Skip to product information
1 of 1

Ganapathi Hegde Moodkani

ಗಣಿತ ಕಲಿಕೆಗೆ ಎಷೊಂದು ಆಟಗಳು

ಗಣಿತ ಕಲಿಕೆಗೆ ಎಷೊಂದು ಆಟಗಳು

Publisher - ನವಕರ್ನಾಟಕ ಪ್ರಕಾಶನ

Regular price Rs. 95.00
Regular price Rs. 95.00 Sale price Rs. 95.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಈ ಪುಸ್ತಕವು 150ಕ್ಕೂ ಹೆಚ್ಚು ಆಟಗಳನ್ನು ಒಳಗೊಮ್ಡಿದ್ದು ಮೂರು ನೂರಕ್ಕೂ ಹೆಚ್ಚಿನ ಮೂಲಭೂತ ಸಾಮರ್ಥ್ಯಗಳನ್ನು ಆಟಗಳ ಮೂಲಕ ಕಲಿಯುವ/ಕಲಿಯುವಂತೆ ಮಾಡುವ ವಿಧಾನವನ್ನು ಒಳಗೊಂಡಿರುತ್ತದೆ. ಇಲ್ಲಿ ಬರುವ ಹೆಚ್ಚಿನ ಆಟಗಳು ಗುಂಪಿನ ಆಟಗಳಾಗಿದ್ದು ಈ ಆಟಗಳಲ್ಲಿ ತನ್ನ ಗುಂಪು ಗೆಲ್ಲಬೇಕು ಎಂಬ ಕಾರಣಕ್ಕಾಗಿ ಹೆಚ್ಚು ವೇಗವಾಗಿ ಲೆಕ್ಕ ಮಾಡಬಲ್ಲ ವಿದ್ಯಾರ್ಥಿ ನಿಧಾನ ಕಲಿಕೆಯ ಮಗುವಿಗೆ ತನ್ನಿಂದಾದ ಸಹಾಯ ಮಾಡಿ ಅವನೂ ವೇಗವಾಗಿ ಕಲಿಯಲು ಅರಿವಿಲ್ಲದಂತೆ ನೆರವಾಗುತ್ತಾನೆ. ಹಾಗೆಯೇ ಆ ವಿದ್ಯಾರ್ಥಿಯೂ ಕೂಡ ಗೆಲುವಿಗಾಗಿ ಕಲಿಯಲು ಆಸಕ್ತಿ ತೋರುತ್ತಾನೆ. ಒಮ್ಮೆ ಆಡುವ ಮೂಲಕ ಗೆಲುವಿಗಾಗಿ ಗಣಿತದ ಮೂಲ ಸಾಮರ್ಥ್ಯವನ್ನು ಕಲಿತ ವಿದ್ಯಾರ್ಥಿಗೆ ಮುಂದಿನ ಗಣಿತ ಕಲಿಕೆ ಸುಲಭ ಸಾಧ್ಯವಾಗುತ್ತದೆ. -ಲೇಖಕರ ನುಡಿಯಿಂದ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರಾದ ಗಣಪತಿ ಹೆಗಡೆ ಮೂಡ್ಕಣಿ ವಿಜ್ಞಾನ ಪದವೀಧರರು. ಗಣಿತ ಹಾಗೂ ವಿಜ್ಞಾನ ಕಲಿಕೆಯಲ್ಲಿ ಹೊಸ ಹೊಸ ಪ್ರಯೋಗ ನಿರತರಾದ ಇವರು ಆಟದೊಂದಿಗೆ ಗಣಿತ ಕಲಿಕೆಯನ್ನು ಯಶಸ್ವಿಯಾಗಿ ಮಕ್ಕಳಿಗೆ ಕಲಿಸುತ್ತ “ಜಗದೊಡೆಯ ಎಂಬ ಮಕ್ಕಳ ನಾಟಕವನ್ನೂ ಪ್ರಕಟಿಸಿದ್ದಾರೆ. ಹಲವು ಪತ್ರಿಕೆಗಳವರು ಇವರ ಆಟದ ಕಲಿಕೆಯನ್ನು ಮೆಚ್ಚಿ ಪ್ರಶಂಸಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ "TAFIT" ರಾಜ್ಯ ಪ್ರಶಸ್ತಿ ನೀಡಿದೆ. ಲೇಖಕರು ಇದೀಗ ತಾರಗೋಡ ಎಂಬಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)