Skip to product information
1 of 1

ಭಾರತೀಸುತ

ಎಡಕಲ್ಲು ಗುಡ್ಡದಮೇಲೆ

ಎಡಕಲ್ಲು ಗುಡ್ಡದಮೇಲೆ

Publisher:

Regular price Rs. 125.00
Regular price Rs. 125.00 Sale price Rs. 125.00
Sale Sold out
Shipping calculated at checkout.
ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ 'ಎಡಕಲ್ಲು ಗುಡ್ಡದ ಮೇಲೆ' ಎಂಬ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಓದುಗರ ಕೈಗೆ ಕೊಡಲು ಹರ್ಷವೆನಿಸುತ್ತದೆ. ಈ ಕಾದಂಬರಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದಾಗ-ಓದುಗರಲ್ಲಿ ಅಪೂರ್ವವಾದ ಕುತೂಹಲವನ್ನು ಕೆರಳಿಸಿತು.


ಕೆಲವರು ಈ ಕಾದಂಬರಿಯನ್ನು ಡಿ.ಎಚ್. ಲಾರೆನ್ಸ್‌ನ `ಲೇಡಿ ಚಟರ್ಲೆಸ್ ಲವರ್' ಎಂಬ ಕಾದಂಬರಿಯ ರೂಪಾಂತರವೆಂದು ಹೇಳಿದರು. ಅಂತಹವರು ಡಿ.ಎಚ್. ಲಾರೆನ್ಸ್‌ನ ಆ ಕಾದಂಬರಿಯನ್ನು ಓದಲಿಲ್ಲವೆಂದು ನಾನು ವಿಷಾದದಿಂದ ಹೇಳಬೇಕಾಗುತ್ತದೆ. ಡಿ.ಎಚ್. ಲಾರೆನ್ಸ್‌ನ `ಲೇಡಿ ಚಟರ್ಲೆಸ್ ಲವರ್' ಈ ಕಾದಂಬರಿಯ ರಚನೆಗೆ ಪ್ರಚೋದನೆಯನ್ನು ನೀಡಿತೆಂದು ಸ್ಕೂಲವಾಗಿ ಹೇಳಬಹುದು.

“........ನಮ್ಮ ಧರ್ಮ ಆಸೇತು ಹಿಮಾಚಲದ ಕಲ್ಪನೆಯನ್ನು ಒದಗಿಸಿಕೊಟ್ಟಿದೆ. ರಾಮಾಯಣ, ಮಹಾಭಾರತಗಳು ನಮ್ಮ ನಾಡಿನಲ್ಲಿ ಹರಿದು ಹತ್ತಾರು ಭಾಷೆಗಳನ್ನು ಆಡುವ ಜನರನ್ನು ಒಂದಾಗಿ ಬೆಸೆದಿದೆ. ನಾವು ಒಂದಾಗಿ ಬಾಳಿ ಬದುಕಬೇಕಾದರೆ, ಆ ಹಳೆಯ ಪರಂಪರೆಯ ಸತ್ವವನ್ನು ಹೀರಿ ನಮ್ಮ ರಾಷ್ಟ್ರೀಯತೆಯನ್ನು ಬೆಳೆಸಿಕೊಳ್ಳುವುದು ಅಗತ್ಯ. ಹಾಗೆ ಮಾಡದಿದ್ದರೆ ನಮ್ಮ ದೇಶ ಇನ್ನೊಂದು ಅಮೆರಿಕವೋ, ರಷ್ಯವೋ ಆದೀತಲ್ಲದೆ, ಭಾರತವಾಗಿ ಉಳಿಯದು.”
View full details