Nilakantan RS, To Kannada : K. P. Suresh
ದಕ್ಷಿಣ VS ಉತ್ತರ
ದಕ್ಷಿಣ VS ಉತ್ತರ
Publisher - ಕಾನ್‌ಕೇವ್ ಮೀಡಿಯಾ
- Free Shipping Above ₹250
- Cash on Delivery (COD) Available
Pages -
Type - Paperback
South Vs North ಪುಸ್ತಕದ ಅನುವಾದದ ಪ್ರಕಾಶನ ಕರ್ನಾಟಕ ಮತ್ತು ಕನ್ನಡ ಓದುಗರಿಗೆ ಏಕೆ ಮುಖ್ಯ?
ಸಂವಿಧಾನ ಜಾರಿಗೆ ಬಂದ ನಂತರ ಒಕ್ಕೂಟ ಸರ್ಕಾರ (ಕೇಂದ್ರ ಸರ್ಕಾರ) ಮತ್ತು ರಾಜ್ಯಗಳ ನಡುವೆ ಆರ್ಥಿಕ ಸಂಪನ್ಮೂಲಗಳ ನ್ನು ಹಂಚಿಕೊಳ್ಳಲು ಆರ್ಥಿಕ ಆಯೋಗ ರಚನೆ ಮಾಡಿಕೊಂಡಿದ್ದೇವೆ. ಸ್ವಾತಂತ್ರ್ಯ ನಂತರದಿಂದಲೂ ಆರ್ಥಿಕ ಆಯೋಗ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಸಂಪನ್ಮೂಲವನ್ನು ಒದಗಿಸುತ್ತಲೇ ಬಂದಿದೆ.
.
ಸ್ವಾತಂತ್ರ್ಯ ನಂತರ ಇಂಡಿಯಾದ ಪ್ರತಿಯೊಂದು ರಾಜ್ಯಗಳಲ್ಲೂ ಒಂದೇ ರೀತಿಯ ಶಾಸಕಾಂಗ ಮತ್ತು ಕಾರ್ಯಾಂಗದ ವ್ಯವಸ್ಥೆ ಇದೆ. ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಒಂದೇ ರೀತಿಯಲ್ಲಿ ಇದ್ದರು ಕಳೆದ ಎಪ್ಪತ್ತೈದು ವರುಷಗಳಲ್ಲಿ ದಕ್ಷಿಣದ ರಾಜ್ಯಗಳು ಯುರೋಪ್ ನ ಅಭಿವೃದ್ಧಿ ಹೊಂದಿದ ದೇಶಗಳಂತೆ ತಮ್ಮ ಮಾನವ ಸಂಪನ್ಮೂಲ ಅಭಿವೃದ್ಧಿ ಸಾಧಿಸಿತು. ಆದರೆ ಉತ್ತರದ ರಾಜ್ಯಗಳು ಕಳೆದ ಎಪ್ಪತ್ತೈದು ವರುಷಗಳಲ್ಲಿ ಬಡ ರಾಜ್ಯಗಳಾಗಿಯೇ ಉಳಿದವು. ಈ ಪರಿಸ್ಥಿತಿ ಏಕೆ ಉಂಟಾಯಿತು ಅನ್ನುವುದರ ಬಗ್ಗೆ ಈ ಪುಸ್ತಕ ಧೀರ್ಘವಾಗಿ ಚರ್ಚಿಸುತ್ತದೆ.
ಈ ಚರ್ಚೆಯ ಹಿನ್ನೆಲೆಯಲ್ಲಿ ಈ ಪುಸ್ತಕ ಸೌತ್ ಇಂಡಿಯಾ ವನ್ನು ನಾರ್ತ್ ಇಂಡಿಯಾ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗಳ ಹೋಲಿಕೆ ಮಾಡಿ ಸೌತ್ ಇಂಡಿಯಾ ನಾರ್ತ್ ಇಂಡಿಯಾ ಗೆ ಹೋಲಿಸಿದರೆ ಯಾವ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ ಅನ್ನುವುದನ್ನು ಅಂಕಿ ಅಂಶಗಳ ಸಹಿತ ಚರ್ಚಿಸುತ್ತದೆ.
