Skip to product information
1 of 1

Dr.Padekallu Vishnu Bhatta, Muliya Shankara Bhatta

ಗುರುಗೌರವ

ಗುರುಗೌರವ

Publisher - ಪಂಚಮಿ ಪಬ್ಲಿಕೇಷನ್ಸ್

Regular price Rs. 500.00
Regular price Rs. 500.00 Sale price Rs. 500.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕನ್ನಡ ಪಂಡಿತ ಪಂಜಜೆ ಶಂಕರ ಭಟ್ಟರ ಜನ್ಮಶತಮಾನೋತ್ಸವದ ನೆನಪಿನ ಸಂಪುಟ 'ಗುರುಗೌರವ'ಕ್ಕೆ ಮುನ್ನುಡಿಯ ಹೆಸರಿನಲ್ಲಿ ಕರಾವಳಿಯ ಪಂಡಿತ ಪರಂಪರೆಗೆ ಗೌರವ ಸಲ್ಲಿಸುವುದು ನನ್ನ ಪಾಲಿನ ಭಾಗ್ಯವಿಶೇಷ ಎಂದು ಭಾವಿಸಿದ್ದೇನೆ. ಸುಮಾರು ಆರು ದಶಕಗಳ ಹಿಂದೆ ಅಂತಹ ಪಂಡಿತ ಪರಂಪರೆಯ ಗುರುಗಳಿ೦ದ ಕನ್ನಡ ಪಾಠಗಳನ್ನು ಕಲಿತವನು ನಾನು, ಅಂತಹ ಭದ್ರ ಬುನಾದಿಯೇ ನನ್ನಂತಹ ಸಾವಿರಾರು ಮಂದಿ ವಿದ್ಯಾರ್ಥಿಗಳನ್ನು ಕನ್ನಡದ ಕಡೆಗೆ ಮತ್ತು ಶಿಕ್ಷಣದ ಕಡೆಗೆ ಸೆಳೆಯಲು ಕಾರಣವಾಯಿತು ಎನ್ನುವುದನ್ನು ಮರುನೆನೆದುಕೊಂಡಾಗ ಅಂತಹ ಹಿರಿಯರ ಬಗ್ಗೆ ಕೃತಜ್ಞತೆಯ ಭಾವ ಮೂಡುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕಾಸರಗೋಡು ಸಹಿತ ಅಂತಹ ಪಂಡಿತ ಪರಂಪರೆಯ ಬುನಾದಿಯ ಶಿಕ್ಷಣದ ಮೂಲಕ ಬೆಳೆದು ಬಂದ ಕಥನವನ್ನು ಸಂಪಾದಕರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಮತ್ತು ಮುಳೆಯ ಶಂಕರ ಭಟ್ಟರು ಕಟ್ಟಿಕೊಟ್ಟಿದ್ದಾರೆ.

ಈ ಕೃತಿಯಲ್ಲಿ ಚಿತ್ರಿತರಾದ ಪಂಡಿತರು ಬಹುಭಾಷೆಗಳ ನಾಡಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತೃಭಾಷೆಯ ಜೊತೆಗೆ ಎಲ್ಲರೂ ಕನ್ನಡ ಭಾಷೆಯನ್ನು ಪ್ರೀತಿಸಲು ಮತ್ತು ಕಲಿಯಲು ವಾತಾವರಣವನ್ನು ನಿರ್ಮಾಣ ಮಾಡಿದವರು. ಜೊತೆಗೆ ಕೃಷಿ ಪತ್ರಿಕೋದ್ಯಮ, ಸಹಕಾರ, ಅನುವಾದ, ಪ್ರಕಾಶನ, ಮಕ್ಕಳ ಶಿಕ್ಷಣ -ಇಂತಹ ಬಹುಬಗೆಯ ಚಟುವಟಿಕೆಗಳ ಮೂಲಕ ನಿಜವಾದ ಅರ್ಥದಲ್ಲಿ ಬಹುತ್ವದ ಬದುಕಿನ ಆದರ್ಶವನ್ನು ನಿಜಮಾಡಿದವರು.

ಇಂತಹ ಪರಿಶ್ರಮ ಮತ್ತು ಭಾಷಾಪ್ರೀತಿಯ ಕಾಯಕವನ್ನು ಮಾಡಿದ ಸಂಪಾದಕರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಮತ್ತು ಮುಳಿಯ ಶಂಕರ ಭಟ್ಟರನ್ನು ಅಭಿನಂದಿಸಲು ಸಂತೋಷಪಡುತ್ತೇನೆ.

- ಡಾ. ಬಿ. ಎ. ವಿವೇಕ ರೈ [ಮುನ್ನುಡಿಯಿಂದ]
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)