Skip to product information
1 of 1

Dr. N. Someshwara

ಡಿ. ವಿ. ಗುಂಡಪ್ಪ

ಡಿ. ವಿ. ಗುಂಡಪ್ಪ

Publisher - ನವಕರ್ನಾಟಕ ಪ್ರಕಾಶನ

Regular price Rs. 35.00
Regular price Rs. 35.00 Sale price Rs. 35.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕನ್ನಡ ಸಾಹಿತ್ಯದ ಅಶ್ವತ್ಥವೃಕ್ಷ ಡಿ. ವಿ. ಗುಂಡಪ್ಪ

ಅವರೆಷ್ಟು ಧನವಂತ‌ರ್, ಇವರೆಷ್ಟು ಬಲವಂತ‌ರ್ ಅವರೆಷ್ಟು ಯಶವಂತ‌ರ್ ಎನುತ ಕರುಬಿನಲಿ | ಭವಿಕ ನಿನಗೆಷ್ಟಿಹುದೋ ಮರೆತು ನೀಂ ಕೊರಗುವುದು ಶಿವನಿಗೆ ಕೃತಜ್ಞತೆಯೇ? ಮಂಕುತಿಮ್ಮ ॥

`ಅಪರಿಗ್ರಹ ವ್ರತ' ಎಂದರೆ ಯಾರಿಂದಲೂ ಏನನ್ನೂ ತೆಗೆದುಕೊಳ್ಳದಿರುವುದು, ತನಗೆ ಎಷ್ಟು ಬೇಕೋ ಅಷ್ಟು ಮಾತ್ರ ಉಳಿಸಿಕೊಂಡು ಉಳಿದ ಏನನ್ನೂ ಸ್ವೀಕರಿಸದಿರುವುದು. ಹಾಗೆ ಸ್ವೀಕರಿಸಿದರೂ ಅದನ್ನು ಕೂಡಲೇ ದಾನ ಮಾಡಿಬಿಡುವುದು. ಪತಂಜಲಿಯ ಯೋಗಸೂತ್ರದಲ್ಲಿ ಅಪರಿಗ್ರಹದ ಪ್ರಸ್ತಾಪವಿದೆ. ಇದನ್ನು ಅನೇಕ ಹಿಂದುಗಳು ಹಾಗೂ ಜೈನರು ಪರಿಪಾಲಿಸುತ್ತಿದ್ದರಂತೆ. ಗೃಹಸ್ಥರಿಗೆ ಬಹಳ ಕಷ್ಟಕರವಾದದ್ದು. ಆದರೆ ಡಿವಿಜಿಯವರು ಅಪರಿಗ್ರಹ ವ್ರತವನ್ನು ತಮ್ಮ ಜೀವನಪರ್ಯಂತ ಪರಿಪಾಲಿಸಿದರು. ಡಿವಿಜಿಯವರಿಗೆ ಸನ್ಮಾನ ಮಾಡಿ ಒಂದು ಲಕ್ಷ ರೂಪಾಯಿಗಳ ಇಡುಗಂಟನ್ನು ನೀಡಿದರೆ ಅದನ್ನು ಗೋಖಲೆ ಸಾರ್ವಜನಿಕ ಸಂಸ್ಥೆಗೆ ದಾನ ಮಾಡುತ್ತಾರೆ. ಮೈಸೂರಿನ ದಿವಾನರಾದ ವಿಶ್ವೇಶ್ವರಯ್ಯನವರು ಡಿವಿಜಿಯವರಿಂದ ಪಡೆದ ಸಲಹೆಗಾಗಿ ಶುಲ್ಕವನ್ನು ನೀಡಿದರೆ, ಆ ಚೆಕ್ಕನ್ನು ಬ್ಯಾಂಕಿಗೆ ಹಾಕದೆ ವಿಶ್ವೇಶ್ವರಯ್ಯನವರಿಂದ 'ನೀನೊಬ್ಬ ಮೂರ್ಖ' ಎಂದು ಬೈಸಿಕೊಂಡವರು ಗುಂಡಪ್ಪನವರು. ಪಂಜಾಬಿನ ಹೆರಾಲ್ಡ್ ಟ್ರಿಬ್ಯೂನಿನ ಲಾಭದಾಯಕ ಸಂಪಾದಕತ್ವವನ್ನು ತಿರಸ್ಕರಿಸುವುದರ ಜೊತೆಗೆ ಮೈಸೂರು ಸರ್ಕಾರದಿಂದ ದೊರೆತ ಘನ ಉದ್ಯೋಗವನ್ನೂ ನಿರಾಕರಿಸುತ್ತಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)