ಸೌತ್ ಇಂಡಿಯಾದ ಅಭಿವೃದ್ಧಿ ಚಕ್ರವನ್ನು ಇನ್ನೂ ಚೆನ್ನಾಗಿ ಮುಂದುವರೆಸಿಕೊಂಡು ಹೋಗಬೇಕು ಅಂದರೆ ಒಕ್ಕೂಟ ಸರ್ಕಾರದಿಂದ ಸೌತ್ ಇಂಡಿಯಾ ರಾಜ್ಯಗಳಿಗೆ ಬರಬೇಕಾದ ಆರ್ಥಿಕ ಪಾಲು ಬಹಳ ಮುಖ್ಯವಾದದ್ದು. ಆದರೆ ಹತ್ತನೇ ಆರ್ಥಿಕ ಆಯೋಗದಿಂದ ಹಿಡಿದು ಹದಿನೈದನೇ ಆರ್ಥಿಕ ಆಯೋಗದ ತನಕ ಸೌತ್ ಇಂಡಿಯಾ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಅನ್ಯಾಯ ಆಗುತ್ತಿದೆ. ಆದರೆ ಹೆಚ್ಚಿನ ಆರ್ಥಿಕ ನೆರವು ಪಡೆದ ನಾರ್ತ್ ಇಂಡಿಯಾ ರಾಜ್ಯಗಳು ದಿನೇ ದಿನೇ ಇನ್ನೂ ಹಿಂದೆ ಉಳಿಯುತ್ತಿವೇ. ಇದರಿಂದ ಸೌತ್ ಇಂಡಿಯಾ ರಾಜ್ಯಗಳು ಹೆಚ್ಚಿನ ತೆರಿಗೆ ಪಾಲನ್ನು ಒಕ್ಕೂಟ ಸರ್ಕಾರಕ್ಕೆ ಕೊಟ್ಟರು ವಾಪಸ್ ನಮ್ಮ ಪಾಲಿನ ತೆರಿಗೆ ಬರದ ಕಾರಣದಿಂದ ಸೌತ್ ಇಂಡಿಯಾ ರಾಜ್ಯಗಳ ಅಭಿವೃದ್ಧಿ ಕೂಡ ಕುಂಠಿತಗೊಳ್ಳುತ್ತಿದೆ. ಇಡೀ ನಾರ್ತ್ ಇಂಡಿಯಾ ವನ್ನು ಸೌತ್ ಇಂಡಿಯಾ ಸಾಕುತ್ತಿರುವುದರಿಂದ ನಾವುಗಳು ಕೂಡ ದಿನೇ ದಿನೇ ಬಡ ರಾಜ್ಯಗಳಾಗಿ ಬದಲಾಗುತ್ತಿದ್ದೇವೆ.
ಈ ಪುಸ್ತಕದಲ್ಲಿ ಯಾವ ರೀತಿಯಲ್ಲಿ ಒಕ್ಕೂಟ ಸರ್ಕಾರದಿಂದ ಸೌತ್ ಇಂಡಿಯಾ ರಾಜ್ಯಗಳಿಗೆ ತೆರಿಗೆ ಹಂಚಿಕೆ ವಿಚಾರದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಅನ್ಯಾಯ ಆಗುತ್ತಿದೆ ಅನ್ನುವುದನ್ನು ಚರ್ಚಿಸಲಾಗಿದೆ. ಅದರಲ್ಲೂ 15 ನೇ ಆರ್ಥಿಕ ಆಯೋಗದಿಂದ ಸೌತ್ ಇಂಡಿಯಾ ರಾಜ್ಯಗಳಿಗೆ ಆಗುತ್ತಿರುವ ಆರ್ಥಿಕ ಅನ್ಯಾಯವನ್ನು ಅಂಕಿ ಅಂಶಗಳ ಸಹಿತ ಚರ್ಚಿಸುತ್ತದೆ.
