Skip to product information
1 of 1

Santoshakumara Mehendale

ಎಂಟೆಬೆ

ಎಂಟೆಬೆ

Publisher - ಅಂಕಿತ ಪುಸ್ತಕ

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಹದಿನಾಲ್ಕೇ ದಿನದಲ್ಲಿ ಬರೆದು ಮುಗಿಸಿದ ಕಾದಂಬರಿ ಇದು. ಕಾರಣ ಅರ್ಜೆಂಟು ಎನ್ನುವುದಕ್ಕಿಂತಲೂ ಕಾದಂಬರಿಯ ವಿಷಯ ವಸ್ತುವಿಗಿರುವ ಬಿರುಸು ಅಂತಹದ್ದು, ನಾಲ್ಕು ದಶಕ ಸಂದಿದ್ದರೂ ಎಂಟೆಬೆಯಂತಹ ಘಟನಾವಳಿ ಮತ್ತು ಕಥಾನಕ ಮತ್ತೊಂದು ಘಟಿಸಲಿಲ್ಲ. ಜಾಗತಿಕವಾಗಿ ಇಸ್ರೇಲ್ ಎದೆಯುಬ್ಬಿಸಿ ನಿಂತಿದ್ದೆ ಆಗ. ಅಕಸ್ಮಾತ್ ಆವತ್ತೇನಾದರೂ ಆ ಪುಟ್ಟ ರಾಷ್ಟ್ರ ಯಾಮಾರಿದ್ದರೆ ಇಲ್ಲಿಯವರೆಗೆ ಅದರ ಗುರುತೇ ಇರುತ್ತಿರಲಿಲ್ಲ. ಜಗತ್ತಿನ ಭೂಪಟದಲ್ಲಿ ಆವತ್ತು ಗೆದ್ದ ಹೊಡೆತಕ್ಕೆ ಇವತ್ತಿಗೂ ಇಸ್ರೇಲ್‌ನ ಗಡಿ ಅಗಲವಾಗುತ್ತಲೇ ಸಾಗಿದೆ.

ಇಂತಹ ಅಪರೂಪದ ಕಾರ್ಯಾಚರಣೆಯ ಕಾದಂಬರಿ ನಾನೂ ಮತ್ತೊಮ್ಮೆ ಬರೆಯಲಿಕ್ಕಿಲ್ಲ. ಆದರೆ ರೋಮಾಂಚಕಾರಿ ಕಥಾನಕದ ಹಿನ್ನೆಲೆ ಮತ್ತು ವಸ್ತು ಯಾವತ್ತಿಗೂ ಅದ್ಭುತವೆ. ಸ್ವತಃ ಮನೆಗೊಬ್ಬ ಸೈನಿಕರನ್ನು ಹೊಂದಿರುವ ಅಪರೂಪದ ದೇಶಭಕ್ತಿಯ ಪರಂಪರೆ ಹೊಂದಿರುವ ರಾಷ್ಟ್ರದ ಚಿತ್ರಣ ಇವತ್ತು ಜಗತ್ತಿಗೆ ಮಾದರಿ,

ಬರೆಯುವ ಕಷ್ಟವೇನೇ ಇರಲಿ.

ಓದುವ ಸುಖ ನಿಮ್ಮದಾಗಲಿ. ಕೈಗೆತ್ತಿಕೊಂಡರೆ ಕೆಳಗಿಡಲಾರಿರಿ ಎನ್ನುವ ಆಶಯದೊಂದಿಗೆ

-ಸಂತೋಷಕುಮಾರ ಮಹೆಂದಳೆ,
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)