Skip to product information
1 of 2

Sudarshana Channangihalli, Veerakaputra Shreenivasa

ಈ ಹೊತ್ತಿನ ಕಥೆಗಳು

ಈ ಹೊತ್ತಿನ ಕಥೆಗಳು

Publisher - ವೀರಲೋಕ ಬುಕ್ಸ್

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 212

Type - Paperback

ನಮ್ಮ ಕಾಲದ ತಲ್ಲಣಗಳಿಗೆ ಮತ್ತು ಸ್ಥಿತ್ಯಂತರಗಳಿಗೆ ಮಾತು ಕೊಡಲಿಕ್ಕೆ ಕಥೆ ಹೇಳಿಮಾಡಿಸಿದ ಪ್ರಕಾರ. ಇದರ ಸಾಧ್ಯತೆಗಳನ್ನು ಕಾಲದಿಂದ ಕಾಲಕ್ಕೆ ಎಲ್ಲ ಕಥೆಗಾರರೂ ಹುಡುಕುತ್ತಲೇ ಬಂದಿದ್ದಾರೆ. ಕಥೆ ಬರೆಯುವ ಜರೂರತ್ತು ಏನಿದೆ ಎನ್ನುವುದನ್ನು ಪುನರ್ ಸ್ಥಾಪಿಸುತ್ತಲೂ ಇದ್ದಾರೆ - ಇದು ಬರಿಯ ಒಳಗಿನ ತಳಮಳವಲ್ಲ ಒಂದು ಸಾಮಾಜಿಕ ಜವಾಬ್ದಾರಿ ಎನ್ನುವಂತೆ.

ಸಾಮಾಜಿಕ ಜಾಲತಾಣಗಳು ಬರೆಯುವ ತೀವ್ರತೆಯನ್ನು ಹೆಚ್ಚಿಸುತ್ತಿರುವ ಹಾಗೆಯೇ ಬರವಣಿಗೆಯಲ್ಲಿ ಕಾವು ಕೂರುವ ತಾಳ್ಮೆಯನ್ನು ಕಳೆಯುತ್ತಿವೆ. ತಕ್ಷಣದ ಪ್ರತಿಕ್ರಿಯೆಗಳಿಗೆ ಮನಸೋತಾಗ ಆಳಕ್ಕಿಳಿವ, ಸಾಂದ್ರವಾಗುವ ಕಥನಗಳು ಹುಟ್ಟುವುದು ಕಷ್ಟವಾಗುತ್ತದೆ. ಇಂಥದ್ದರ ನಡುವೆ ಕಥೆಗಾರರು ತಮಗೆ ಬೇಕಾದ ಅವಕಾಶವನ್ನು ಅಲ್ಲಲ್ಲಿ ಹುಡುಕುತ್ತಾ ತಮ್ಮದನ್ನಾಗಿಸಿಕೊಳ್ಳುವತ್ತ ತುಡಿಯುತ್ತಲೇ ಇದ್ದಾರೆ.

ಕಥನ ಕಾರಣಗಳು ಅವಸ್ಥಾಂತರವನ್ನು ಹೊಂದುತ್ತಿರುವ ಇವತ್ತಿನ ಸಂಧಿಕಾಲ ನಮ್ಮ ಮಟ್ಟಿಗೆ ಪರೀಕ್ಷಾ ಸಮಯವೂ ಹೌದು. ಇಂಥಾ ಹೊತ್ತಲ್ಲಿ ನಿಜವಾದ ಕಥೆಗಾರನಿಗೆ ಒಂದಿಷ್ಟು ಒತ್ತಾಸೆಗಳು ಬೇಕಾಗುತ್ತವೆ. ಪ್ರವಾಹದಲ್ಲಿ ಕೊಚ್ಚಿ ಹೋಗದಂತೆ ತನ್ನೊಳಗಿನ ಕಥೆಗಾರನನ್ನು ಕಾಪಿಟ್ಟುಕೊಳ್ಳುವ ಜರೂರು ಇರುತ್ತದೆ. ಇಂಥಾ ಪ್ರಕ್ರಿಯೆಗೆ ಸಾಂಸ್ಕೃತಿಕ ಜವಾಬ್ದಾರಿ ಎನ್ನುವಂತೆ ವೀರಲೋಕ ಮತ್ತು ವಿಜಯ ಕರ್ನಾಟಕ ನಡೆಸುತ್ತಿರುವ ಕಥಾಸ್ಪರ್ಧೆ ವರ್ತಿಸುತ್ತಿದೆ ಎನ್ನುವುದು ಮಹತ್ವದ ಸಂಗತಿ.

ಕಥನದ ರೋಚಕತೆಯಲ್ಲಿ ನಮ್ಮನ್ನು ಮಂತ್ರಮುಗ್ಧಗೊಳಿಸುವ ಕಥೆಗಾರರು ಇದ್ದಾರೆ ಎನ್ನುವುದನ್ನು ಈ ಸ್ಪರ್ಧೆಯಲ್ಲಿ ಬಂದ ಅನೇಕ ಕಥೆಗಳು ನಿರೂಪಿಸುತ್ತಿವೆ. ನಮ್ಮ ಭವಿಷ್ಯಕ್ಕೆ ಯಾವ ಕುಂದೂ ಇಲ್ಲ, ಆತಂಕವೂ ಸಹಾ ಎನ್ನುವುದನ್ನು ಈ ಪಯಣ ಪ್ರಮಾಣೀಕರಿಸಿದೆ. ಅಂಥಾ ಕಥೆಗಳು ಮನಸ್ಸಿಗೆ ಮುದಕೊಟ್ಟಿವೆ, ನೋವುಗಳಿಗೆ ಮಾತಾಗಿವೆ, ಒಳಗಿನ ತಲ್ಲಣಗಳಿಗೆ ಧ್ವನಿಯಾಗಿವೆ. ಈ ಪ್ರಯತ್ನ ಓದುಗರಿಗೆ ತಲುಪುತ್ತಿರುವುದು, ಪುಸ್ತಕವಾಗಿ ಪ್ರಕಟಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಕಥನದ ಜೊತೆಗೆ ಜಗತ್ತಿನ ಒಳಿತನ್ನು ಕನಿಸೋಣ- ಭರವಸೆಯಾಗಿ ಅದು ನಮ್ಮೊಂದಿಗೆ ಉಳಿಯುತ್ತದೆ.

-ಪಿ. ಚಂದ್ರಿಕಾ
ತೀರ್ಪುಗಾರರ ಪರವಾಗಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)