Vasudeva Nadig
Publisher - ಸಾಹಿತ್ಯ ಲೋಕ ಪ್ರಕಾಶನ
Regular price
Rs. 130.00
Regular price
Rs. 130.00
Sale price
Rs. 130.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕಳೆದ ಎರಡು ದಶಕಗಳಿಂದಲೂ ಕಾವ್ಯವನ್ನ ಧ್ಯಾನಿಸಿ ಉಸಿರಾಡುತ್ತಿರುವ, ನನ್ನ ಅತ್ಯಂತ ಪ್ರೀತಿಯ ಕವಿಗಳಲ್ಲಿ ಒಬ್ಬರಾದ ವಾಸುದೇವ ನಾಡಿಗರವರು ಇದೀಗ ಕತೆಯೆಡೆಗೆ ಹೊರಳಿಕೊಂಡಿರುವುದು ತುಸು ಸೋಜಗವೇ. ಅತ್ಯಂತ ಸೂಕ್ಷ್ಮ ಸಂವೇದನೆಗಳನ್ನು ತಮ್ಮ ಕವಿತೆಗಳಲ್ಲಿ ಮೊಗೆದು ಕೊಡುವ ಇವರು ಕತೆಗಳನ್ನು ಕೂಡ ಅದೇ ನೆಲೆಯಲ್ಲಿ ಕಟ್ಟಿ ಕೊಡುತ್ತಾರೆ. ಅಂತೆಯೆ ಇಲ್ಲಿನ ಎಲ್ಲ ಪಾತ್ರಗಳು ಎದೆಯ ಜನುಗಿನ ಮೂಲಕ ಜಗತ್ತನ್ನು ನೋಡುತ್ತವೆ. ಕಟ್ಟಿಕೊಂಡ ಸಂಬಂಧಗಳನ್ನು ಕೂಡಿಟ್ಟುಕೊಳ್ಳಲು ಇನ್ನಿಲ್ಲದಂತೆ ಹೆಣಗುತ್ತವೆ. ವಾಸ್ತವದ ಕಟು ಸತ್ಯಗಳ ಹೆಕ್ಕಿಕೊಳ್ಳಲಾಗದೆ ಒದ್ದಾಡುತ್ತವೆ. ಮುಟ್ಟದರೆ ಮುರಿದೇ ಹೋಗುವಷ್ಟು ನವಿರಾದ ಭಾವಕೋಶಗಳನ್ನು ಹೊದ್ದ ಇಲ್ಲಿನ ಜೀವಗಳು ಮುಳ್ಳು ಬೇಲಿ ನಡುವೆ ನಿಂತೂ ಹೂ ಅರಳಿಸುವ ಕನಸು ಕಾಣುತ್ತವೆ.
- ದೀಪ್ತಿ ಭದ್ರಾವತಿ
