Skip to product information
1 of 1

Nagesh Hegde

ಗಗನಸಖಿಯರ ಸೆರಗ ಹಿಡಿದು

ಗಗನಸಖಿಯರ ಸೆರಗ ಹಿಡಿದು

Publisher - ಭೂಮಿ ಬುಕ್ಸ್

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 130

Type - Paperback

ಹೊಸ ಓದುಗರ. ಹೊಸ ಓದಿಗಾಗಿ

'ಇದು ಕನ್ನಡಕ್ಕೆ ಹೊಸ ಬಗೆಯ ಪ್ರವಾಸ ಕಥನ' ಎಂಬ ಮೆಚ್ಚುಗೆ ಯೊಂದಿಗೆ 25 ವರ್ಷಗಳ ಹಿಂದೆ ಕನ್ನಡ ಓದುಗರ ಮನದುಂಬಿದ ಕೃತಿ ಇದಾಗಿತ್ತು. ಈಗ ಹೊಸ ಓದುಗರ ಕೈತುಂಬಲೆಂದು ಬಂದಿದೆ.

ವಿಜ್ಞಾನದ ಹಿನ್ನೆಲೆಯುಳ್ಳ ಪತ್ರಕರ್ತನ ವರದಿಗಾರಿಕ ಇಲ್ಲಿದೆ. ಆದರೆ ವರದಿಯಂತಿಲ್ಲ. ಇಂದಿಗೂ ಸಲ್ಲುವ ಅಂದಿನ ವಿದ್ಯಮಾನಗಳ ವಿವರಗಳಿವೆ; ಆದರೆ ಒಣ ವಿಶ್ಲೇಷಣೆ ಇಲ್ಲ. ಈ ತುದಿಯ ಹಾಂಗ್‌ ಕಾಂಗ್‌ನಿಂದ ಹಿಡಿದು ಆ ತುದಿಯ ಬ್ರಝಿಲ್‌ ವರೆಗಿನ ವ್ಯಂಗ್ಯ, ವಿನೋದ, ತರಲೆ-ತಮಾಷೆಗಳಿವೆ, ಆದರೆ ತಲೆಬಿಸಿಯ ಜಿಜ್ಞಾಸೆಯಿಲ್ಲ. ಗಗನಸಖಿಯರೊಂದಿಗೆ ನಾನಾದೇಶಗಳಲ್ಲಿ ಓಡಾಡಿದ, ಒಡನಾಡಿದ ತುಂಟ ವಿವರಗಳಿವೆ; ಆದರೆ ಎಲ್ಲೂ ಎಲ್ಲೆ ಮೀರಿಲ್ಲ.

ಯೆಲ್ಲೊಸ್ಟೋನ್ ಪಾರ್ಕಿನಲ್ಲಿ ಯಕ್ಷಗಾನ ಪಾತ್ರದಂತ ಮೆರೆಯುವ ಬಣ್ಣದ ಕೊಳಗಳು; ಭೀಷ್ಮ, ಘಟೋತ್ಸವ ಕಾಲದಿಂದಲೂ ವಿಶಾಲ ಜಗತ್ತನ್ನು ನೋಡುತ್ತಿರುವ ಬೃಹತ್ ಸಿಕೊಯಾ ಮರಗಳು ವಿಯೆಟ್ನಾಮಿನಲ್ಲಿ ಗತಿಸಿದ ಯೋಧರ ಹೆಸರನ್ನು ಹೊತ್ತು ವಾಷಿಂಗ್ಟನ್ ನಲ್ಲಿ ನಿಂತು ನಮ್ಮ ಕೊಳ್ಳೇಗಾಲದ ಶಿಲೆಗಳು; ಪ್ರಧಾನಮಂತ್ರಿಯವರನ್ನು ಹೊತ್ತು ಮೆರೆದ ವಿಮಾನದ ವೈಭವಗಳು..

“ಏನೇ ಬರೆದರೂ ಹೊಸತನದ ಮಾಂತ್ರಿಕ ಸ್ಪರ್ಶ ಕೊಡುವ ನಾಗೇಶ ಹೆಗಡೆಯವರ ಈ ಬರಹಗಳು ಒಮ್ಮೆ ಕಥೆಯಂತಾದರೆ, ಒಮ್ಮೆ ವರದಿಯಂತಾಗಿ, ಮರುಕ್ಷಣದಲ್ಲೇ ಛಂಗನೆ ಅತ್ಯಪೂರ್ವ ಪ್ರವಾಸಕಥನಗಳಾಗಿಬಿಡುತ್ತವೆ.

-ಲಿಂಗರಾಜು (ವಿಮರ್ಶಕ), 1096ರ ಬೆನ್ನುಡಿಯಲ್ಲಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)