Sapna Book House
Publisher - ಸಪ್ನ ಬುಕ್ ಹೌಸ್
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಎಲ್ಲವೂ ಒಳ್ಳೆಯದು ಮುಕ್ತಾಯವೂ ಒಳ್ಳೆಯದೇ
ಮಹಾನ್ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್‌ನ ಬಹು ಜನಪ್ರಿಯ ವಿನೋದ ನಾಟಕಗಳಲ್ಲಿ 'ಆಲ್ಸ್ ವೆಲ್ ದಟ್ ಎಂಡ್ಸ್ ವೆಲ್' ಒಂದು. ನಾಟಕದ ಕ್ರಿಯೆಯು ಒಬ್ಬ ಪ್ರಸಿದ್ದ ವೈದ್ಯನ ತಬ್ಬಲಿ ಮಗಳು ಮತ್ತು ಅವಳ ಪೋಷಕಳ ಮಗ ಬರ್‌ಟ್ರಾಮ್ (ಪೋಷಕಳು ರೋಸಿಲಾನ್ ಕೌಂಟೆಸ್) ಇವರಿಬ್ಬರ ಸುತ್ತ ನಡೆಯುತ್ತದೆ. ಹೆಲಿನಳಿಗೆ ಬರ್‌ಟ್ರಾಮ್‌ನಲ್ಲಿ ಪ್ರೇಮ. ಆದರೆ ಬರ್‌ಟ್ರಾಮ್‌ನಿಗೆ ಅವಳಲ್ಲಿ ಪ್ರೇಮವಿಲ್ಲ. ಆದರೂ ಹೆಲಿನ ಬರ್‌ಟ್ರ್ಯಾಮ್‌ನನ್ನೇ ಗಂಡನನ್ನಾಗಿ ಪಡೆಯಲಲು ತನ್ನ ಬುದ್ಧಿಶಕ್ತಿಯನ್ನು ಬಳಸುತ್ತಾಳೆ.
ನಾಟಕದ ಈ ಸಂಕ್ಷಿಪ್ತ ನಿರೂಪಣಾ ಕಥನವನ್ನು ಎಳೆಯ ಓದುಗರಿಗೆ ನಾಟಕದ ಪರಿಚಯಮಾಡಿಸಲು ಸಹಾಯವಾಗುವ ರೀತಿಯಲ್ಲಿ ರೂಪಿಸಲಾಗಿದೆ. ಇದನ್ನು ಮಕ್ಕಳು ಓದಿಕೊಳ್ಳಬಹುದು. ಇಲ್ಲವೇ ಈ ನಾಟಕವನ್ನು ಅವರಿಗೆ ಪರಿಚಯಮಾಡಿಸಲು ಇಷ್ಟಪಡುವ ತಂದೆತಾಯಿಯರು ಅವರಿಗೆ ಓದಿ ಹೇಳಬಹುದು. ಶಿಕ್ಷಕರು ಇದನ್ನು ತರಗತಿಯ ಸಂಪನ್ಮೂಲವೆಂದು ಕೂಡಾ ಬಳಸಿಕೊಳ್ಳಬಹುದು. ಓದಲು ಸುಲಭವಾಗಿರುವ ನಿರೂಪಣೆ ಮತ್ತು ವಿನೋದ ಶೈಲಿಯ ಚಿತ್ರಗಳು ಮಕ್ಕಳ ಆಸಕ್ತಿಯನ್ನು ಖಂಡಿತವಾಗಿಯೂ ಹಿಡಿದಿಟ್ಟುಕೊಳ್ಳುವುವು ಮತ್ತು ಅವರ ಓದಿನ ನೈಪುಣ್ಯತೆಯನ್ನು ಬೆಳೆಸುವುದು.
