ಎಡೆಗಳು ಹೇಳುವ ಕಂನಾಡ ಕತೆ

ಎಡೆಗಳು ಹೇಳುವ ಕಂನಾಡ ಕತೆ

ಮಾರಾಟಗಾರ
ಶಂ. ಬಾ. ಜೋಶಿ
ಬೆಲೆ
Rs. 75.00
ಕೊಡುಗೆಯ ಬೆಲೆ
Rs. 75.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ನಾಡಿನ ಜನಗಳಿಗೆ ತಮ್ಮ ನಾಡುನುಡಿಯಲ್ಲಿ ಹೆಮ್ಮೆಹಿಗ್ಗುಗಳು ಕಡಿಮೆಯಾಗುವುದು ಆ ನಾಡಿನ ಅಧೋಗತಿಯ ಪೂರ್ವಸಿದ್ಧತೆ. ಇದು ಕಂನಾಡ ಮೊದಲಿಗರಲ್ಲಿ ಎಂದಿನಿಂದಲೇ ನಡೆದುಹೋಗಿತ್ತು. ದೇವಭಾಷೆ, ಧರ್ಮಭಾಷೆ, ರಾಜಭಾಷೆ ಎಂದು ಮು೦ತಾಗಿ ಕ೦ನುಡಿಯಲ್ಲದ ಮಾತಿಗೇ. ಕಾಲಕಾಲಕ್ಕೆ ಮಹತ್ವವು ಬಂದಿತು; ಬಂದಿದೆ. ಕಂನುಡಿ ಗೌಣಸ್ಥಾನದಲ್ಲಿಯೆ ಇರಬೇಕಾಯಿತು. ಅದರ ಫಲವೇ ನಮ್ಮ ಇಂದಿನ ಗೌಣಸ್ಥಿತಿ.

ಜನಗಳಿಗೆ ತಮ್ಮ ನಾಡಿನ, ನುಡಿಯ ನಿಜಸ್ವರೂಪದ ತಿಳುವಳಿಕೆಯು ಈವರೆಗೆ ಅವಶ್ಯವೆನಿಸಿರಲಿಲ್ಲ. 'ಕನ್ನಡ'ವೆಂಬುದು ಮೂಲದಲ್ಲಿ ದೇಶದ ಹೆಸರೂ, ಭಾಷೆಯ ಹೆಸರೂ ಎಂಬುದೂ ಮರೆತುಹೋಗಿತ್ತು! ರಾಮಾ, ಬಶ್ಯಾ ಎಂದು ಬಹಳ ದಿನಗಳಿಂದ ಕರೆಯಿಸಿಕೊಳ್ಳುತ್ತಿದ್ದವನಿಗೆ ರಾಮ, ಬಸವಂತನೆಂದು ಯಾರಾದರೂ ವಾದ ಹೇಳಿದರೂ ಆತನಿಗೆ ತನ್ನ ಹೆಸರು ರಾಮ, ಬಸವ೦ತನೆ೦ದು ಸರಿಯಾಗಿ ಹೇಳಲೂ ಸಂಕೋಚವೆನಿಸುವಂತಾಗಿದೆ ನಮ್ಮ ನಾಡಿಗರ ನಮ್ಮ ಪಾಡು. ನಮ್ಮ ನಾಡು, ನುಡಿಗಳ ಶುದ್ಧ ಅರ್ಥವತ್ತಾದ ರೂಪಗಳನ್ನು ಬಳಸುವುದಕ್ಕೂ ಮನಸ್ಸಿನ ಸಿದ್ಧತೆಯಾಗಬೇಕಾಗಿದೆ ಇನ್ನೂ! ಇಂತಿದು ಆರ್ಯರು ಗೆದ್ದು ಸೋತ, ಕಂನಾಡ ಮೊದಲಿಗರ ಸೋತು ಗೆದ್ದ ಸಂಕ್ಷಿಪ್ತ ಕತೆ. 

Customer Reviews

No reviews yet
0%
(0)
0%
(0)
0%
(0)
0%
(0)
0%
(0)