Dr. Vasanth A. Kulakarna
Publisher -
- Free Shipping
- Cash on Delivery (COD) Available
Couldn't load pickup availability
ಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹಮ್ಮೆಯಿದ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವ ಪ್ರಶ್ನೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ. ಹೀಗಾಗಿ ಏಕಕಾಲಕ್ಕೆ ಕನ್ನಡದ ಜಗತ್ತಿನ ಜ್ಞಾನವನ್ನು ವಿಶ್ವಕ್ಕೆ ನೀಡುವ ಮತ್ತು ವಿಶ್ವದ ಜ್ಞಾನವನ್ನು ಕನ್ನಡದ ಮೂಲಕ ಪಡೆಯುವ ಸ್ಥಾಯಿ ಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ಕಾರ್ಯ ಮಾಡುತ್ತಿದೆ.
ವಿಜ್ಞಾನ ಕ್ಷೇತ್ರಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ ನಾವು ನಮ್ಮ ಜನರಿಗೆ ವೈಜ್ಞಾನಿಕ ಮನೋಭಾವ ಮತ್ತು ತಿಳುವಳಿಕೆಯನ್ನು ನೀಡುವಲ್ಲಿ ಸೋತಿದ್ದೇವೆ. ನಮ್ಮ ದೇಹದ ಕುರಿತಂತೆಯೇ ನಮಗೆ ಅರಿವಿಲ್ಲ. ನಮ್ಮ ದೇಹದಲ್ಲಿರುವ ಎಲ್ಲ ಅಂಗಗಳ ಕುರಿತ ಹಾಗೇ ಹಲವಾರು ಮೂಢನಂಬಿಕೆಗಳಿವೆ. ದೇಹದ ಎಡಭಾಗದ ಬಗ್ಗೆ ಇರುವ ಜನಸಾಮಾನ್ಯರ ನಂಬಿಕೆಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇಂತಹ ಹೊತ್ತಿನಲ್ಲಿ ದೇಹ ಸಮ್ಮಂದಿ ನಂಬಿಕೆಗಳನ್ನು ವಿಜ್ಞಾನದ ಒರೆಗಲ್ಲಿಗೆ ಹಚ್ಚಬೇಕು. ದೇಹದ ನಾನಾ ಅಂಗಗಳ ಕುರಿತು ವೈಜ್ಞಾನಿಕ ಅರಿವನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಸರಳವಾದ ಭಾಷೆಯಲ್ಲಿ ಹೇಳಬೇಕಾಗುತ್ತದೆ. ಡಾ. ವಸಂತ ಕುಲಕರ್ಣಿಯವರು ನಮ್ಮ ದೇಹದೊಳಗಿನ ಅಂಗಾಂಗಗಳ ಅದ್ಭುತ ಲೋಕದ ಬಗ್ಗೆ ಸರಳವಾಗಿ ಪರಿಚಯಿಸಿರುವರು. ಹೃದಯ ಮೆದುಳುಗಳ ಬಗ್ಗೆ ಭಾವನಾತ್ಮಕ ನಂಬಿಕೆಗಳಿವೆ. ವೈಜ್ಞಾನಿಕವಾಗಿ ಅವುಗಳ ಪರಿಚಯವೇ ಇಲ್ಲ. ವೈಜ್ಞಾನಿಕ ಅರಿವನ್ನು ಆದರದೇ ಪರಿಭಾಷೆಯಲ್ಲಿ ಸರಳವಾಗಿ ಬರೆಯುವುದರ ಮೂಲಕ ಈ ಅದ್ಭುತ ಲೋಕದ ಪರಿಚಯ ಮಾಡಿಸಿದ ಡಾ. ವಸಂತ ಕುಲಕರ್ಣಿಯವರಿಗೆ ಅಭಿನಂದನೆಗಳು.
ಡಾ. ಮಲ್ಲಿಕಾ ಎಸ್. ಘಂಟಿ
