ಭಾರತೀಸುತ
Publisher: ಗೀತಾಂಜಲಿ ಪ್ರಕಾಶನ
Couldn't load pickup availability
ಗಿಳಿಯು ಪಂಜರದೊಳಿಲ್ಲ ಕಾದಂಬರಿಯು ಭಾರತೀಸುತರ ಬಹು ಮುಖ್ಯ ಕಾದಂಬರಿಗಳಲ್ಲೊಂದು. ವೈನಾಡಿನ ನಾಯರರಲ್ಲಿಯ ಪದ್ಧತಿಯಂತೆ ಮೊಪ್ಪಿಲ್ ನಾಯರರ ಮರುಮಗಳು ಕುಂಞಕಾವೆಯನ್ನು ಬ್ರಾಹ್ಮಣ ಸಂಬಂಧವಾಗಿ ಮಾಧವ ಯಂಬ್ರಾಂದಿಗೆ ವಿವಾಹ ಮಾಡಿಕೊಡಲಾಗುತ್ತದೆ. ಮಾಧವ ಮತ್ತು ಕುಂಞಕಾವೆಯ ನಡುವೆ ನವಿರಾದ ಪ್ರೇಮದ ಸೆಳೆಯಿದ್ದರೂ ಆಕೆಗೆ ಹಳೆ ಪದ್ಧತಿಯ ಬ್ರಾಹ್ಮಣ ಸಂಬಂಧದ ಇಷ್ಟವಿಲ್ಲ. ಆಕೆಯ ಅಣ್ಣ ಕುಂಕುಟ್ಟ ಇದನ್ನು ಬಲವಾಗಿ ಪ್ರತಿರೋಧಿಸಿದರೂ ಮೊಪ್ಪಿಲ್ ನಾಯರರ ಬಲವಂತ ಹಾಗೂ ಮಾಧವನಲ್ಲಿ ಮೂಡಿದ ಪ್ರೇಮದ ಸೆಳೆತ ಕಡೆಗೆ ಮಾಧವ ಯಂಬ್ರಾಂದ್ರಿಯೊಡನೆಯೇ ಆಕೆಯ ವಿವಾಹವಾಗಲು ಕಾರಣವಾಗುತ್ತದೆ. ಆದರೆ ತಾನು ಮದುವೆಯಾದದ್ದು ತನ್ನ ಸ್ವಂತ ತಂಗಿಯನ್ನೇ ಎಂಬುದು ಮಾಧವನ ಅರಿವಿಗೆ ಬರುತ್ತದೆ. ಹಿಂದೆ ಇದೇ ನಾಯರರಲ್ಲಿ ಕೆಲಸಮಾಡಿದ್ದ ತನ್ನ ತಂದೆಯೇ ಕುಂಞಕಾವೆಯ ತಂದೆಯೂ ಎಂದು ಹಳೆಯ ಪತ್ರಗಳ ಮೂಲಕ ರಹಸ್ಯ ಬಯಲಾದಾಗ ಹೇಳಿಕೊಳ್ಳಲಾಗದ ಯಾತನೆ ಸಂಕಟದ ಸುಳಿಗೆ ಸಿಲುಕುವ ಮಾಧವ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇಲ್ಲಿ ಪಂಜರದ ಗಿಳಿ ಇಬ್ಬರ ಬಾಳಿನ ದುರಂತದ ಸಂಕೇತವಾಗಿ ಚಿತ್ರಿಸಲ್ಪಟ್ಟಿದೆ. ಬೆಕ್ಕು ಕಾಲದ ಕ್ರೂರ ಕೈಯ್ಯಾಗಿ ಗಿಳಿಯನ್ನು ಹೊತ್ತೊಯ್ಯುವಂತೆ ಮಾಧವ ಮತ್ತು ಕುಂಞಕಾವೆಯ ಬದಕೂ ದುರಂತದಲ್ಲಿ ಮುಕ್ತಾಯವಾಗುತ್ತದೆ.
