್ಲಿಯ ಸವಾಲುಗಳನ್ನು ಮತ್ತು ಆಡಳಿತವರ್ಗದ ಧೋರಣೆಗಳನ್ನು ಹೇಗೆ ಎದುರಿಸುತ್ತಾನೆ ಎಂಬುದು ಈ ಕೃತಿಯ ಮುಖ್ಯಭಾಗ. ಇದಕ್ಕಾಗಿ ಲೇಖಕರು ಪತ್ರಗಳನ್ನು, ದಿನಚರಿಯ ಭಾಗಗಳನ್ನು, ನಾಯಕರ ಸಾರ್ವಜನಿಕ ಭಾಷಣಗಳ ಉಲ್ಲೇಖಗಳನ್ನು, ವೃತ್ತ ಪತ್ರಿಕೆ, ಸರ್ಕಾರದ ವರದಿಗಳ ಆಯ್ದಭಾಗಗಳನ್ನು, ಭಾವಚಿತ್ರಗಳನ್ನು ಬಳಸಿಕೊಂಡು ಒಂದು ಪತ್ರಿಕೆ' 'ತಾಯಿನಾಡು'ಯ ಹುಟ್ಟು, ಏಳಿಗೆ ಮತ್ತು ಅವನತಿಯನ್ನು ನಿರೂಪಿಸಿದ್ದಾರೆ. ಕನ್ನಡ ಪತ್ರಿಕೋದ್ಯಮದ ಇತಿಹಾಸವನ್ನು ಕುರಿತು ಅಧ್ಯಯನ ಮಾಡುವವರಿಗೆ ಇಲ್ಲಿ ವಿಪುಲ ಸಾಮಗ್ರಿಗಳಿವೆ. ಅವರ ಕುಟುಂಬವೇ ಒಟ್ಟಾರೆಯಾಗಿ ಹಳೆ ಮೈಸೂರು,
ಬೆಂಗಳೂರಿನ ಸಾಂಸ್ಕೃತಿಕ ಗುರುತುಗಳನ್ನು ಕಟ್ಟಲು ಗಣನೀಯವಾಗಿ ಕಾಣಿಕೆ ನೀಡಿರುವಂತದ್ದು. ತಾಯಿ ಜಯಲಕ್ಷ್ಮಮ್ಮನವರ ವಿಕಾಸ – ಸಂಪ್ರದಾಯಸ್ಥ ಗೃಹಿಣಿಯಿಂದ ಕರುಣಾಮಯಿ ಸಮಾಜಸೇವಿಕೆ - ಸ್ವಾರಸ್ಯಕರ ಭಾಗ, ಹಿರಿಯ ಸಹೋದರ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಪಿ.ಆರ್. ಬ್ರಹ್ಮಾನಂದರನ್ನು ಕುರಿತ ಅಧ್ಯಾಯ ಆ ಕಾಲಮಾನದ ಆರ್ಥಿಕ ಚಿಂತನೆಯ ಸ್ವರೂಪವನ್ನು ಗುರುತಿಸುವ ದೃಷ್ಟಿಯಿಂದ ಮುಖ್ಯವಾದದ್ದು.
ಆ ಕಾಲದ ಬೆಂಗಳೂರಿನ ಬಸವನಗುಡಿ ಮತ್ತು ಅಲ್ಲಿನ ಒಂದು ಕುಟುಂಬ ವಿದ್ಯಾಭ್ಯಾಸ ವೃತ್ತಿಯ ಮೂಲಕ ಹೇಗೆ ಆಧುನಿಕತೆಯತ್ತ ಹೊರಳಿತು ಎಂಬುದಲ್ಲದೆ ಇತರ ನಾನಾ ಕತೆಗಳನ್ನು ಹೇಳುತ್ತಾ ಆ ಕಾಲದ ವೈಯಕ್ತಿಕ ಮತ್ತು ಸಾರ್ವತ್ರಿಕ ಜೀವನ ಶೈಲಿಯ ಬಗ್ಗೆ ಕೃತಿ ಬೆಳಕು ಚೆಲ್ಲುತ್ತದೆ, ಲೇಖಕರ ಬರವಣಿಗೆಯ ಇನ್ನೊಂದು ವೈಶಿಷ್ಟ್ಯವೆಂದರೆ, ವೈಯಕ್ತಿಕ ನೆಲೆಯಿಂದ ಕೌಟುಂಬಿಕ ನೆಲೆಗೆ, ನಂತರ ಸಾರ್ವಜನಿಕ ಬದುಕಿನ ನೆಲೆಗೆ ಮತ್ತೆ ವೃತ್ತಿಯ ನೆಲೆಗೆ ಯಾವುದೇ ಬಿರುಕಿಲ್ಲದಂತೆ ಚಲಿಸುತ್ತಾರೆ, ನಿರೂಪಣೆಯನ್ನು ಮುಂದುವರಿಸುತ್ತಾರೆ. ಹಲವು ಕತೆಗಳನ್ನು ಅಡಕಗೊಳಿಸಿಕೊಂಡಿರುವ ಈ ಕೃತಿ ಸಂಪನ್ಮೂಲವಾಗಿ ಬಳಸಿಕೊಂಡಿರುವ ಬರವಣಿಗೆ, ದಾಖಲೆಗಳಲ್ಲೂ ಒಂದು ವಿಶಿಷ್ಟತೆ ಇದೆ.
ಕೆ. ಸತ್ಯನಾರಾಯಣ (ಮುತ್ತುರಿಯಿಂದ)

Share
Subscribe to our emails
Subscribe to our mailing list for insider news, product launches, and more.