D. S. Srainivas Prasad
Publisher -
Regular price
Rs. 250.00
Regular price
Rs. 250.00
Sale price
Rs. 250.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕನ್ನಡ ಚಲನಚಿತ್ರರಂಗದ ದೊಡ್ಡ ಹೆಸರಾದ ಚಿ.ಉದಯಶಂಕರ್, ಚಲನಚಿತ್ರ ಮತ್ತು ಅದರ ವಿವಿಧ ಕ್ಷೇತ್ರಗಳ ಕುರಿತಾದ ಅಧ್ಯಯನ ಅಗತ್ಯವಾಗಿ ಆಗಬೇಕಾದ ಈ ಸಂದರ್ಭದಲ್ಲಿ ಶ್ರೀನಿವಾಸ ಪ್ರಸಾದ್ ಅವರ "ಕನ್ನಡ ಚಿತ್ರರಂಗಕ್ಕೆ ಚಿ. ಉದಯಶಂಕರ್ ಕೊಡುಗೆ ಸಂಪ್ರಬಂಧವು ಹಲವು ವಿಶ್ಲೇಷಣೆಗಳಿಗೆ ಒಳಪಟ್ಟು ಉತ್ತಮವಾಗಿದೆ. ಚಿತ್ರಸಾಹಿತಿಯ ಕುರಿತು ಶ್ರೀನಿವಾಸಪ್ರಸಾದ್ ಮತ್ತು ಉದಯಶಂಕರ್ ಅವರ ಸಾಹಿತ್ಯದ ಸರಳತೆ ವೈಶಿಷ್ಟ್ಯವನ್ನು ಶ್ರೀನಿವಾಸ ಪ್ರಸಾದ್ ಮಗ್ಗುಲುಗಳಲ್ಲಿಯೂ ಶೋಧಿಸಿದ್ದಾರೆ.
ಚಿ.ಉದಯಶಂಕರ್ ಕುರಿತು ಮಾಹಿತಿಗಾಗಿ ಕನ್ನಡ ಚಿತ್ರರಂಗದ ಕಲಾವಿದರಾದ ಎಸ್.ಶಿವರಾಮ್, ಗೀತಪ್ರಿಯ, ಕೆ.ಎಸ್.ಎಲ್.ಸ್ವಾಮಿ (ರವಿ), ದ್ವಾರಕೀಶ್, ಸಿದ್ದಲಿಂಗಯ್ಯ, ಶ್ರೀಮತಿ ಪಾರ್ವತಮ್ಮ ರಾಜಕುಮಾರ್, ರಾಜನ್ ಇವರೆಲ್ಲರನ್ನೂ ಸಂದರ್ಶಿಸಿ ಸಿದ್ಧಪಡಿಸಿದ ಈ ಸಂಪ್ರಬಂಧದ ಶ್ರಮ ಶ್ಲಾಘನೀಯ. ಸೈದ್ಧಾಂತಿಕ ನೆಲೆಯಲ್ಲಿ ಈ ಸಂಪ್ರಬಂಧ ಬಹಳ ಅಚ್ಚುಕಟ್ಟಾಗಿದ್ದು, ಒಬ್ಬ ಬರಹಗಾರರನ್ನು ಒಬ್ಬ ಅಭಿಮಾನಿ ಇಷ್ಟೊಂದು ಪ್ರೀತಿಸುತ್ತಾರೆ ಎಂಬುದಕ್ಕೆ “ಸವ್ಯಸಾಚಿ" ಗೀತರಚನಕಾರರಾದ ಶ್ರೀ ಚಿ.ಉದಯಶಂಕರ್ ಅವರನ್ನು ಅವರ ಸಾಹಿತ್ಯಾಭಿಮಾನಿ ಶ್ರೀ ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರು ಮೆಚ್ಚಿ ಬರೆದಿರುವ ಈ ಬರಹವೇ ಸಾಕ್ಷಿ.
ಎಂಥ ಕಠಿಣವಾದ ಚಿತ್ರದ ಸನ್ನಿವೇಶಕ್ಕೂ ಒಂದು ಗಂಟೆಯಲ್ಲಿ ಸೂಕ್ತವಾದ ಹಾಡು ಬರೆದು ಕೊಡುವ ನೈಪುಣ್ಯ ಚಿ. ಉದಯಶಂಕರ್ ಅವರಿಗೆ ಸಿದ್ಧಿಸಿತ್ತು. ನಾನು, ಅವರು ಅನೇಕ ಚಿತ್ರಗಳಿಗೆ ಒಟ್ಟೋಟ್ಟಿಗೆ ಕೂತು ಸಂಗೀತ ನಿರ್ದೇಶಕರುಗಳಿಗೆ ಹಾಡು ಬರೆದದ್ದು ಉಂಟು. ಹೀಗೆ ಅವರ ಒಡನಾಟದಲ್ಲಿ ನಾನು ಕಂಡುಕೊಂಡ ಸತ್ಯ, ಸ್ಪಷ್ಟ: ಚಿ.ಉದಯಶಂಕರ್ದು ಮುಗ್ಧ ಮನಸ್ಸು.
ಒಬ್ಬ ಸಾಹಿತ್ಯಾಭ್ಯಾಸಿ ಮುಕ್ತವಾಗಿ ಸಾಹಿತ್ಯವನ್ನು ಆಸ್ವಾದಿಸಿದ ರೀತಿಯಲ್ಲೇ ಗ್ರಹಿಕೆಗೆ ತಕ್ಕ ಅಭಿವ್ಯಕ್ತಿ ಸಾಧ್ಯ ಎಂಬುದಕ್ಕೆ ಶ್ರೀನಿವಾಸ ಪ್ರಸಾದರ ಬರಹವು ಮಾದರಿಯಾಗಿದೆ. ಅದಕ್ಕಾಗಿ ಲೇಖಕರನ್ನು ನಾನು ಹೃರ್ತೂಕವಾಗಿ
ಅಭಿನಂದಿಸುತ್ತೇನೆ.
-ಡಾ. ದೊಡ್ಡರಂಗೇಗೌಡ