Anupama Prasad
ಚೋದ್ಯ
ಚೋದ್ಯ
Publisher -
Regular price
Rs. 185.00
Regular price
Rs. 185.00
Sale price
Rs. 185.00
Unit price
/
per
- Free Shipping Above ₹250
- Cash on Delivery (COD) Available
Pages - 160
Type - Paperback
ತಮ್ಮ ನುರಿತ ಕಥನ ಕುಶಲತೆಯಿಂದ, ತಮ್ಮದೇ ಆದ ಕಥಾವಿಧಾನದಿಂದ ಅನುಪಮಾ ಪ್ರಸಾದ್ ಅವರನ್ನು ಕನ್ನಡ ಓದುಗರು ಈಗಾಗಲೇ ಬಲ್ಲರು. ಕಥೆ, ಕಾದಂಬರಿ ಮತ್ತು ವ್ಯಕ್ತಿಚಿತ್ರ ನಿರೂಪಣೆಗಳಲ್ಲಿ ಅನುಪಮಾ ತೋರಿರುವ ಗದ್ಯ ಪರಿಣತಿ ಅಪರೂಪದ ಬಗೆಯದು.
ಇದೀಗ ಪ್ರಕಟಿಸುತ್ತಿರುವ 'ಜೋದ್ಯ' ಕಥಾ ಸಂಕಲನವು ಈ ಅಂಶಗಳನ್ನು ಒಳಗೊಂಡು ಪಕ್ವತೆಯನ್ನು ಸಾಧಿಸಿದ ಕೃತಿಯಾಗಿದೆ. ಇಲ್ಲಿನ ಹದಿಮೂರು ಕಥೆಗಳು ತೆರೆದಿಡುವ ಲೋಕಾನುಭವ ವಿಶಿಷ್ಟ ಬಗೆಯದು. ವಿಭಿನ್ನ ವಸ್ತುವಿಷಯಗಳ ಆಯ್ಕೆ, ಭಾಷೆಯ ಮೇಲಿನ ಬಿಗಿಪು, ಕಥನ ಕ್ರಮ, ಕಥೆಯ ಒಳವಿವರಗಳು, ಪಾತ್ರಗಳ ಸಹಜ ಹಾಗೂ ನಿಯಂತ್ರಿತ ವರ್ತನೆ, ಕಟ್ಟೋಣದಲ್ಲಿ ತೋರುವ ಪರಿಣತಿ ಮತ್ತು ಪ್ರತಿ ಕಥೆಯೂ ತೋರುವ ಜೀವನ ಲೀಲಾವಿಲಾಸಗಳು ಅನುಪಮಾ ಅವರ ಕಥೆಗಳಿಗೆ ಈ ವಿಶಿಷ್ಟತೆಯನ್ನು ತಂದುಕೊಟ್ಟಿವೆ.
