Bell Hooks, To Kannada : H. S. Shreemati
ಎಲ್ಲರಿಗಾಗಿ ಸ್ತ್ರೀವಾದ
ಎಲ್ಲರಿಗಾಗಿ ಸ್ತ್ರೀವಾದ
Publisher -
- Free Shipping Above ₹250
- Cash on Delivery (COD) Available
Pages - 208
Type - Paperback
ಪಿತೃಪ್ರಧಾನತೆಯು ಇಡೀ ಪುರುಷ ಸಮುದಾಯಕ್ಕೆ ಲಾಭದಾಯಕ ಎಂಬುದು ಸ್ಪಷ್ಟವೇ ಸರಿ. ಹೆಂಗಸರಿಗಿಂತ ಅವರು ಉನ್ನತ ದರ್ಜೆಯವರು ಎಂಬ ಆಳವಾದ ಗ್ರಹಿಕೆಯೊಂದು ಇದೆ. ಹಾಗಾಗಿ ಗಂಡಸರು ಹೆಂಗಸರನ್ನು ಆಳಬೇಕು ಎನ್ನುವ ತೀರ್ಮಾನವೂ ಆಗಿಬಿಟ್ಟಿದೆ. ಎಲ್ಲವೂ ಗಂಡಸಿಗೆ ಲಾಭದಾಯಕವೇ. ಸರಿ, ಆದರೆ ಇದಕ್ಕಾಗಿ ಅವರು ಬೆಲೆಯನ್ನು ತೆರಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು. ಪಿತೃಪ್ರಧಾನತೆಯೇನೋ ಪುರುಷರಿಗೆ ಇಷ್ಟೆಲ್ಲ ಅನುಕೂಲಗಳನ್ನು ಕಲ್ಪಿಸಿತು. ಆದರೆ ಇದಕ್ಕೆ ಬದಲಾಗಿ ಪಿತೃಪ್ರಧಾನ ವ್ಯವಸ್ಥೆಯು ಅಲ್ಲಾಡದಂತೆ ಗಟ್ಟಿಯಾಗಿ ನೆಲೆಗೊಳಿಸುವ ಜವಾಬ್ದಾರಿಯನ್ನು ಗಂಡಸರ ಮೇಲೆ ಹೊರಿಸಿತು. ಅವರು ಹೆಂಗಸರ ಮೇಲೆ ದಬ್ಬಾಳಿಕೆ ನಡೆಸಬೇಕು, ಅವರನ್ನು ಶೋಷಣೆ ಮಾಡಿ ದಮನಗೊಳಿಸಿ ಇಡಬೇಕು, ಅಗತ್ಯ ಬಿದ್ದರೆ ಹಿಂಸೆಯನ್ನೂ ಮಾಡಬೇಕು, ಹೇಗಾದರೂ ಸರಿ, ಪಿತೃಪ್ರಧಾನತೆಯ ಬೇರುಗಳನ್ನು ಅಲುಗದಂತೆ ಭದ್ರವಾಗಿ ಹಿಡಿದಿಟ್ಟು ಕಾಯಬೇಕು. ನಿಜ ಹೇಳಬೇಕೆಂದರೆ ಈ ಬಗೆಯ ಪಿತೃಪ್ರಧಾನತೆಗೆ ಬದ್ಧರಾಗಿ ಉಳಿಯುವುದು ಬಹುಮಂದಿ ಗಂಡಸರಿಗೆ ತೀರಾ ಕಷ್ಟದಾಯಕವಾಗಿಯೇ ಕಾಣುತ್ತದೆ. ತಮ್ಮೊಂದಿಗೇ ಬದುಕುತ್ತಿರುವ ಹೆಣ್ಣು ಜೀವಗಳನ್ನು ದ್ವೇಷಿಸುತ್ತಾ, ಅದರಿಂದಲೇ ಭಯಗ್ರಸ್ತರೂ ಆಗುತ್ತಾ ತಲ್ಲಣಿಸಿ ಹೋಗುತ್ತಾರೆ. ಹೆಂಗಸರ ವಿರುದ್ಧ ಈ ಮಟ್ಟಿಗೂ ದೌರ್ಜನ್ಯಗಳು ನಡೆಯಬೇಕೇ ಎಂದು ಗೊಂದಲಗಳಲ್ಲಿ ಸಿಲುಕುತ್ತಾರೆ.
(ಪ್ರವೇಶಿಕೆಯಿಂದ)
Share
Subscribe to our emails
Subscribe to our mailing list for insider news, product launches, and more.