Chandrakantha Pokale
ಗಾರ್ಡನ್ ಆಫ್ ಈಡನ್ ಅರ್ಥಾತ್ ಸಾಯೀ ಸೊಸೈಟಿ
ಗಾರ್ಡನ್ ಆಫ್ ಈಡನ್ ಅರ್ಥಾತ್ ಸಾಯೀ ಸೊಸೈಟಿ
Publisher - ಐಬಿಹೆಚ್ ಪ್ರಕಾಶನ
Regular price
Rs. 210.00
Regular price
Rs. 210.00
Sale price
Rs. 210.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಮಕರಂದ ಸಾಠೆಯವರು ಈ ಕಾದಂಬರಿಯಲ್ಲಿ ತೃತೀಯ ಪುರುಷ ನಿವೇದಕನ ಮೂಲಕ ನಮ್ಮ ಈಗಿನ ವರ್ತಮಾನ ಕಾಲವನ್ನು ವಿದ್ರಾವಕವಾಗಿ ಚಿತ್ರಿಸುತ್ತಾರೆ.ಇದು ನಮ್ಮ ಸಮಕಾಲೀನ ಮರುಭೂಮಿ, ಇಲ್ಲಿ ಹಲವು ಕಾಲಗಳು ಜಡವಾದ ಗುಂಡಿನಂತೆ ಪರಸ್ಪರರ ಮೇಲೆ ಕರ್ಕಶವಾಗಿ ಎರಗಿ ಜಡತ್ವನ್ನು ತರುತ್ತವೆ. ವಿಕಾಸದ ಹೆಸರಿನಲ್ಲಿ ಅಗಲವಾಗುವ ಆರ್ಥಿಕ - ಕಂದಕಗಳು ಸಮಾಜದ ಸಾಮಾಜಿಕತೆಯನ್ನೇ ಭಗ್ನ ಮಾಡುತ್ತವೆ. ವ್ಯಕ್ತಿಯ ಖಂಡಿತ ಅಸ್ಮಿತೆಯ ಕಕ್ಕಾವಿಕ್ಕಿ ತುಣುಕುಗಳು ಒಮ್ಮೆ ಹಿಂಸಕ ಹಿಂದಿನ, ಮತ್ತೊಮ್ಮೆ ವ್ಯಾಕುಲಗೊಳಿಸುವ ಒಂಟಿತನದ ರೂಪವನ್ನು ಧರಿಸುತ್ತವೆ. ಅಲ್ಲಿ ವಾಸ್ತವದಿಂದ ಕಳಚಿದ ವರ್ಧಿತ ವಾಸ್ತವ (Augmented Reality) ಸೌರ್ವಭೌಮವಾಗುತ್ತ ಸಾಗುತ್ತದೆ. ಇಂಥ ಫಲಪ್ರದವಾದ ಮರುಭೂಮಿಯಲ್ಲಿ ಜಾತಿವಾದದ ಧರ್ಮಾಂಧತೆಯ ಏಕಾಧಿಕಾರಶಾಹಿಯ ಕ್ರೂರ ವಿಷಯ ಪ್ರತಿಗಳಿಗೆ ತೊಟ್ಟಿಕ್ಕುತ್ತ, ಇಂಗುತ್ತ ಧಗಧಗಿಸುತ್ತಿರುತ್ತದೆ. ಆ ಮೂಲಕ ಪ್ರತಿನಿತ್ಯ ಹಿಂಸೆಯ ಕ್ರೂರರೂಪ ಸಾಕಾರವಾಗುತ್ತಿರುತ್ತದೆ. ದಿಙ್ಮೂಢಗೊಳಿಸುವ ಮರಭೂಮಿಯಲ್ಲಿಯ ಫಳಫಳಿಸುವ ಮೃಗಜಲವೆಂದರೆ 'ಗಾರ್ಡನ್ ಆಫ್ ಈಡನ್, ಅರ್ಥಾತ್ ಸಾಯೀ ಸೊಸೈಟಿ.” ಆದರ ನೀರವ ಆವರಣದೊಳಗೆ ಈ ಕಾದಂಬರಿಯಲ್ಲಿಯ ತೀರ ವಿಭಿನ್ನವಾದ ಸಾಮಾಜಿಕ ಆರ್ಥಿಕ ಸ್ತರದಿಂದ ಬರುವ ಪ್ರಮುಖ ಪಾತ್ರಗಳು ಆಕಸ್ಮಿಕವಾಗಿ ಪರಸ್ಪರ ಮುಖಾಮುಖಿಯಾಗುತ್ತವೆ.
ಈ ಉತ್ತರ ಆಧುನಿಕತೆಗೆ ಮುಖಾಮುಖಿಯಾಗುವಾಗ ಒಂದು ವೇಳೆ ವ್ಯಾಮಿಶ್ರದ ಇಲ್ಲವೇ ಅಹಂಕಾರದ ಗುರಾಣಿಯನ್ನು ಮುಂದೆ ಮಾಡದೇ ನಿಲುವನ್ನು ತಾಳುವ ಗಂಡಾಂತರವನ್ನು ಸ್ವೀಕರಿಸಬೇಕೆಂದಿದ್ದರೆ ಮತ್ತೊಮ್ಮೆ ಉತ್ತರ-ಆಧುನಿಕತೆಯ ಅನಂತರದ 'ಆಧುನಿಕತೆ'ಯ ಹೊರತು ಪರ್ಯಾಯವಿಲ್ಲವೆಂದು ಸೂಚಿಸುತ್ತಾರೆ ಸಾಠೆ. ಅದು ನಮ್ಮೆದುರಿನ ನಿರ್ಣಾಯಕ ಸಮಸ್ಯೆಗಳನ್ನೂ ಸ್ಥಳ-ಕಾಲ ಸಾಪೇಕ್ಷದ ಸಂರಕ್ಷಣಾತ್ಮಕ ಮಾನದಂಡದ ಆಚೆಗೆ ಒಯ್ಯುತ್ತ ಸಾರ್ವತ್ರಿಕತೆಯನ್ನು ಎದುರಿಸಲು ಮುಂದಾಗುತ್ತದೆ. ಸಾಕ್ರೆಟಸ್‌ನಂತೆ ನಿರಪೇಕ್ಷ ಸತ್ಯಕ್ಕಾಗಿ ಒತ್ತಾಯ ಮಾಡುತ್ತದೆ... ಈ ಸಿಸಿಫಿಯನ್ ಪ್ರಯಾಸವನ್ನು ಗೂಢವಾದಿ ಆತ್ಮೀಕದ ನಿರ್ವಾತ ಪೊಳ್ಳಿನಿಂದ ಹೊರಗೆಳೆದು ತರುತ್ತ ಭೌತಿಕತೆಗೆ ಮುಖಾಮುಖಿಯಾಗಿಸುವುದೇ ಈ ಕಾದಂಬರಿಯ ಯಶ. ಈ ವ್ಯಾಮಿಶ್ರ ವೈಚಾರಿಕ ಪಟವು ಇಲ್ಲಿ ರಹಸ್ಯ ಕಥೆಯಂತೆ ಅನಾವರಣಗೊಳ್ಳುವದೇ ಈ ಕಾದಂಬರಿಯ ನಿಜವಾದ ಶಕ್ತಿ.

Share
Subscribe to our emails
Subscribe to our mailing list for insider news, product launches, and more.