ಸಂಕಲನದ ಕಥೆಗಳು ವಿಷಯ, ವ್ಯಾಪ್ತಿ ಹಾಗೂ ಹರಹುಗಳ ದೃಷ್ಟಿಯಿಂದಲೂ ಗಮನಾರ್ಹ. ಅನುಭವದಿಂದ ಮಾಗಿದ ಕಥೆಗಾರ್ತಿಯ ಈ ಬಗೆಯ ಸೂಕ್ಷ್ಮ ಆಯ್ಕೆಯಿಂದಾಗಿ ಸಂಕಲನಕ್ಕೊಂದು ಸಹಜ ವೈವಿಧ್ಯತೆ ದೊರಕಿ ಓದುಗರು ಪ್ರತಿ ಕಥೆಯ ವಾಚನದಲ್ಲಿಯೂ ಹೊಸ ಅನುಭವವನ್ನು ಪಡೆಯಬಲ್ಲರು. ಯಾವುದೇ ಸಂವೇದನಾಶೀಲ ಲೇಖಕ ಇಂಥದ್ದನ್ನು ಸಾಧಿಸುವುದು ಗರಿಮೆಯ ಸಂಗತಿಯೇ ಇಲ್ಲಿನ ಹದಿಮೂರು ಕಥೆಗಳು ಓದುಗರಿಗೆ ನೀಡುವ ಅನುಭವ, ಲೋಕದೃಷ್ಟಿ, ಆದ್ರ್ರತೆಯ ಸ್ಪರ್ಶದಿಂದಾಗಿ ಅವರು ನಮ್ಮವಾಗಬಲ್ಲರು. ಅರೆಚಣ ಚಿಂತಿತರಾಗಬಲ್ಲರು. ಬದುಕಿನ ಸಾರ್ಥಕತೆ ನಿರರ್ಥಕತೆ, ಅಸಂಗತತೆ, ಅನಿವಾರ್ಯತೆ, ಅಂತಃಕರಣ-ನಿಸೃಹತೆಗಳಂಥ ಬುನಾದಿ ಭಾವಗಳ ಕುರಿತು ಬಹುಕಾಲ ಚಿಂತಿಸಬಲ್ಲರು. ಕಥೆಗಳು ಗ್ರಾಮ, ನಗರ, ಚಿಕ್ಕ ಪಟ್ಟಣ ಹೀಗೆ ಎಲ್ಲಿಯೇ ಜರುಗಲಿ ಅವನ್ನು ಬಹುಪಾಲು ನಡೆಸಿಕೊಡುವುದು ಮಾತ್ರ ಹೆಣ್ಣು ಪಾತ್ರಗಳೇ. ಈ ಹೆಂಗಳೆಯರು ಓದುಗರಲ್ಲಿ ಮೇಲಿನ ಎಲ್ಲ ಭಾವಗಳನ್ನು ಹುಟ್ಟಿಸಿ ಮನಸ್ಸು ತೇವಗೊಳ್ಳುವಂತೆ ಮಾಡಬಲ್ಲರು. ಸಂಕಲನದ ಕಥೆಗಳು ಒಂದಕ್ಕಿಂತ ಒಂದು ಅರ್ಥಪೂರ್ಣವಾಗಿವೆ. ಮೊಲ್ಲೆ ಹೂ ಮಾದೇವಿಯ ಮೀಮಾಂಸೆಗಳು, ಮೋಳಜ್ಜಿಯ ಚೋದ್ಯಗಳು, ಸ್ಯಾನಿಟರಿ ಪ್ಯಾಡ್, ಕಳಚಿದ ಬೇರು, ಕುಂತ್ಯಮ್ಮಳ ಮಾರಾಪು, ಮಥಾಯ್ ಡಾಕ್ಟರನ ಧರ್ಮಸಂಕಟ ಥರದ ಕಥೆಗಳು ಒಡ್ಡುವ ಅನುಭವ ಮತ್ತು ಪರಿಣಾಮ ಮೇಲುಸ್ತರದ್ದವು ಹೆಚ್ಚಿಗೇನು, ಅನುಪಮಾ ಪ್ರಸಾದ್ ನಮ್ಮ ಕಾಲದ ವಿಶಿಷ್ಟ ಸಂವೇದನೆಯುಳ್ಳ ಲೇಖಕಿಯಾಗಿದ್ದಾರೆ. ಅವರು ಹೆಣ್ಣಾಗಿರುವುದರಿಂದ ಕಥೆಗಳಿಗೆ ಹೊಸಬಗೆಯ ಚೆಲುವು ಮತ್ತು ಜೀವನದೃಷ್ಟಿ ಪ್ರಾಪ್ತವಾಗಿವೆ. ಅವು ಸಹಜವಾಗಿ ಘಮಿಸುವಂಥವು.
-ಕೇಶವ ಮಳಗಿ

Share
Subscribe to our emails
Subscribe to our mailing list for insider news, product launches, and more.