Skip to product information
1 of 2

Poornima Malagimani

ಡೂಡಲ್ ಕಥೆಗಳು

ಡೂಡಲ್ ಕಥೆಗಳು

Publisher - ಸಾವಣ್ಣ ಪ್ರಕಾಶನ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 156

Type - Paperback

'ರನ್‌' ಕತೆಯಲ್ಲಿ ಎರಡು ವಿಶೇಷತೆಗಳಿವೆ. ಒಂದು, ಲೇಖಕಿಯಾಗಿದ್ದರೂ ಸುಲಲಿತವಾಗಿ ಪುರುಷ ಪಾತ್ರ ಪ್ರವೇಶ ಮಾಡಿ, ನಿರೂಪಿಸಿರುವುದು. ಲೇಖಕರು ಮಹಿಳಾ ಪ್ರಧಾನ ಕತೆಗಳನ್ನು ಬರೆದರೂ ತಾವೇ ನಿರೂಪಕಿಯಾಗುವುದು ವಿರಳ. ಮತ್ತೊಂದು, ಇದರ ಕಥಾ ವಸ್ತು. ಒಬ್ಬ ಮಹಿಳೆ ಯಾವುದೋ ಕೆಲಸದ ನಿಮಿತ್ತ ಪರಪುರುಷನೊಂದಿಗಿರಬೇಕಾಗಿ ಬಂದಾಗ ಸಮಾಜ ಅದನ್ನು ಹೇಗೆ ನೋಡುತ್ತದೆ? ಅದರ ಸುತ್ತ ಹೇಗೆಲ್ಲ ಊಹಾಪೋಹ ಕಲ್ಪಿಸಿಕೊಳ್ಳುತ್ತದೆ ಎಂಬ ಆತಂಕ. ಎಲ್ಲಾ ಮಹಿಳೆಯರಲ್ಲಿರುವ ಈ ಆತಂಕವನ್ನು ಲೇಖಕಿಯರು ತಮ್ಮ ಕತೆಗಳ ಮೂಲಕ ಅನ್ವೇಷಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಒಂದು 'ಆಕಸ್ಮಿಕ/ಅಪಘಾತ' ಸಂಭವಿಸಿದರೆ? ಉತ್ತರ ಹೇಳಲು ಇಬ್ಬರೂ ಬದುಕಿರದಿದ್ದರೆ? ಎಂಬ ಪ್ರಶ್ನೆಯನ್ನು ಎದುರಿಟ್ಟು ಸಮಸ್ಯೆಯ ಜಟಿಲತೆಯನ್ನು ತೆರೆದಿಡುತ್ತಾರೆ. ಇಲ್ಲಿ ಸಾಂಪ್ರದಾಯಿಕ ನೈತಿಕತೆ ತುಂಬಿಸಿ, ಕತೆಯನ್ನು ಕಟ್ಟುಕತೆಯನ್ನಾಗಿಸದೆ, ಜನಸಾಮಾನ್ಯರ ನೈತಿಕ ನಂಬಿಕೆಗಳಿಗೆ ಪೆಟ್ಟು ಮಾಡದಿರುವಷ್ಟು ಸಂವೇದನಾ ಸೂಕ್ಷ್ಮರಾಗಿ, ವಾಸ್ತವವನ್ನು ನಿಧಾನವಾಗಿ ಜನರ ಮನಸ್ಸಿಗೆ ಇಳಿಸುವ ಪ್ರಯತ್ನವನ್ನು ಪೂರ್ಣಿಮಾ ಅವರು ತಮ್ಮದೇ ಶೈಲಿಯಲ್ಲಿ ನಿಭಾಯಿಸಿದ್ದಾರೆ. ಈ ಎರಡೂ ಕಾರಣಗಳನ್ನು ಸೇರಿಸಿ ಪುರುಷ ತನ್ನ ಧ್ವನಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅಗತ್ಯ, ತನ್ನೊಳಗನ್ನು ತಾನೇ ಶೋಧಿಸಿಕೊಳ್ಳಬೇಕಾದ ಅನಿವಾರ್ಯತೆ-ಇವೆಲ್ಲ ಒಂದಕ್ಕೊಂದು ಪೂರಕವಾಗಿರುವುದನ್ನು ಇಲ್ಲಿ ನಾವು ಗಮನಿಸಬಹುದಾಗಿದೆ. ಇದು ಪೂರ್ಣಿಮಾ ಅವರ ಶ್ರೇಯಸ್ಸು ಎಂದೇ ಭಾವಿಸುತ್ತೇನೆ.

-ಮಧು ವೈ.ಎನ್.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)