Skip to product information
1 of 1

K. R. Mohan

ಗಣಿತದ ಪ್ರಶ್ನೋತ್ತರಗಳು

ಗಣಿತದ ಪ್ರಶ್ನೋತ್ತರಗಳು

Publisher - ಸಪ್ನ ಬುಕ್ ಹೌಸ್

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಪೀಠಿಕೆ

ಗಣಿತ ಒಂದು ಜಟಿಲ ವಿಷಯವೆಂದೂ ಅದನ್ನು ವಿದ್ವತ್ ಪ್ರಪಂಚದ ಪ್ರಮುಖರು ಮಾತ್ರ ಕರಗತ ಮಾಡಿಕೊಳ್ಳಬಲ್ಲರೆಂದೂ ಹಿಂದೆ ತಿಳಿಯಲಾಗುತ್ತಿತ್ತು. ಆದರೆ ಈಗದು ಸತ್ಯಾಂಶವಾಗಿ ಉಳಿದಿಲ್ಲ. ಇಂದು, ಓದಿನಲ್ಲಿ ಆಸಕ್ತಿಯುಳ್ಳ ಹಾಗು ಸಂಖ್ಯೆಗಳ ಬಗ್ಗೆ ಅಭಿರುಚಿಯಿರುವ ಯಾರಾದರೂ ಮೂಲಗಣಿತದ ಸಮರೂಪತೆ ಮತ್ತು ಸಾಮರಸ್ಯದಲ್ಲಿ ಹಾಗು ಗಣಿತ ಸಮಸ್ಯೆಗಳನ್ನು ಬಿಡಿಸುವುದರಲ್ಲಿ ಅಪಾರ ಆನಂದವನ್ನು ಕಾಣಬಹುದು.

ನಮ್ಮ ಮಕ್ಕಳ ಹಾಗು ಯುವಜನತೆ ಗಣಿತದಲ್ಲಿ ಆಸಕ್ತಿ ಹೊಂದುವಂತೆ ಮಾಡುವ ಉದ್ದೇಶದಿಂದ ಈ 'ಗಣಿತದ ಪ್ರಶೋತ್ತರಗಳು' ಪುಸ್ತಕವನ್ನು ಬರೆಯಲಾಗಿದೆ. ಕ್ಲಿಷ್ಟಕರ ಸೂತ್ರಗಳು ಮತ್ತು ಸಂಕೀರ್ಣ ಗಣಿತ ಸಂಸ್ಕರಣಗಳನ್ನೊಳಗೊಂಡ ಪುಸ್ತಕಗಳಿಗಿಂತ ಇದು ಭಿನ್ನವಾಗಿದೆ.

ಈ ಪುಸ್ತಕವನ್ನು 25 ಅಧ್ಯಾಯಗಳಲ್ಲಿ ಕೊಡಲಾಗಿದೆ. ಇವು ಗಣಿತದ ಶಾಖೆಗಳು, ಸಂಖ್ಯೆಗಳ ಚರಿತ್ರೆ, ಆಧುನಿಕ ಸಂಖ್ಯೆಗಳು, ಗಣಸಿದ್ಧಾಂತ, ಅಂಶ ಗಣಿತ, ಬೀಜ ಗಣಿತ, ಸಮತಲ ರೇಖಾಗಣಿತ, ಘನರೇಖಾಗಣಿತ, ವಿಶ್ಲೇಷಣಾ ಜ್ಯಾಮಿತಿ, ದಿಕ್' ಪರಿಣಾಮ ವಿಶ್ಲೇಷಣೆ, ತ್ರಿಕೋನಮಿತಿ, ಕಲನಶಾಸ್ತ್ರ, ಸಂಖ್ಯಾ ಪರಿಶೀಲನಾ ಶಾಸ್ತ್ರ ಸಂಭವನೀಯತೆ, ಆಟ ಸಿದ್ಧಾಂತ, ಗಣಿತ ಹತ್ಯಾರಗಳು ಮತ್ತು ಉಪಕರಣಗಳು, ಗಣಕಗಳು ಮತ್ತು ಗಣಿತ, ಗಣಿತ ಶಾಸ್ತ್ರದ ಪ್ರಖ್ಯಾತ ಪುರುಷರು, ಗಣಿತದ ಅನ್ವಯಕಗಳು, ಬುದ್ಧಿಗೆ ಕಸರತ್ತು, ಮಾನಕಗಳು ಮತ್ತು ಗಣಿತದ ಚಿಹ್ನೆಗಳು.

ಈ ಪುಸ್ತಕವನ್ನು ಸರಳ ಪ್ರಶೋತ್ತರ ರೂಪದಲ್ಲಿ ಸುಲಭ ಭಾಷೆಯಲ್ಲಿ ಬರೆಯಲಾಗಿದೆ. ವಿಷಯ ಸುಲಭ ಗ್ರಾಹ್ಯವೂ, ರೋಚಕವೂ ಆಗುವಂತೆ ಪ್ರತಿ ಅಧ್ಯಾಯದಲ್ಲೂ ಅನೇಕ ಚಿತ್ರಗಳನ್ನು ಅಳವಡಿಸಲಾಗಿದೆ. ಈ ಪುಸ್ತಕವು ಹದಿಹರೆಯದವರಿಗೆ ತುಂಬ ಉಪಯುಕ್ತವಾಗುವುದೆಂದು ಆಶಿಸುತ್ತೇನೆ.

ಕ.ರಾ. ಮೋಹನ್

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)