ಎಂ. ಬಸವಣ್ಣ
Publisher: ಅಭಿನವ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
Couldn't load pickup availability
..ಪ್ರೇಮ ನಮ್ಮ ದೈಹಿಕ, ಮಾನಸಿಕ, ನೈತಿಕ ವಿಕಾಸಕ್ಕೆ ಅವಶ್ಯಕವಾದ ಮೂಲ ಶಕ್ತಿ. ನಮ್ಮನ್ನು ಕಾಡುವ ದ್ವೇಷಾಸೂಯೆಗಳಿಗೆ, ವ್ಯಾದಿಗ್ರಸ್ತ ಭಾವನೆಗಳಿಗೆ ದುಷ್ಕರ್ಮಗಳಿಗೆ, ಆತ್ಮಹತ್ಯೆಯ ಅಭಿವೃತ್ತಿಗಳಿಗೆ, ಭಯಭೀತಿಗಳಿಗೆ, ಮನೋರೋಗಗಳಿಗೆ ಪ್ರೇಮವೇ ಏಕಮೇವ ಮದ್ದು, ಮಾನವನ ಔನ್ನತ್ಯಕ್ಕೆ, ನೈತಿಕ ವಿಕಾಸಕ್ಕೆ ಇರುವ ಒಂದೇ ಮಾರ್ಗ ಪ್ರೇಮದ್ದು. ಇಂದು ನಮ್ಮ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವ್ಯವಸ್ಥೆಗಳು ಜನರು ಪರಸ್ಪರ ಪ್ರೀತಿಸುವುದನ್ನು ಕಲಿಸುತ್ತಿಲ್ಲ; ಸಾಮಾಜಿಕ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತಿಲ್ಲ; ಏನಾದರೊಂದು ಮಹತ್ತಾದುದನ್ನು ಸಾಧಿಸುವುದನ್ನು ಹೇಳಿಕೊಡುತ್ತಿಲ್ಲ; ಏನಾದರು ಹೆಮ್ಮೆಪಡುವಂತಹ ಕೆಲಸ ಮಾಡಲು ನಮಗೆ ಅವಕಾಶವೇ ಸಿಗುತ್ತಿಲ್ಲ. ಇಂದಿನ ದಿನಗಳಲ್ಲಿ ನಮ್ಮ ಆಸಕ್ತಿಯೆಲ್ಲಾ ಇರುವುದು ತಿನ್ನುವುದು, ಕುಡಿಯುವುದು, ಲೈಂಗಿಕತೆ ಇವುಗಳೆಡೆಗೆ ನಮ್ಮ ಶಾಲಾಕಾಲೇಜುಗಳು, ಬೀಜಗಣಿತದ ಜತೆಗೆ ಪ್ರೇಮಿಸುವುದನ್ನೂ, ರಸಾಯನ ಶಾಸ್ತ್ರದ ಜತೆಗೆ ಕೊಂಚ ರಸಗ್ರಹಣ ಪ್ರಜ್ಞೆಯನ್ನು ಕಲಿಸಿದರೆ ಈ ಭೂಮಿ ಹೆಚ್ಚು ವಾಸಯೋಗ್ಯವಾಗುವುದರಲ್ಲಿ ಸಂದೇಹವಿಲ್ಲ.
