Dodderi Venkatagiri Rao
ದೃಷ್ಟಿದಾನ
ದೃಷ್ಟಿದಾನ
Publisher -
Regular price
Rs. 150.00
Regular price
Rs. 150.00
Sale price
Rs. 150.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಪ್ರಖ್ಯಾತ ವೈದ್ಯ, ಸಾಹಿತಿ, ಛಾಯಾಚಿತ್ರಗ್ರಾಹಕರಾದ ವೆಂಕಟಗಿರಿ ರಾವ್‌ರವರು ಹುಟ್ಟಿದ್ದು ಸೊರಬ ತಾಲ್ಲೂಕಿನ ದೊಡ್ಡರಿ ಹಳ್ಳಿಯಲ್ಲಿ. ವೈದ್ಯರಾಗಿ ವೃತ್ತಿ ಪ್ರಾರಂಭಿಸಿದ್ದು ಸಾಗರದಲ್ಲಿ, ನಂತರ ಸ್ಥಳಾಂತರಿಸಿದ್ದು ದೊಡ್ಡಬಳ್ಳಾಪುರಕ್ಕೆ, ದೀರ್ಘಕಾಲ ವೈದ್ಯಕೀಯ ಸೇವೆ, ಬಂದ ರೋಗಿಗಳಿಗೆ ಉಚಿತ ವೈದ್ಯಕೀಯ ಸಲಹೆ ಮುಖಾಂತರ ಕೈಗೊಂಡ ಸಮಾಜ ಸೇವೆ. ಫೋಟೋಗ್ರಫಿ ಮೆಚ್ಚಿನ ಹವ್ಯಾಸ. 1932ರ ಸುಮಾರಿನಲ್ಲೇ ಕವಿತೆಯ ಮುಖಾಂತರ ಸಾಹಿತ್ಯ ಕ್ಷೇತ್ರ ಪ್ರವೇಶ, ಕಾದಂಬರಿ, ಶಿಶುಸಾಹಿತ್ಯ, ಸಣ್ಣಕಥೆ, ಲೈಂಗಿಕ ಸಾಹಿತ್ಯ, ಪ್ರವಾಸಕಥನ ಎಲ್ಲ ಪ್ರಕಾರಗಳಲ್ಲೂ 30ಕ್ಕೂ ಹೆಚ್ಚು ಕೃತಿ ರಚನೆ. ಆರೋಗ್ಯ, ಲೈಂಗಿಕ ವಿಜ್ಞಾನ ಮುಂತಾದ ವಿಷಯಗಳ ಬಗ್ಗೆ ಕನ್ನಡದಲ್ಲಿ ಬರೆದರೆ ಮೂಗು ಮುರಿಯುತ್ತಿದ್ದ ಕಾಲದಲ್ಲಿ 'ದಾಂಪತ್ಯ ಜೀವನ' ಮಾಸಪತ್ರಿಕೆ ಪ್ರಾರಂಭ, ಐದು ಸಂಪಾದಕರಾಗಿ ಹೊಣೆ ಹೊತ್ತು ನಡೆಸಿದ ಪತ್ರಿಕೆ. ವರ್ಷ ಕಾಲ ಆರೋಗ್ಯ ವಿಷಯಕ್ಕೆ ಸಂಬಂಧಿಸಿದಂತೆ ರಚಿಸಿದ ಕೃತಿಗಳು-ಪ್ರಸವ ವಿಜ್ಞಾನ, ಸಂತಾನ ಸಂಯಮ, ವಿಕೃತ ಕಾಮ, ಕಾಮ ಶಿಕ್ಷಣ ಮುಂತಾದ ಕೃತಿಗಳು. ಕಥಾ ಸಂಕಲನ-ರೋಹಿಣಿ, ದಾಳಿಂಬೆ, ಚೆಲುವೆ, ಕರಿಗಡಬು, ಸಂಪ್ರದಾನ, ಅವದಾನ, ದೃಷ್ಟಿದಾನ, ಅತ್ತಿಯ ಹೂವು, ಇಷ್ಟಕಾಮ್ಯ ಜನಪ್ರಿಯ ಕಾದಂಬರಿಗಳು, ಪುಟ್ಟಣ್ಣ ಕಣಗಾಲರು ಅವದಾನ ಕಾದಂಬರಿ ಆಧರಿಸಿ ನಿರ್ಮಿಸಿದ್ದು 'ಅಮೃತ ಘಳಿಗೆ' ಚಲನಚಿತ್ರ ವೈದ್ಯರಾಗಿ ಖ್ಯಾತಿ ಗಳಿಸಿದಂತೆಯೇ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ವಿಶಿಷ್ಟ ಶೈಲಿಯ ಹಾಗೂ ಕಥಾವಸ್ತುಗಳ ಕಾರಣದಿಂದಾಗಿ ಪ್ರಸಿದ್ಧಿ ಪಡೆದಿದ್ದಾರೆ.
Share
Subscribe to our emails
Subscribe to our mailing list for insider news, product launches, and more.