ಷ. ಶೆಟ್ಟರ್
Publisher: ಅಭಿನವ ಪ್ರಕಾಶನ
Regular price
Rs. 600.00
Regular price
Rs. 600.00
Sale price
Rs. 600.00
Unit price
per
Shipping calculated at checkout.
Couldn't load pickup availability
ಕಳೆದ ನೂರು ವರ್ಷಗಳಿಂದ ಕನ್ನಡ ನಾಡಿನ ಶಾಸನಗಳನ್ನು ಬಳಸಿಕೊಂಡು ಅನೇಕ ವಿದ್ವಾಂಸರು ಕೃತಿ ರಚಿಸಿದ್ದುಂಟು. ಇವೇ ಶಾಸನಗಳನ್ನು ಬಳಸಿಕೊಂಡು ಪ್ರೊ. ಶೆಟ್ಟರ್ ಇಲ್ಲಿ ಭಿನ್ನ ಫಲಿತಾಂಶ ಪ್ರಕಟಿಸಿದ್ದಾರೆ. ನಿಜವಾದ ಸಂಶೋಧಕನಿಗೆ ಹೊಸ ಆಕರ ಬೇಕೆಂದೇನೂ ಇಲ್ಲ. ತನ್ನ ವ್ಯಾಖ್ಯಾನ ಸಾಮರ್ಥ್ಯದಿಂದ ಅವನು ಹಳೆಯ ಆಕರಗಳಿಂದಲೇ ಹೊಸ ಮಾತುಗಳನ್ನು ಹೊರಡಿಸಬಲ್ಲನೆಂಬುದಕ್ಕೆ ಈ `ಮರುವ್ಯಾಖ್ಯಾನಶೋಧ` ನಿದರ್ಶನವಾಗಿದೆ. `ನಾವು ಶಿಲ್ಪವನ್ನು ಅಭ್ಯಸಿಸಿದ್ದೇವೆ, ಶಿಲ್ಪಿಗಳನ್ನು ಮರೆತಿದ್ದೇವೆ; ಲಿಪಿಯನ್ನು ಅಭ್ಯಸಿಸಿದ್ದೇವೆ, ಲಿಪಿಕಾರರನ್ನು ಮರೆತಿದ್ದೇವೆ` ಎಂದು ಮೇಲಿಂದ ಮೇಲೆ ಎಚ್ಚರಿಸುತ್ತ ಬಂದಿರುವ ಪ್ರೊ. ಶೆಟ್ಟರ್, ಈಗ ಮೊದಲ ಸಹಸ್ರಮಾನದ ನಮ್ಮ ಶಾಸನ ಲಿಪಿಕಾರರನ್ನು ಕುರಿತು ಇನ್ನೊಬ್ಬರು ಕೈಯಿಡದಂತೆ ಪೂರ್ಣ ಅಭ್ಯಾಸವನ್ನು ಪೂರೈಸಿ ಅದ್ಭುತವಾದ ಹೊತ್ತಗೆಯೊಂದನ್ನು ಕನ್ನಡಿಗರಿಗೆ ನೀಡಿದ್ದಾರೆ.
