Skip to product information
1 of 1

Sapna Book House

ಚಳಿಗಾಲದ ಕಥೆ

ಚಳಿಗಾಲದ ಕಥೆ

Publisher - ಸಪ್ನ ಬುಕ್ ಹೌಸ್

Regular price Rs. 55.00
Regular price Rs. 55.00 Sale price Rs. 55.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಚಳಿಗಾಲದ ಕಥೆ

ಚಳಿಗಾಲದ ಕಥೆ (ವಿಂಟರ್ಸ್ ಟೇಲ್) ಷೇಕ್ಸ್‌ಪಿಯರ್‌ನ ಅತ್ಯಂತ ಜನಪ್ರಿಯ ವೈನೋದಿಕಗಳಲ್ಲಿ ಒಂದಾಗಿದೆ. ಈ ನಾಟಕವನ್ನು 1623ರಲ್ಲಿ ಮೊದಲ ಬಾರಿ ಪ್ರಕಟಿಸಲಾಗಿತ್ತು. ಅಲ್ಲಿಂದ ಮುಂದೆ ಇದು ವಿಶ್ವಾದ್ಯಂತ ಪ್ರದರ್ಶನಗೊಂಡು ಭಾರಿ ಯಶಸ್ಸನ್ನು ಗಳಿಸಿಕೊಂಡಿದೆ. ಸಿಸಿಲಿಯಲ್ಲಿ ಸಂಭವಿಸುತ್ತಿರುವಂತೆ ನಿರೂಪಿಸಲಾಗಿರುವ ಈ ಕಥೆಯು ಮುಖ್ಯ ಪಾತ್ರವಾಗಿರುವ ದೊರೆ ಲಿಯೊಂಟೆಸ್‌ನ ಸುತ್ತ ತಿರುಗುತ್ತದೆ. ಅವನು ಅವನ ಪತ್ನಿಯ ನಿಷ್ಠೆಯ ಬಗ್ಗೆ ಸಂಶಯಗಳಲ್ಲಿ ಮುಳುಗಿಬಿಟ್ಟಿದ್ದಾನೆ. ಮಾತ್ಸರ್ಯ ಅವನನ್ನು ಅವನ ಅತ್ಯುತ್ತಮ ಗೆಳೆಯನನ್ನು ಕೊಲ್ಲಲು ಒಳಸಂಚು ಹೂಡುವಂತೆ ಮತ್ತು ಹೆಂಡತಿಯನ್ನು ಸೆರೆಯಲ್ಲಿರಿಸುವಂತೆ ಹಾಗೂ ಇನ್ನೂ ಕಣ್ಣು ಬಿಡದಿರುವ ಅವರ ಶಿಶುವನ್ನು ತೊರೆದುಬಿಡುವಂತೆ ಪ್ರಚೋದಿಸುತ್ತದೆ. ನಾಟಕವು ಹದಿನಾರು ವರ್ಷಗಳಷ್ಟು ದೀರ್ಘಕಾಲ ಚಾಚಿಕೊಂಡಿದೆ. ಈ ಕಾಲದಲ್ಲಿ ಲಿಯೊಂಟೆಸ್‌ ಅವನ ತಪ್ಪುಗಳನ್ನು ಮನವರಿಕೆಮಾಡಿಕೊಳ್ಳುತ್ತಾನೆ ಮತ್ತು ಕಡೆಯಲ್ಲಿ ಅವನಿಂದ ದೂರವಾಗಿದ್ದ ಹೆಂಡತಿ ಮತ್ತು ಮಗಳ ಜತೆಯಲ್ಲಿ ಮತ್ತೆ ಕೂಡಿಕೊಳ್ಳುತ್ತಾನೆ.

ನಾಟಕದ ಈ ಸಂಕ್ಷಿಪ್ತ ನಿರೂಪಣಾ ಕಥನವನ್ನು ಎಳೆಯ ಓದುಗರಿಗೆ ನಾಟಕದ ಪರಿಚಯಮಾಡಿಸಲು ಸಹಾಯವಾಗುವ ರೀತಿಯಲ್ಲಿ ರೂಪಿಸಲಾಗಿದೆ. ಇದನ್ನು ಮಕ್ಕಳು ಓದಿಕೊಳ್ಳಬಹುದು. ಇಲ್ಲವೇ ಈ ನಾಟಕವನ್ನು ಅವರಿಗೆ ಪರಿಚಯಮಾಡಿಸಲು ಇಷ್ಟಪಡುವ ತಂದೆತಾಯಿಯರು ಅವರಿಗೆ ಓದಿ ಹೇಳಬಹುದು. ಶಿಕ್ಷಕರು ಇದನ್ನು ತರಗತಿಯ ಸಂಪನ್ಮೂಲವೆಂದು ಕೂಡಾ ಬಳಸಿಕೊಳ್ಳಬಹುದು. ಓದಲು ಸುಲಭವಾಗಿರುವ ನಿರೂಪಣೆ ಮತ್ತು ವಿನೋದ ಶೈಲಿಯ ಚಿತ್ರಗಳು ಮಕ್ಕಳ ಆಸಕ್ತಿಯನ್ನು ಖಂಡಿತವಾಗಿಯೂ ಹಿಡಿದಿಟ್ಟುಕೊಳ್ಳುವುವು ಮತ್ತು ಅವರ ಓದಿನ ನೈಪುಣ್ಯತೆಯನ್ನು ಬೆಳೆಸುವುದು.


View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)