Rajesh Shetty
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ರೀಲ್ಸ್, ಸ್ಟೇಟಸ್, ಸ್ಟೋರೀಸ್ ಹೀಗೆ ಒಂದೊಂದು ಹೆಸರಲ್ಲಿ ನಾನಾ ರೀತಿಯಲ್ಲಿ ನಮ್ಮ ನಮ್ಮ ಜೀವನದ ಮ್ಯಾಜಿಕ್ ಮೊಮೆಂಟ್‌ಗಳನ್ನು ಕ್ಷಣಕ್ಷಣವೂ ಇನ್ನೊಬ್ಬರಿಗೆ ಹೇಳುತ್ತಲೇ ಇರುತ್ತೇವೆ. ಇನ್ನೊಬ್ಬರ ಕತೆಗಳನ್ನು ಬೇರೊಬ್ಬರ ಅಕೌಂಟಿಗೆ ಹೋಗಿ ಅವರ ನೋವನ್ನು, ಸಂತೋಷವನ್ನು, ಸಂಕಟವನ್ನು ನಮ್ಮದಾಗಿಸಿಕೊಳ್ಳುತ್ತಿರುತ್ತೇವೆ. ಇನ್ನೊಬ್ಬರ ಬೇಕಪ್ಪು ನಮ್ಮನ್ನು ಸಂತೈಸುತ್ತದೆ. ಮತ್ತೊಬ್ಬರ ಗೆಲುವು ನಮ್ಮನ್ನು ಕೈ ಹಿಡಿದು ನಡೆಸುತ್ತದೆ. ಕನಿಷ್ಠ ಪಕ್ಷ ಹಾಗಂತ ನಂಬಿಕೊಂಡಿದ್ದೇವೆ. ಹಾಗಾಗಿ ನಾವು ಸಂತೋಷವಾಗಿದ್ದೇವೆ.
ಅಕ್ಷರಗಳಿಗಿಂತಲೂ ಸಣ್ಣ ಸಣ್ಣ ವಿಡಿಯೋಗಳಿಗೆ ಜಗತ್ತು ಮಾರು ಹೋಗಿರುವ ಕಾಲವಿದು. ಒಂದು ದಿನ ರೀಲಕ್ಷ್ಮೀ ಸ್ಟೋರಿಯನ್ನೋ ನೋಡದೇ ಇರುವಷ್ಟು ಸಂಯಮ ಇಲ್ಲ. ಕತೆಗಳನ್ನು ಹೇಳುವ ಶೈಲಿ ಬದಲಾಗಿದೆ. ಕತೆಗಳನ್ನು ಓದುವ ಕ್ರಮದಲ್ಲೂ ಬದಲಾವಣೆಯಾಗಿದೆ. ಇಂಥಾ ಹೊತ್ತಲ್ಲಿ ಈ ಕಥಾ ಸಂಕಲನ ನಿಮ್ಮ ಕೈಯಲ್ಲಿದೆ.
-ರಾಜೇಶ್ ಶೆಟ್ಟಿ
ಪ್ರಕಾಶಕರು - ಸಪ್ನ ಬುಕ್ ಹೌಸ್
