Sunanda Kadame
ಹೈವೇ 63
ಹೈವೇ 63
Publisher -
- Free Shipping Above ₹250
- Cash on Delivery (COD) Available
Pages - 200
Type - Paperback
ತಮ್ಮ 'ಪುಟ್ಟ ಪಾದದ ಗುರುತು' ಮತ್ತು 'ಗಾಂಧಿ ಚಿತ್ರದ ನೋಟು' ಎಂಬ ಮೊದಲೆರಡು ಕಥಾ ಸಂಕಲನಗಳಲ್ಲಿದ್ದ ಕೌಟುಂಬಿಕ ವ್ಯಾಪ್ತಿಯನ್ನು ಮೀರಿದ ಸಾಮಾಜಿಕ ಪರಿಸರವನ್ನು ಕತೆಗಳ ಒಡಲಿಗೆ ಸೇರಿಸಿಕೊಳ್ಳಲು ಸುನಂದಾ ಕಡಮೆ ಪ್ರಯತ್ನಿಸಿದ್ದು, ಅವರ ಆನಂತರದ 'ಕಂಬಗಳ ಮರೆಯಲ್ಲಿ' ಮತ್ತು 'ತುದಿ ಮಡಚಿಟ್ಟ ಪುಟ' ಕಥಾ ಸಂಕಲನಗಳಿಂದ ಕಾಣಿಸುತ್ತದೆ. ಯಾವುದೇ ಕಥೆಗಾರ(ರ್ತಿಯ)ರಿಗೂ ತಮ್ಮ ಕಥನ ಕ್ರಮದಲ್ಲಿ ಬದಲಾವಣೆ ತಂದುಕೊಳ್ಳುವುದು ಅನಿವಾರ್ಯ. ಕತೆಯನ್ನು ಪಾತ್ರದ ಮೂಲಕ ಗ್ರಹಿಸುವದಕ್ಕೂ ಒಟ್ಟ ಸನ್ನಿವೇಶಗಳನ್ನು ಗ್ರಹಿಸುತ್ತ ಬರೆಯುವದಕ್ಕೂ ವ್ಯತ್ಯಾಸವಿದೆ. ಪ್ರಸ್ತುತ ಈ 'ಹೈವೇ 63' ಕಾದಂಬರಿಯಲ್ಲಿಯ ತುಂಬಾ ಗಮನಾರ್ಹ ಮೊದಲ ಅಧ್ಯಾಯದಲ್ಲಿಯೇ ಗರ್ಭಿಣಿ ಶಾಲಿನಿಗೆ ಬಿ ಕಾಂಪ್ಲೆಕ್ಸ್ ಗುಳಿಗೆಗಳನ್ನು ಕೊಡಲು ನಳಿನಿ ಆಶಾ ಕಾರ್ಯಕರ್ತೆಯಾಗಿ ಕಾಡಿನಲ್ಲಿ ಹೊರಟಿರುತ್ತಾಳೆ. ಕಾಡಿನ ಮಹಾಮೌನವೇ ಭಯ ಹುಟ್ಟಿಸುವಂಥದ್ದು. ಸಣ್ಣ ಶಬ್ದವೂ ಮನವನ್ನು ಅಲ್ಲಾಡಿಸುವ ವಾತಾವರಣ, ನಳಿನಿ ಒಬ್ಬಂಟಿ ಹೆಂಗಸು ಬೇರೆ. ಕಾಡಿನಲ್ಲಿ ನಡೆಯುವಾಗ ಯಾರೋ ಹಿಂದೆ ಬೆನ್ನತ್ತಿದ ಅನುಮಾನ. ಕಾಡಿನಲ್ಲಿ ನಡೆಯುವ ಅಕ್ರಮಗಳ ನೆನಪು, ಹೀಗೆ ಇಡೀ ಅಧ್ಯಾಯದಲ್ಲಿ ನಳಿನಿ ಮೂಲಕ ಪ್ರಜ್ಞಾ ಪ್ರವಾಹ ಹರಿಯುತ್ತದೆ. ಭಾವ ತೀವ್ರತೆಯಿದೆ. ಕಾಲದ ನಿರ್ವಹಣೆಯೂ ಬಿಗಿಯಾಗಿದೆ. ಕಾದಂಬರಿಕಾರರು ಒಂದು ಲೋಕವನ್ನು ನಳಿನಿಯ ಮೂಲಕ ಗ್ರಹಿಸಿರುವುದರಿಂದ ಬಂಧ ಬಿಗಿಯಾಗಿದೆ. ಸನ್ನಿವೇಶದ ಚಿತ್ರಣದಲ್ಲಿಯೇ ಒಂದು ಒತ್ತಡ ಇದೆ. ಇಂಥ ಸನ್ನಿವೇಶಗಳು ಕಾದಂಬರಿಕಾರರಿಗೂ ಸವಾಲನ್ನೊಡ್ಡುತ್ತವೆ.
-ಅಮರೇಶ ನುಗಡೋಣಿ (ಪ್ರವೇಶಿಕೆಯಿಂದ)
Share
Subscribe to our emails
Subscribe to our mailing list for insider news, product launches, and more.