Skip to product information
1 of 1

Prof. G. Venkatasubbaiah

ಎರವಲು ಪದಕೋಶ

ಎರವಲು ಪದಕೋಶ

Publisher - ನವಕರ್ನಾಟಕ ಪ್ರಕಾಶನ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಒಂದು ಭಾಷೆಗೆ ಬೇರೊಂದು ಭಾಷೆಯಿಂದ ಎರವಲಾಗಿ ಬಂದು ಬಳಕೆಯಾಗುವ ಪದಗಳ ಕುರಿತ ವ್ಯಾಸಂಗವು ಭಾಷಾಶಾಸ್ತ್ರದ ಬಹು ಮುಖ್ಯವಾದ ಅಂಗವಾಗಿದೆ. ಇದು ಭಾಷೆಯ ದೃಷ್ಟಿಯಿಂದ ಮಾತ್ರವಲ್ಲದೆ ಸಂಸ್ಕೃತಿಯ ದೃಷ್ಟಿಯಿಂದಲೂ ಪ್ರಧಾನವಾಗಿದೆ. ಹಲವು ವರ್ಷಗಳ ಅವಧಿಯಲ್ಲಿ, ಕೆಲವು ಪ್ರಭಾವಗಳಿಂದ ತನ್ನಷ್ಟಕ್ಕೆ ನಡೆದು ಹೋಗುವ ಪದಗಳ ಇಂಥ ಹೊಕ್ಕುಬಳಕೆಯ ರೋಚಕವಾದ ಪ್ರಕ್ರಿಯೆ. ಅರ್ಥವ್ಯಾಪ್ತಿಯು ಅತ್ಯಂತ ರೋಚಕವಾದ ಪ್ರಕ್ರಿಯೆ.

ಎರವಲು ಪದಗಳು ಕನ್ನಡದ ಸ್ವಭಾವವನ್ನೂ ಸ್ವರೂಪವನ್ನೂ ಹೇಗೆ ಪಡೆಯುತ್ತವೆ ಎಂಬುದನ್ನು ತಿಳಿದಾಗ ಅಚ್ಚರಿಯಾಗುತ್ತದೆ. ಸಾಮಾನ್ಯವಾಗಿ ಜನರು ತಮ್ಮ ಧ್ವನ್ಯಂಗಗಳಿಗೆ ಹೊಂದಿಕೊಳ್ಳುವಂತೆ ಹೊಸ ಶಬ್ದಗಳನ್ನು ಉಚ್ಚರಿಸಿ, ಅವುಗಳಿಗೆ ಸ್ವರೂಪವನ್ನೂ ಉಚ್ಚಾರಣೆಯನ್ನೂ ನಿರ್ಧರಿಸುತ್ತಾರೆ. ಅವು ಹಾಗೇ ನಿಂತುಬಿಡುತ್ತವೆ. ಹೀಗೆ ಮಾಡುವವರು
ಭಾಷಾಶಾಸ್ತ್ರಜ್ಞರಾಗಲೀ, ವಿದ್ವಾಂಸರಾಗಲೀ ಅಲ್ಲ. ಹೀಗೆ ಹಲವು ಭಾಷೆಗಳಿಂದ ಬಂದು ಕನ್ನಡವನ್ನು ಅಲಂಕರಿಸಿರುವ, ಸಮೃದ್ಧಗೊಳಿಸಿರುವ ಎರವಲು ಪದಗಳ ಮೂಲವನ್ನು ಶೋಧಿಸಲು ಮಾಡಿದ ಪ್ರಯತ್ನದ ಫಲವೇ ಈ ಎರವಲು ಪದಕೋಶ,

ಎರವಲು ಪದಕೋಶವನ್ನು ರಚಿಸಿಕೊಟ್ಟಿರುವವರು ನಮ್ಮ ಕಾಲದ ಅತ್ಯುತ್ತಮ ನಿಘಂಟುಕಾರರಾದ, ನಿಘಂಟು ರಚನೆಯಲ್ಲಿ ಹಲವು ವರ್ಷಗಳ ಅನುಭವ ಗಳಿಸಿರುವ ಪ್ರೊ| ಜಿ. ವೆಂಕಟಸುಬ್ಬಯ್ಯನವರು. ಇವರ ಮತ್ತೊಂದು ಉಪಯುಕ್ತ ಕೃತಿ 'ಇಗೋ ಕನ್ನಡ' ಸಾಮಾಜಿಕ ನಿಘಂಟನ್ನು ಮೂರು ಸಂಪುಟಗಳಲ್ಲಿ ನವಕರ್ನಾಟಕ ಪ್ರಕಟಿಸಿದೆ. ಈ ಮೂರು ಸಂಪುಟಗಳ ಸಂಯುಕ್ತ ಆವೃತ್ತಿಯೂ ಪ್ರಕಟವಾಗಿದೆ.

ಪ್ರಕಾಶಕರು - ನವಕರ್ನಾಟಕ ಪ್ರಕಾಶನ

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)