Skip to product information
1 of 1

Y. N. Gundurao

ಘಮಘಮ ಮಸಾಲೆ ದೋಸೆ

ಘಮಘಮ ಮಸಾಲೆ ದೋಸೆ

Publisher - ಅಂಕಿತ ಪುಸ್ತಕ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಮಸಾಲೆ ದೋಸೆ

ಅಕ್ಕಿ-4 ಲೋಟ, ಉದ್ದಿನ ಬೇಳೆ-2 ಹಿಡಿ, ತೊಗರಿ ಬೇಳೆ-2 ಹಿಡಿ, ಅವಲಕ್ಕಿ 2 ಹಿಡಿ, ಮೆಂತ್ಯ-2 ಟೀ ಸ್ಪೂನ್ ಇಷ್ಟನ್ನೂ ಒಂದು ಪಾತ್ರೆಗೆ ಹಾಕಿ, ಅದು ಮುಳುಗುವಷ್ಟು ನೀರನ್ನು ಹಾಕಿ ಸುಮಾರು 5 ಗಂಟೆಗಳ ಕಾಲ ನೆನಸಿಡಿ, ಆನಂತರ ನೀರನ್ನು ಬಗ್ಗಿಸಿ ಮಿಶ್ರಣವನ್ನು ಗ್ರೈಂಡರಿನಲ್ಲಿ ರುಬ್ಬಿ (ನುಣ್ಣಗೆ), ಹಿಟ್ಟಿಗೆ ಮತ್ತಷ್ಟು ನೀರು ಸೇರಿಸಿ ಒಂದು ರಾತ್ರಿ ಹುದುಗಾಗಲು ಬಿಡಿ. ಬೆಳಗ್ಗೆ ಕಬ್ಬಿಣದ ದಪ್ಪ ತವವನ್ನು ಒಲೆಯ ಮೇಲಿರಿಸಿ ಚೆನ್ನಾಗಿ ಬಿಸಿ ಮಾಡಿ, ಆ ಬಳಿಕ ತವದ ಮೇಲೆ ತುಪ್ಪ ಅಥವಾ ಅಡುಗೆ ಎಣ್ಣೆಯನ್ನು ಸವರಿ, ಒಂದು ಚಿಕ್ಕದಾದ ಬಟ್ಟಲಿನಿಂದ ದೋಸೆ ಹಿಟ್ಟನ್ನು ಹಾಕಿ ದುಂಡಾಗಿ ಅಗಲಿಸಿ, ಕೆಲವು ಕ್ಷಣಗಳ ನಂತರ ದೋಸೆಯ ತಳ ಮಗ್ಗಲು ಚೆನ್ನಾಗಿ ಬೆಂದು ಕಂದು ಬಣ್ಣಕ್ಕೆ ತಿರುಗಿರುತ್ತದೆ. ದೋಸೆಯ ಮೇಲು ಮಗ್ಗಲಿನ ಮೇಲೆ ತುಪ್ಪ ಅಥವಾ ಎಣ್ಣೆಯನ್ನು ಸವರಿ, ಒಣಮೆಣಸಿನ ಕಾಯಿಯ ಕೆಂಪು ಚಟ್ಟಿಯನ್ನು ಸವರಿ. ಆಗ ಮೂಗರಳಿಸುವ ವಾಸನೆ ಹೊರ ಹೊಮ್ಮುತ್ತದೆ. ಈಗ ಈರುಳ್ಳಿ-ಆಲೂಗಡ್ಡೆಹಸಿಮೆಣಸಿನ ಕಾಯಿ ಚೂರುಗಳನ್ನು ಬೇಯಿಸಿ ಉಪ್ಪು ಬೆರೆಸಿದ ಪಲ್ಯವನ್ನು ದೋಸೆಯ ಅರ್ಧ ಭಾಗಕ್ಕಿಟ್ಟು ದೋಸೆಯನ್ನು ಮಗುಚುವ ಕೈಯಿಂದ ಮಡಸಿ, ಮಸಾಲೆ ದೋಸೆ ಸಿದ್ಧವಾಯಿತು! ಇದನ್ನು ಪ್ಲೇಟಿನ ಮೇಲೆ ಹಾಕಿಕೊಂಡು, ಬಟಾಣಿ ಅಥವಾ ಹುರಿಗಡಲೆ ಚಟ್ಟಿಯೊಂದಿಗೆ ಸವಿಯಿರಿ.

ದೋಸೆಗೆ ಕಾಲಿ ದೋಸೆ, ಸೆಟ್ ದೋಸೆ, ನೀರ್ ದೋಸೆ, ಪ್ಲೇನ್ ದೋಸೆ, ಈರುಳ್ಳಿ ದೋಸೆ, ಮೆಂತ್ಯದ ದೋಸೆ, ಪೇಪರ್ ಮಸಾಲೆ, ರವೆ ಮಸಾಲೆ, ಬಟರ್ ಮಸಾಲೆ, ಮೈಸೂರು ಮಸಾಲೆ ಹೀಗೆ ನಾನಾ ಅವತಾರಗಳಿರಬಹುದು. ಆದರೂ ಎಲ್ಲಕ್ಕೂ ಧಿಮಾಕಿನ ರಾಜನಂತೆ ಅಂದಿಗೂ ಇಂದಿಗೂ ಎಂದೆಂದಿಗೂ ದೋಸೆಗಳ ರಾಜ ಮಸಾಲೆ ದೋಸೆಯೇ !

- ಕೆ.ಎನ್. ಭಗವಾನ್
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)