1
/
of
1
Shirisha Joshi
ಗುಜರಿ ತೋಡಿ
ಗುಜರಿ ತೋಡಿ
Publisher - ಸಾಹಿತ್ಯ ಭಂಡಾರ
Regular price
Rs. 300.00
Regular price
Rs. 300.00
Sale price
Rs. 300.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಗುಜರಿ ತೋಡಿ
ಕನ್ನಡದಲ್ಲಿ ಸಂಗೀತಗಾರರ ಕುರಿತಾಗಿ ಮತ್ತು ಸಂಗೀತದ ಕುರಿತಾಗಿ ಅಷ್ಟಾಗಿ ಕಾದಂಬರಿಗಳು ಇಲ್ಲ. ಅನಕೃ ಅವರ ಸಂಧ್ಯಾರಾಗ, ತರಾಸು ಅವರ ಹಂಸಗೀತೆ, ಮಾಸ್ತಿ ಅವರ ಸುಬ್ಬಣ್ಣ ಮತ್ತು ಸ್ವತಃ ಶಿರೀಷ ಅವರ ಯಶೋಗಾಥೆ, ಸೂರ್ಯದರ್ಶನ ಹೀಗೆ ಬೆರಳೆಣಿಕೆಯಷ್ಟು ಕಾದಂಬರಿಗಳಿವೆ. ಭೈರಪ್ಪನವರ ಜಲಪಾತ ಕೂಡ ಸಂಗೀತದ ಕುರಿತಾಗಿ ಚರ್ಚಿಸುತ್ತದೆ.
ಕಾದಂಬರಿ ಎನ್ನುವುದು ಲಘು ಓದು ಎನ್ನುವ ಅಪ್ರಾಮಾಣಿಕ ತಿಳಿವಳಿಕೆ ಸಂಗೀತ, ನೃತ್ಯ, ಚಿತ್ರಕಲೆ, ನಾಟಕ ಹೀಗೆ ವಿವಿಧ ಕಲಾಪ್ರಕಾರಗಳ ಸಾಧಕರು ಮತ್ತು ಸಾಧನೆಯ ಬಗ್ಗೆ ಕಾದಂಬರಿಯನ್ನು ಬರೆಯಲು ಬಹುಶಃ ಲೇಖಕರು ಹಿಂದೇಟು ಹಾಕಿರಬೇಕು. ಅಥವಾ ಇಂತಹ ವಸ್ತುವನ್ನು ನಿಭಾಯಿಸಲು ಬೇಕಾಗಿರುವ ವಿಶೇಷ ತಿಳಿವಳಿಕೆಯೊಂದು ಬಹಳಷ್ಟು ಲೇಖಕರಿಗೆ ಇಲ್ಲದೆ ಇರುವುದು ಕಾರಣವಾಗಿದೆ. ಬಹಳ ವಿಶೇಷವೆಂದರೆ, ಸಂಗೀತದ ವಸ್ತುವನ್ನು ಇಟ್ಟುಕೊಂಡುಬಂದ ಕನ್ನಡದ ಕಾದಂಬರಿಗಳು ನವೋದಯ ಕಾಲಘಟ್ಟದಲ್ಲಿ ಹುಟ್ಟಿದವುಗಳಾಗಿವೆ. ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಮಾರ್ಗದಲ್ಲಿ ಮುನ್ನಡೆಯುವ ಕಾದಂಬರಿಗಳಲ್ಲಿ ಈ ವಸ್ತುಗಳು ಇಲ್ಲವೇ ಇಲ್ಲವೆನ್ನಬೇಕು. ಇದಕ್ಕೆ ಅಪವಾದವೆಂದರೆ, ಶಿರೀಷ ಜೋಶಿ ಅವರು. ಜೋಶಿಯವರು ಸಂಗೀತ ಮತ್ತು ಸಾಹಿತ್ಯದಲ್ಲಿ ಒಲವು ಇಟ್ಟುಕೊಂಡಿರುವ ಕಾರಣದಿಂದಲೇ 'ಗುಜರಿ ತೋಡಿ' ಕಾದಂಬರಿ ಕನ್ನಡಿಗರ ಕೈಯಲ್ಲಿ ಇರುವಂತಾಗಿದೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಶಿರೀಷ ಜೋಶಿ ಅವರದು ನಿರಂತರವಾದ ಸಂಯಮದ ಭಾಷೆ, ಕಾಂತಾಸಮ್ಮಿತೆಯ ಭಾಷಿಕತೆ ಕಾದಂಬರಿಯನ್ನು ವೈದಾನಿಕ ನುಡಿ ನೋಟವಾಗಿ ಪರಿವರ್ತಿಸಿ ಓದುಗನನ್ನು ಅರಗಿಸಿಕೊಳ್ಳುವ ಕಲೆಗಾರಿಕೆ ಕಾದಂಬರಿಕಾರರಿಗೆ ಸಿದ್ಧಿಸಿದೆ.
ಚರಿತ್ರೆಯನ್ನು ಮೈಗೂಡಿಸಿಕೊಂಡಿರುವ ಇಲ್ಲಿಯ ಕಥನವಿನ್ಯಾಸ ಸಂಗೀತದ ಪ್ರಾಥಮಿಕ ತಿಳಿವಳಿಕೆ ಇಲ್ಲದವರನ್ನೂ ಕೂಡ ಸೆಳೆದುಕೊಳ್ಳುತ್ತದೆ. ಬೈಜೂನ ಸಂಗೀತಯಾತ್ರೆ ಅವನ ಬಾಲ್ಯದ ಕಡುಕಷ್ಟದ ದಿನಗಳು, ಸಂಗೀತಸಾಧನೆ, ಅವನ ಬದುಕಿನಲ್ಲಿ ಬಂದ ಕಷ್ಟ-ಕೋಟಲೆಗಳನ್ನು ಕಾದಂಬರಿ ಓದುಗನ ಮುಂದೆ ಹರವಿಕೊಳ್ಳುತ್ತ ಹೋಗುತ್ತದೆ.
ಡಾ| ಬಾಳಾಸಾಹೇಬ ಲೋಕಾಪುರ

Share

Subscribe to our emails
Subscribe to our mailing list for insider news, product launches, and more.