Raju Gaddi
Publisher -
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಘಟನೆಗಳನ್ನು ಸಂಯಮದಿಂದ ಮಾಂತ್ರಿಕವಾಗಿ ಹೆಣೆಯುತ್ತ ಒಂದು ಅರ್ಥಪೂರ್ಣತೆಯನ್ನು ತಂದುಕೊಡುವ ಚೆಕ್ ಪೋಸ್ಟ್' ರಾಜು ಗಡ್ಡಿಯವರ ಎಂಟನೇ ಕಾದಂಬರಿ, ಉತ್ತಮ ಪುರುಷ ನಿರೂಪಣೆಯಲ್ಲಿರುವ ನೈಜ ಹಾಗೂ ಅನುಭವ ನಿಷ್ಠವಾದ, ಲಾರಿ ಚಾಲಕನ ಆತ್ಮ ವೃತ್ತಾಂತದಂತಹ ಈ ಕೃತಿಗೆ ಸಹೃದಯರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಬೈಪಾಸ್ ರಸ್ತೆಯಲ್ಲಿ ಡಕಾಯಿತರು ಬೆನ್ನಟ್ಟುವ ಕಾರಣಕ್ಕೆ ಭೀತಿ ಪಟ್ಟು, ಟೈರುಗಳಿಂದ ಬರುವ ವಿಚಿತ್ರ ಸುಟ್ಟ ವಾಸನೆಗೆ ಲಾರಿಯ ಬಾನೆಟ್ ಒಳಗೆ ಮೊಬೈಲ್ ಬೆಳಕಲ್ಲಿ ರಿಪೇರಿಕೈಗೊಂಡು, ಸವೆದು ಹೋದಗಾಲಿಯ ನಟ್ಟು ಬೋಲ್ಟು ತಿರುವಿ, ಪಂಜಾಬಿ ಡಾಬಾ ಹೊಕ್ಕು ಬಿಸಿ ಚಹ ಹೀರಿ, ಕಟ್ಟುವ ಸಾಲದ ಕಂತಿನ ಆತಂಕದಲ್ಲಿ ಒಮ್ಮೊಮ್ಮೆ ಡಿಸೇಲ್ ದುಡ್ಡು ತೆಗೆಯುವುದೇ ಕಷ್ಟವೆಂಬ ರೀತಿಯ ನಿಶಾಚರಿ ಚಾಲಕರದು ನಿರಂತರ ಹೋರಾಟದ ಬದುಕು. ಹಳೆಯ ಗೆಳತಿಯ ನವಿರಾದ ಅನುಭೂತಿಯು ಇಲ್ಲಿ ತುಡಿಯುವ ಅಪ್ಪಟ ಜೀವನ ಪ್ರೀತಿಗೆ ಸಾಕ್ಷಿ. ಚಾಲಕರ ಶ್ರಮದ ಕಾಸು ಕಣ್ಣೆದುರೇ ಲಂಚದಂತೆ ಅಧಿಕಾರಿಗಳ ಕೈಸೇರುವ ಸನ್ನಿವೇಶವು ಇಂದಿನ ಭ್ರಷ್ಟ ಸಾಮಾಜಿಕತೆಯನ್ನು ತೆರೆದಿಡುತ್ತಿದೆ. ಅಸಲಿ ನಂಬರ್ ಪ್ಲೇಟಿನಷ್ಟೇ ಪ್ರಾಮಾಣಿಕವಾದ, ಆಪ್ತವಾದ ಭಾಷೆಯ ಚಾಲನೆಯಿಂದ ಒಂದು ಕ್ಷಣವೂ ತೂಕಡಿಸದೇ ತಾಳ್ಮೆಯಿಂದ ಇಲ್ಲಿಯ ಕಥನ ಕಟ್ಟಿದ ರಾಜು ಅವರ ಶೃದ್ಧೆ ಮೆಚ್ಚುವಂಥದ್ದು. ಹೀಗೆ ನೆಲಕಚ್ಚಿಕೂತು ಬರೆಯುವ ಇವರ ಸಹನೆ ಮತ್ತು ಛಲಕ್ಕೆ ಹ್ಯಾಟ್ಸ್ ಅಪ್.
-ಸುನಂದಾ ಕಡಮೆ
-ಸುನಂದಾ ಕಡಮೆ
