G. Ramnath Bhat
Publisher -
- Free Shipping
- Cash on Delivery (COD) Available
Couldn't load pickup availability
ರವೀಂದ್ರನಾಥ ಠಾಕೂರರ ಯೌವನದ ನಂತರದ ಬದುಕಿನ ಘಟನೆಗಳನ್ನು ಚಿತ್ರಿಸುವ ಕೃತಿ ಗುರುದೇವ (ಪುಸ್ತಕ ಎರಡು). ರವೀಂದ್ರರು ಆ ವೇಳೆಗಾಗಲೇ ಕವಿಯಾಗಿ, ಕಥೆಗಾರರಾಗಿ ತಮ್ಮ ಇರವನ್ನು ಸ್ಥಿರಪಡಿಸಿಕೊಂಡಿದ್ದರು.
ಮುಂದಿನದು ಸೃಜನಶೀಲತೆಯ ತುಮುಲದ ಬದುಕು. ರವೀಂದ್ರರ, ವಿವಾಹ, ಮಕ್ಕಳು, ಕುಟುಂಬ ಜೀವನದೊಂದಿಗೆ ಅವರ ಸೃಜನಶೀಲತೆಯೂ ವಿಸ್ತಾರಗೊಂಡಿತು. ಕಾದಂಬರಿಗಳನ್ನು ರಚಿಸಿದರು. ನಾಟಕ ರಚಿಸಿ ಪ್ರದರ್ಶಿಸಿದರು. ಕವಿತೆಗಳು, ಪ್ರಬಂಧಗಳು ಪ್ರಕಟವಾದವು. ಶಾಂತಿನಿಕೇತನದ ಸ್ಥಾಪನೆ, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡೇ ತಮ್ಮ ಕಾವ್ಯ ಕೃಷಿಯನ್ನು ಮುಂದುವರಿಸಿದರು. ಹಿತಶತ್ರುಗಳ ಕಿರುಕುಳ, ಅಪಮಾನ ಸಹಿಸಿಕೊಂಡರು. ಪತ್ನಿ, ಮಕ್ಕಳ, ಬಂಧುವರ್ಗದವರ ಸಾವಿನ ನೋವು, ಜೊತೆಗೆ ಬ್ರಿಟಿಷ್ ಸರಕಾರದ ವಕ್ರದೃಷ್ಟಿ, ಸ್ವಾತಂತ್ರ ಹೋರಾಟಗಾರರೊಂದಿಗೆ ಸಂಪರ್ಕ, ಹಲವು ಬಾರಿ ವಿದೇಶ ಪ್ರವಾಸ, 'ಗೀತಾಂಜಲಿ'ಗಾಗಿ ನೊಬೆಲ್ ಪಾರಿತೋಷಕ ಪುರಸ್ಕಾರ ಹೀಗೆ ರವೀಂದ್ರರ ಬದುಕಿನ ಹಲವು ರೋಚಕ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೃತಿ.
ಇದನ್ನು ರಚಿಸಿರುವ ಶ್ರೀ ಜಿ. ರಾಮನಾಥ ಭಟ್ ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಸಾಹಿತ್ಯಾಸಕ್ತರು, ಅದರಲ್ಲೂ ರವೀಂದ್ರರ ಕುರಿತು ವಿಶೇಷಜ್ಞತೆ, ರವೀಂದ್ರರ ಹಲವು ಕೃತಿಗಳ ಅನುವಾದ. ನಿವೃತ್ತಿ ನಂತರ ರವೀಂದ್ರರ ಕೃತಿಗಳ ಅನುವಾದ ದಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದಾರೆ. ರವೀಂದ್ರರ ಎಲ್ಲ ಕವಿತೆಗಳನ್ನೂ ಕನ್ನಡಕ್ಕೆ ಅನುವಾದಿಸಿರುವ ಹೆಗ್ಗಳಿಕೆ ಇವರದು.
