A. P. J. ABDUL KALAM, Kannada Translation: Dr. Janardhan. K. S.
ಹಾರುವುದು ಹೇಗೆಂದು ಕಲಿಯುವುದು
ಹಾರುವುದು ಹೇಗೆಂದು ಕಲಿಯುವುದು
Publisher - Rupa Publications
- Free Shipping Above ₹250
- Cash on Delivery (COD) Available
Pages - 190
Type - Paperback
ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರು ಯುವಶಕ್ತಿಯ ಬಗ್ಗೆ ಬಹಳ ಹೆಚ್ಚಿನ ನಂಬಿಕೆಯನ್ನಿಟ್ಟುಕೊಂಡಿದ್ದರು. ಅವರು ಭಾರತದಲ್ಲಿ ಮತ್ತು ಹೊರ ದೇಶಗಳಲ್ಲಿ 21 ದಶಲಕ್ಷಗಳಿಗೂ ಹೆಚ್ಚು ಮಕ್ಕಳು ಮತ್ತು ಯುವಜನರನ್ನು ಭೇಟಿಯಾಗಿ ಸಮಾಜದಲ್ಲಿ ಬದಲಾವಣೆಯನ್ನು ತರಲು ತಿಳುವಳಿಕೆ, ಆಕಾಂಕ್ಷೆ, ನೈತಿಕ ವರ್ತನೆಗಳಿಗಿರುವ ಶಕ್ತಿಯ ಬಗ್ಗೆ ಉಪನ್ಯಾಸಗಳನ್ನು ನೀಡಿದ್ದರು. ಜೊತೆಗೆ ಅವರು ದೇಶದ ಮೂಲೆ ಮೂಲೆಗಳಿಗೂ ಸಂಚರಿಸಿ ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಲ್ಲಿನ ಯುವ ಜನತೆಯನ್ನು ಭೇಟಿಯಾದರು ಮತ್ತು ಅವರೊಡನೆ ಬದ್ಧತೆಯನ್ನು ಹೊಂದಿರುವ ಉಪಾಧ್ಯಾಯರ ರೀತಿಯಲ್ಲಿ ಸಂವಾದಗಳನ್ನು ನಡೆಸಿದರು.
“ಹಾರುವುದು ಹೇಗೆಂದು ಕಲಿತುಕೊಳ್ಳುವಿಕೆ" ಪುಸ್ತಕದಲ್ಲಿ ಶ್ರೀಯುತರು ನೀಡಿರುವ ಸುಮಾರು ಎರಡು ಸಾವಿರ ಉಪನ್ಯಾಸಗಳ ಪೈಕಿ ಕೆಲವನ್ನು ಸಂಗ್ರಹಿಸಲಾಗಿದೆ. ಈ ಉಪನ್ಯಾಸಗಳನ್ನು ಶಾಲೆಗಳು ಹಾಗೂ ಇನ್ನಿತರ ಸಂಸ್ಥೆಗಳ ಉಪಾಧ್ಯಾಯರು ಹಾಗೂ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾಡಲಾಗಿತ್ತು. ಪ್ರತಿಯೊಂದು ಉಪನ್ಯಾಸದಲ್ಲೂ ಅವರು ವ್ಯಕ್ತಿಯೊಬ್ಬ ತನ್ನ ಬದುಕಿಗಾಗಿ ಆತ್ಯುತ್ತಮ ರೀತಿಯಲ್ಲಿ ಸಿದ್ಧಗೊಳ್ಳುವುದು ಹೇಗೆ, ಸವಾಲುಗಳನ್ನು ಗುರುತಿಸಿ ಅವುಗಳಿಂದ ಪಾರಾಗುವುದು ಹೇಗೆ, ತನ್ನಲ್ಲಿನ ಅತ್ಯುತ್ತಮ ಅಂಶಗಳನ್ನು ಹೊರಹೊಮ್ಮಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಕನಸುಗಳ ಪ್ರಾಮುಖ್ಯತೆಯನ್ನು ಮತ್ತು ಅವುಗಳು ಸಾಕಾರಗೊಳ್ಳಲು ಬೇಕಾದ ತೀವ್ರತೆಯ ಶ್ರಮವನ್ನು ಸಾಧಿಸುವ ಬಗೆಯನ್ನು ತಮ್ಮ ಸ್ವಂತ ಬದುಕು, ಅವರ ಉಪಾಧ್ಯಾಯರು ಹಾಗೂ ಗುರುಗಳ ಬದುಕುಗಳ ಮೂಲಕ, ವಿಶ್ವದ ಕೆಲವು ಶ್ರೇಷ್ಠ ಪುರುಷರು ಮತ್ತು ಮಹಿಳೆಯರ ಕಥೆಗಳ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಇತ್ತೀಚಿನವರೆಗಿನ ಬೆಳವಣಿಗೆಗಳ ಮೂಲಕ ಅವರು ತೋರಿಸಿಕೊಟ್ಟಿದ್ದಾರೆ.
ತುಂಬಿರುವ ಆತ್ಮೀಯತೆ, ಸ್ಫೂರ್ತಿ ಹಾಗೂ ಧನಾತ್ಮಕ ಮನೋಭಾವದಿಂದ “ಹಾರುವುದು ಹೇಗೆಂದು ಕಲಿತುಕೊಳ್ಳುವಿಕೆಯು ಕಿರಿಯರು ಅಥವಾ ಹಿರಿಯರೆನ್ನದೆ ಎಲ್ಲಾ ಭಾರತೀಯರು ಅಗತ್ಯವಾಗಿ ಓದಲೇಬೇಕಾದ ಪುಸ್ತಕವಾಗಿದೆ.
Share
Subscribe to our emails
Subscribe to our mailing list for insider news, product launches, and more.