Dr. Virupaksha Devaramane
ಎಲ್ಲರ ಮನೆ ದೋಸೆ
ಎಲ್ಲರ ಮನೆ ದೋಸೆ
Publisher - ಸಾವಣ್ಣ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type - Paperback
ಬರಹಗಾರ ಜೋಗಿ ಅವರು ಈ ಕೃತಿಯ ಕುರಿತು "ದೇವರಮನೆಯಿಂದ ಮನಸಿನ ಅರಮನೆಗೆ. ಏನನ್ನೂ ಹೇಳದೇ ಎಲ್ಲವನ್ನೂ ಹೇಳುವ ಕತೆಗಳೆಂದರೆ ನನಗಿಷ್ಟ. ನಮ್ಮನ್ನು ಅನಾದಿಕಾಲದಿಂದ ಪೊರೆಯುತ್ತಾ ಬಂದದ್ದು ಇಂಥ ಪುಟ್ಟ ಪುಟ್ಟ ಕತೆಗಳೇ. ಅವನ್ನು ದೂರದಿಂದಲೇ ತೋರಿಸಿ ನಮ್ಮ ಕಣ್ಣು ಅವುಗಳ ಮೇಲೆ ಕೀಲಿಸುವಂತೆ ಮಾಡುವುದಕ್ಕೆ ಕಥನಕಾರರು ಬೇಕು.
ಡಾ. ವಿರೂಪಾಕ್ಷ ದೇವರಮನೆ, ತಾವು ಬದುಕಿನಲ್ಲಿ ಕಂಡ, ಗ್ರಹಿಸಿದ, ಊಹಿಸಿದ, ನಡೆದ, ನಡೆಯಬಹುದಾದ, ಮನಸ್ಸಿನೊಳಗೇ ನಡೆದ ಘಟನೆಗಳಿಗೆ ಕಥೆಯ ರೂಪ ಕೊಟ್ಟಿದ್ದಾರೆ.
ಇದೊಂದು ರೀತಿಯಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಥರದ ಕತೆಗಳು. ನಮ್ಮೊಳಗನ್ನು ಅವರು ಕಥೆಯೆಂಬ ಮಾಪನದಲ್ಲಿ ಸ್ಕ್ಯಾನ್ ಮಾಡಿ, ನಿಮ್ಮ ಒಳಗಿರುವುದು ಇದು ಅಂತ ಹೇಳುತ್ತಾರೆ. ಅದಕ್ಕೆ ಚಿಕಿತ್ಸೆ ಮಾಡಿಕೊಳ್ಳಬೇಕಾದವರು ನಾವು. ಇವತ್ತು ನಮಗೆ ಎರಡು ಥರದ ಕನ್ನಡಿಯೂ ಬೇಕು. ಹೊರಗಿನದನ್ನು ತೋರುವ ಪಾರದರ್ಶಕವಾದ ಕಿಟಕಿಯ ಗಾಜು, ನಮ್ಮನ್ನೇ ನಮಗೆ ತೋರುವ ಒಂದು ಬದಿಗೆ ಪಾದರಸ ಬಳಿದ ಕನ್ನಡಿ ಗಾಜು. ಈ ಕತೆಗಳು ಏಕಕಾಲಕ್ಕೆ ಕಿಟಕಿಯೂ ಹೌದು, ಕನ್ನಡಿಯೂ ಹೌದು " ಎಂದಿರುವುದು ಈ ಕೃತಿಯ ವಿಶೇಷತೆಯನ್ನು ತಿಳಿಸುತ್ತದೆ.
Share
Subscribe to our emails
Subscribe to our mailing list for insider news, product launches, and more.