ಪುಸ್ತಕದ ಕೊನೆಯಲ್ಲಿ ಸೌತ್ ಇಂಡಿಯಾದ ಜನರು ಈ ಅನ್ಯಾಯವನ್ನು ಅರ್ಥ ಮಾಡಿಕೊಂಡು ಉತ್ತರದ ಬಡ ರಾಜ್ಯಗಳಿಗೂ ಹೆಚ್ಚಿನ ಅನ್ಯಾಯ ಆಗದಂತೆ ಹೇಗೆ ತಮ್ಮ ಪಾಲಿನ ತೆರಿಗೆ ಪಡೆದು ಅಭಿವೃದ್ಧಿ ಹೊಂದಬಹುದು ಅನ್ನುವುದನ್ನು ಚರ್ಚಿಸುತ್ತದೆ. ಇದರ ಜೊತೆಗೆ ಒಕ್ಕೂಟ ವ್ಯವಸ್ಥೆಯನ್ನು ಹೇಗೆ ಸದೃಢಗೊಳಿಸಿಕೊಳ್ಳುವುದು ಮತ್ತು ಈಗಿನ ಕೇಂದ್ರಿಕರಣದ ರಾಜಕಾರಣವನ್ನು ಯಾವ ರೀತಿಯಲ್ಲಿ ವಿಕೇಂದ್ರಿಕರಣ ರಾಜಕೀಯ ವ್ಯವಸ್ಥೆಯನ್ನಾಗಿ ಪರಿವರ್ತನೆ ಮಾಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವುದು ಅನ್ನುವುದರ ಬಗ್ಗೆ ಬಹಳ ಆಸಕ್ತಿದಾಯಕವಾದ ಐಡಿಯಾವನ್ನು ಈ ಪುಸ್ತಕ ಓದುಗರಿಗೆ ಪರಿಚಯಿಸುತ್ತದೆ.
ಈ ಪುಸ್ತಕದ ಕನ್ನಡ ಅನುವಾದ ಏಕೆ ಮುಖ್ಯ ಅಂದರೆ, ಬಹಳ ಸರಳವಾಗಿ ಅಂಕಿ ಅಂಶಗಳ ಆಧಾರದಲ್ಲಿ ದಕ್ಷಿಣ ರಾಜ್ಯಗಳಿಗೆ ಒಕ್ಕೂಟ ಸರ್ಕಾರದಿಂದ ಆಗುತ್ತಿರುವ ಆರ್ಥಿಕ ಅನ್ಯಾಯವನ್ನು ಅರ್ಥ ಮಾಡಿಕೊಳ್ಳಲು ಅನುಕೂಲ ಆಗುತ್ತದೆ. ಒಮ್ಮೆ ಕನ್ನಡಿಗರಿಗೆ ಈ ಪುಸ್ತಕದ ಮುಕಾಂತರ ಆರ್ಥಿಕ ಅನ್ಯಾಯದ ಅರಿವು ಮೂಡಿದರೆ ಮುಂದಿನ ದಿನಗಳಲ್ಲಿ ದಕ್ಷಿಣ ರಾಜ್ಯಗಳ ಜನರಲ್ಲಿ ರಾಜಕೀಯ ಅರಿವು ಮೂಡಿ ನಮ್ಮ ತೆರಿಗೆಯ ಪಾಲನ್ನು ನಾವುಗಳು ಪಡೆದು ಅಭಿವೃದ್ಧಿ ಹೊಂದಿದ ರಾಜ್ಯಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ.
Share
Subscribe to our emails
Subscribe to our mailing list for insider news, product launches, and more.