Ravi Belagere
ಹಾಯ್ ಕಂಡ ಸ್ವಾಮಿಗಳು
ಹಾಯ್ ಕಂಡ ಸ್ವಾಮಿಗಳು
Publisher - ಭಾವನಾ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 178
Type - Paperback
ಹಿಂದೂಧರ್ಮ, ಗೋರಕ್ಷಣೆ, ಕೇಸರಿ ಉಡುಪು, ಇದು ಈಗ ಭಾರತದಲ್ಲಿ ವಿಪರೀತವಾಗಿ ದುರುಪಯೋಗವಾಗುತ್ತಿರುವ ಮಾರಾಟದ ಸರಕುಗಳು. ಕಾವಿಯನ್ನು ತೊಟ್ಟು, ಹಿಂದೂ ಧರ್ಮ ಹಾಗೂ ಗೋರಕ್ಷಣೆಯ ಮುಖವಾಡ ಹೊತ್ತ ವ್ಯಕ್ತಿಯು ಯಾವುದೇ ಅಪರಾಧ ಮಾಡಿದರೂ ಮಾಫಿ. ಪೊಲೀಸ್ ಹಾಗೂ ನ್ಯಾಯಾಲಯಗಳಿಂದ ತಪ್ಪಿಸಿಕೊಳ್ಳಲು ಪ್ರಬಲವಾದ ಗುರಾಣಿಯಾಗಿ ಬಳಸಲ್ಪಡುತ್ತಿರುವ ಈ ಅಸ್ತ್ರಗಳನ್ನು ಯಾರೂ ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ಧರ್ಮದ್ರೋಹಿ ಮತ್ತು ದೇಶದ್ರೋಹಿ ಎಂಬ ಪಟ್ಟ ಖಚಿತ! ಶುರುವಿನಿಂದಲೂ ಹಾಯ್! ಇಂತಹ ಪಟ್ಟಗಳನ್ನು ಹೊತ್ತು ನಕಲಿ ಕಾವಿಧಾರಿಗಳ ಮುಖವಾಡವನ್ನು ಬಯಲಿಗೆಳೆಯುತ್ತ ಬಂದಿದೆ. ಈ ಪುಸ್ತಕ ಕೂಡ ಅಂತಹದ್ದೇ ಒಂದು ಪ್ರಯತ್ನ. ಹಾಯ್ ಆರಂಭದಿಂದಲೂ ಇಲ್ಲಿಯವರೆಗೆ ಪ್ರಕಟಗೊಂಡ ವರದಿಗಳನ್ನು ಈ ಹೊತ್ತಿಗೆಯ ರೂಪದಲ್ಲಿ ಪ್ರಕಟಿಸುತ್ತಿದೆ. ನಿಮಗೆ ಮುಸ್ಲಿಂ ಮುಲ್ಲಾಗಳು, ಕ್ರಿಶ್ಚಿಯನ್ ಪಾದ್ರಿಗಳ ಅನಾಚಾರ ಕಾಣುವುದಿಲ್ಲವೆ? ಎಂಬ ಪ್ರಶ್ನೆಯನ್ನು ಬಹಳಷ್ಟು ಮಂದಿ ಕೇಳಿದ್ದಾರೆ. ಮುಸ್ಲಿಂ ಕುರಿತು ನಮ್ಮ ಪ್ರಕಾಶನ ಪ್ರಕಟಿಸಿದ 'ನೀನಾ ಪಾಕಿಸ್ತಾನ' ಮತ್ತು 'ಮುಸ್ಲಿಂ' ಎಂಬ ಪುಸ್ತಕ ಕನ್ನಡ ಸಾರಸತ್ವ ಲೋಕದಲ್ಲೊಂದು ದಾಖಲೆಯನ್ನೆ ನಿರ್ಮಿಸಿದೆ. ಇದು ನಿಮ್ಮ ಗಮನಕ್ಕಿರಲಿ. ಇಷ್ಟಕ್ಕೂ ಇದು ನಮ್ಮ ಧರ್ಮ. ನಮ್ಮ ಧರ್ಮದೊಳಗೆ ನುಸುಳಿರುವ ಕ್ರಿಮಿಗಳನ್ನು ನಾವೇ ಹೊಡೆದಟ್ಟಬೇಕು. ಗೀತಾಚಾರ್ಯ ಶ್ರೀಕೃಷ್ಣ ಹೇಳಿದ್ದು ಇದನ್ನೆ. ಧರ್ಮ ಸಂಸ್ಥಾಪನಾರ್ಥಯ ಸಂಭವಾಮಿ ಯುಗೇ ಯುಗೇ...
I ಭಾವನಾ ಬೆಳಗೆರೆ
Share
Subscribe to our emails
Subscribe to our mailing list for insider news, product launches, and more.