Pranav Bharadwaj
ಜಾಮಿಟ್ರಿ ಬಾಕ್ಸ್
ಜಾಮಿಟ್ರಿ ಬಾಕ್ಸ್
Publisher - ಸ್ನೇಹ ಬುಕ್ ಹೌಸ್
Regular price
Rs. 75.00
Regular price
Rs. 75.00
Sale price
Rs. 75.00
Unit price
/
per
- Free Shipping Above ₹250
- Cash on Delivery (COD) Available
Pages - 48
Type - Paperback
ಪ್ರಣವ್ ತನ್ನ ಈ 'ಜಾಮೆಟ್ರಿ ಬಾಕ್ಸ್' ನಲ್ಲಿ ಇಟ್ಟಿರುವುದು ಗಣಿತದ ರೇಖಾಚಿತ್ರಗಳನ್ನು ಬಿಡಿಸಲು ಬಳಸುವ ಉಪಕರಣಗಳನ್ನಲ್ಲಾ, ಬದಲಿಗೆ ಮೆದುಳಿಗೆ ಮತ್ತು ಮನಸ್ಸಿಗೆ ಮುದ ನೀಡುವ ನೀತಿ ಕಥೆಗಳನ್ನು. ಈ ಕಥೆಗಳಲ್ಲಿ ಬರುವ ಪಾತ್ರಗಳು ಮತ್ತು ದೃಶ್ಯಗಳು, ಚಿಕ್ಕಂದಿನಲ್ಲಿ ನಮ್ಮ ಅಜ್ಜ ಅಜ್ಜಿಯರು ಹೇಳುತ್ತಿದ್ದ ನೀತಿ ಕಥೆಗಳನ್ನು ನೆನಪಿಗೆ ತರುತ್ತದೆ. ಪ್ರಣವ್‌ನ ಅಜ್ಜ ಅಜ್ಜಿಯರ ನೀತಿ ಪಾಠದ ಪ್ರಭಾವವೂ ಈ ಕಥೆಗಳ ರಚನೆಯಲ್ಲಿ ಇರಬಹುದು ಎಂದನಿಸುತ್ತದೆ.
ರಾಜನಾಗಲು ಇರಬೇಕಾದ ವಿವೇಚನಾ ಸಾಮರ್ಥ್ಯ, ಮಕ್ಕಳ ಆಸಕ್ತಿ ಮತ್ತು ಪ್ರತಿಭೆಯನ್ನು ಗುರುತಿಸುವಲ್ಲಿ ಪೋಷಕರ ಪಾತ್ರ, ದೇಶ ಭಕ್ತಿ, ಉದ್ದೇಶ ಪೂರ್ವಕವಾಗಿ ಅಲ್ಲದಿದ್ದರೂ ತನ್ನಿಂದಾಗುವ ತಪ್ಪುಗಳಿಗೆ ಕ್ಷಮೆ ಕೋರುವ ಮನೋಭಾವದ ಮಹತ್ವ, ಹೊಗಳಿಕೆಯ ಬೆನ್ನೇರಿ ಹೋಗದಿರುವುದು, ತಪ್ಪು ಮಾಡಿದರೆ ಉಂಟಾಗುವ ಅಳುಕು ಮತ್ತು ಭಯ, ಕ್ಷಮೆ ಕೋರುವ ಸೌಜನ್ಯ, ಪರೋಪಕಾರದ ಮಹತ್ವ, ಚಾಣಾಕ್ಷತೆ, ಮೊಬೈಲ್ ಮೇನಿಯಾದಿಂದ ಹೊರಬರಲು ಬಳಸುವ ಅರಣ್ಯವಾಸದ ಸನ್ಮಾರ್ಗದಿಂದಾಗಿ ಮಕ್ಕಳಿಗೆ ಮರಗಳು, ಗಿಡಗಳು, ಪ್ರಾಣಿಗಳು, ಪಕ್ಷಿಗಳ ಪರಿಚಯವಾಗುವುದು. ಹೀಗೆ ಹತ್ತು ಹಲವು ವಿಷಯಗಳ ಕುರಿತು ಮಕ್ಕಳ ಮನ ಸೂರೆಗೊಳ್ಳಲು ಈ ಕೃತಿಗೆ ಸಾದ್ಯವಾಗಿದೆ.
ಮಕ್ಕಳ ಮನಸ್ಸಿನಲ್ಲಿ ನ್ಯಾಯಾ, ನೀತಿ, ದೇಶಪ್ರೇಮದ ಬಣ್ಣ ಬಣ್ಣದ ಚಿತ್ತಾರ ಮೂಡಿಸುವ, ಒಂದು ಮಗು ಹೃದಯದ ಸಂತೋಷ ಮತ್ತು ತುಂಟತನದ ಅದ್ಭುತಗಳ ಸುಂದರವಾದ ಕಥೆಗಳ ಸಂಕಲನವೇ ಈ ಕೃತಿ.
-ಮಾಯಾ, ಚಿ. ನಾಯರ್

Share
Subscribe to our emails
Subscribe to our mailing list for insider news, product launches, and more.