1
/
of
1
K. V. Narayan
ಚಾಮ್‌ಸ್ಕಿ ಜೊತೆಗೆ ಎರಡು ಹೆಜ್ಜೆ
ಚಾಮ್‌ಸ್ಕಿ ಜೊತೆಗೆ ಎರಡು ಹೆಜ್ಜೆ
Publisher - ಅಹರ್ನಿಶಿ ಪ್ರಕಾಶನ
Regular price
Rs. 130.00
Regular price
Rs. 130.00
Sale price
Rs. 130.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಮನುಷ್ಯರು ಮಾತಾಡಬಲ್ಲರು. ಅಲ್ಲದೆ ಮಾತಾಡಬಲ್ಲವರು ಮನುಷ್ಯರು ಮಾತ್ರ . ಕೆಲವು ಪ್ರಾಣಿಪಕ್ಷಿಗಳು ಮಾತಾಡಬಲ್ಲವು, ಮತ್ತೆ ಕೆಲವು ನಾವು ಮಾತಾಡಿದ್ದನ್ನು ಅರ್ಥಮಾಡಿಕೊಳ್ಳಬಲ್ಲವು ಎಂಬ ಸಾಮಾನ್ಯ ತಿಳುವಳಿಕೆ ಪ್ರಚಲಿತವಿದೆ. ಆದರೆ ಇದು ಕೇವಲ ಊಹೆ. ಪಕ್ಷಿಗಳ ಕೂಗುಗಳಿಗೆ ನಾವು ಮಾತಿನ ಲಕ್ಷಣಗಳನ್ನು ಆರೋಪಿಸುತ್ತೇವೆ . ಹಾಗೆಯೇ ಪ್ರಾಣಿಗಳ ವರ್ತನೆಗಳನ್ನು ಗಮನಿಸಿ. ವರ್ತನೆಗಳು ನಮ್ಮ ಮಾತನ್ನು ಅರ್ಥ ಮಾಡಿಕೊಂಡಿದ್ದರ ಪರಿಣಾಮಗಳು ಎಂದು ತಿಳಿಯುತ್ತೇವೆ. ಪ್ರಾಣಿ ಪಕ್ಷಿಗಳಲ್ಲಿ ಮತ್ತು ಮನುಷ್ಯರ ನಡುವೆ ಸಂವಹನ ನಡೆಯುವುದಿಲ್ಲವೆಂದು ಮೇಲಿನ ಮಾತಿನ ಅರ್ಥವಲ್ಲ . ಈ ಸಂವಹನಕ್ಕೂ ಮನುಷ್ಯರ ಭಾಷೆಗೂ ಇರುವ ಸಂಬಂಧ ಇಲ್ಲವೆನ್ನುವಷ್ಟು ಕಡಿಮೆ; ಹೆಚ್ಚೆಂದರೆ ಧ್ವನಿಗಳಿಂದ ಪ್ರಾಣಿಗಳನ್ನು ಸಂವಹನಕ್ಕೆ ಸಿದ್ದಗೊಳಿಸುವಷ್ಟಕ್ಕೆ ಸೀಮಿತ. ಹೀಗಾಗಿ ಭಾಷೆ ಮತ್ತು ಮನುಷ್ಯರ ನಡುವೆ ಇರುವ ಸಂಬಂಧ ಅನನ್ಯವಾದುದು.
ಭಾಷೆಯನ್ನು ಒಂದು ಸಂವಹನ ವ್ಯವಸ್ಥೆ ಎಂದು ವ್ಯಾಖ್ಯಾನಿಸುವುದುಂಟು. ಇದು ಉಪಯೋಗವನ್ನು ಆಧರಿಸಿದ ವ್ಯಾಖ್ಯೆ. ಆದರೆ ವಾಸ್ತವದಲ್ಲಿ ಭಾಷೆ ಸಂವಹನಕ್ಕೆ ಮಾತ್ರ ಉಪಯೋಗವಾಗುವಂತದ್ದಲ್ಲ . ಈಜುವುದು, ಓಡುವುದು ಮುಂತಾದ ದೈಹಿಕ ಸಾಮರ್ಥ್ಯಗಳಂತೆ ಭಾಷೆಯು ಮನುಷ್ಯರ ಒಂದು ವಿಶೇಷ ಮಾನಸಿಕ ಸಾಮರ್ಥ್ಯವೆಂದು ತಿಳಿದು ಅದರ ಸ್ವರೂಪವನ್ನು ಅರಿಯಲು ತೊಡಗಿದಕ್ಕೆ ಸಾವಿರಾರು ವರ್ಷಗಳ ಚರಿತ್ರೆ ಇದೆ. ಆದರೆ ಈ ಶೋಧವನ್ನು ತೀವ್ರ ಗತಿಯಲ್ಲಿ ನಡೆಸಿದ್ದು ಕಳೆದ ಆರೇಳು ದಶಕಗಳಲ್ಲಿ. ಈ ನಿಟ್ಟಿನ ಭಾಷೆಯ ಬಗೆಗಿನ ಸಂಶೋಧಕರಲ್ಲಿ ಮುಖ್ಯ ಹೆಸರು ನೋಮ್ ಚಾಮ್ ಸ್ಕಿ .
ಆಧುನಿಕ ಭಾಷಾಶಾಸ್ತ್ರದ ಹರಿಕಾರನೆಂದೇ ನೋಮ್ ಚಾಮ್‍ಸ್ಕಿ ಹೆಸರುವಾಸಿಯಾಗಿದ್ದಾನೆ. ಭಾಷೆಯ ಅಧ್ಯಯನದ ದಾರಿಗಳನ್ನು ಚಾಮ್ ಸ್ಕಿ ಶೋಧಿಸಿದ ವಿಧಾನವನ್ನೇ ಕ್ರಾಂತಿಕಾರಿ ಆಲೋಚನಾ ಕ್ರಮವೆಂದು ಬಣ್ಣಿಸಲಾಗಿದೆ. ಭಾಷಾಶಾಸ್ತ್ರವನ್ನು ಕ್ರಾಂತಿಕಾರಿಗೊಳಿಸುವುದಷ್ಟೆಯಲ್ಲದೇ, ಅದನ್ನೊಂದು ಆಧುನಿಕ ವಿಜ್ಞಾನವನ್ನಾಗಿ ರೂಪಿಸಿದ ಯಶಸ್ಸು ಮಾತ್ರ ಚಾಮ್‍ಸ್ಕಿಗೆ ಸೇರಿದ್ದು. ಭಾಷೆಯ ಕುರಿತು ಚಾಮ್ ಸ್ಕಿ ಯ ಚಿಂತನೆಗಳನ್ನು ಕನ್ನಡದ ಮನಸ್ಸುಗಳಿಗೆ ಹಿರಿಯ ಭಾಷಾತಜ್ಞರಾದ ಡಾ. ಕೆ.ವಿ. ನಾರಾಯಣ ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
Share

Subscribe to our emails
Subscribe to our mailing list for insider news, product launches, and more.